ಇವತ್ತು ಮೇ 5 . ಗೆಳೆಯೆರೆಲ್ಲ ಮತ ಚಲಾಯಿಸಲು ಆಚೆ ತೂರಿಕೊಂಡರೆ ನಾನು ಮಾತ್ರ ಮನೇಲಿ :( .ಈ ಸಲವಾದ್ರೂ ಮತದಾನದ ಗುರುತು ಪತ್ರ ಮಾಡಿಸಿಕೊಳ್ಳಬೇಕು ಅಂತ ಕೊನೆವರೆಗೂ ರಿಮೈನ್ದರ್ ಇಟ್ಕೊಂಡಿದ್ದೆ . ಆದ್ರೆ ಡೆಡ್ ಲೈನ್ ಮಿಸ್ ಆಯ್ತು. ಈ ವಿಷಯದಲ್ಲಿ ಈಗಲೂ ನನ್ನ ಮೇಲೆ ನನಗೆ ಕೋಪ ಇದೆ. ವೋಟಿಂಗ್ ಮಾಡದೆ ಇರುವ ನನಗೆ ಮುಂದಿನ 5 ವರುಷ ವ್ಯವಸ್ಥೆ ಬಗ್ಗೆ ಬೆರಳು ತೋರಿಸೋ ಹಕ್ಕಿಲ್ಲ. ಎನಿವೇ ಆಯ್ ಪ್ರಾಮಿಸ್ ಇದು ನನ್ನ ಕೊನೆಯ ಮಿಸ್. .
ವೋಟಿಂಗ್ ಬಗ್ಗೆ ನನ್ನ ಗೆಳೆಯರ ಜೊಷ್ ನೋಡಿ ಹೆಮ್ಮೆ ಆಯ್ತು. ಯಾವಾಗಲೂ ಈ ದಿನ ಟ್ರಿಪ್ ನೆಪ ಮಾಡಿಕೊಂಡು ಬೆಂಗಳೂರಿನಿಂದ ಹೊರಗಡೆ ಉಳಿಯೋ ಗ್ಯಾಂಗ್ ಈ ಸಲ ಕಣದಲ್ಲಿರುವ ಅಭ್ಯರ್ಥಿಗಳ ಬಗ್ಗೆ ಚರ್ಚಿಸುತ್ತಿರುವುದನ್ನು ಗಮನಿಸಿ ಹುಬ್ಬೆರಿಸಿದೆ. ವೊಟರ ಐ ಡಿ ಇಲ್ಲದೇನೆ ಇರೋ ನನಗೆ ಛಿ ಥೂ ಅಂತ ಉಗಿದು ನನ್ನ ಮೂಲೆಗುಂಪು ಮಾಡಿದ್ದೂ ಆಯ್ತು. . ಅವರ ಈ ವರ್ತನೆಗೆ ನನ್ನ ಫುಲ್ ಸಾತ್ ಇದೆ. ಪ್ರತಿಯೊಬ್ಬ ಪ್ರಜೆಗೂ ವೋಟಿಂಗ್ ಕಂಪಲ್ಸರಿ ಅನ್ನೋದು ಜಾರಿಗೆ ಬರಲೇ ಬೇಕು.
ನಮ್ಮ ಸದ್ಯದ ಬ್ರಷ್ಠ ವ್ಯವಸ್ಥೆ ನಮ್ಮನ್ನು ಜಾಗೃತ ಮಾಡಿದ್ದಂತೂ ಸತ್ಯ. ನಾವೆಲ್ಲ ನಮ್ಮ ನಾಳೆಯದಕ್ಕಾಗಿ ಚಿಂತಿಸುತ್ತಿರುವುದು ಒಳ್ಳೆಯ ಬೆಳವಣಿಗೆ . ಆದರೆ ಇದು ಬರೀ ಪ್ರಾರಂಭ . ಗುರಿ ತುಂಬಾ ದೂರವಿದೆ. ಅಂದ ಹಾಗೆ ಈ ಸಲದ ಚುನಾವಣೆಯ ಪ್ರಚಾರದ ಸಬ್ಯತೆ ನೊಡಿ ಖುಶಿಯಾಯ್ತು. ಚುನಾವಣೆ ಹೆಸರಿನಲ್ಲಿ ಬೀದಿ ಎಲ್ಲಾ ಬಿತ್ತಿ ಪತ್ರ ಗಳ ರಾಶಿ ಹರಡಿ ಧ್ವನಿ ವರ್ಧಕದ ಮೂಲಕ ಅರಚುತ್ತ ನಮ್ಮ ನೆಮ್ಮದಿ ಕದಡುತ್ತಿದ್ದ ಹಳೆಯ ಪದ್ದತಿಗೆ ತಿಲಾಂಜಲಿ ಹಾಡಿದ್ದಕ್ಕೆ ಹಾಟ್ಸ್ ಆಫ಼್ . ಜನರನ್ನು ತಲುಪಲು ಈ ಸಲ ಎಲ್ಲ ಪಕ್ಷಗಳು ಇ ಮಾಧ್ಯಮವನ್ನು ಚೆನ್ನಾಗಿ ಬಳಸಿಕೊಂಡಿವೆ. . ಫೆಸ್ ಬುಕ್ ನಲ್ಲಿ ಪಕ್ಷಗಳ ಭರವಸೆಯ ಜಾಹಿರಾತುಗಳಿಗೆ ಕೊರತೆಯಿಲ್ಲ. .
ಇನ್ನು ಮೇ 8 ಗೆ ಕಾಯುತ್ತಿದ್ದೆನೆ. . ನಮ್ಮನ್ನಾಳುವ ಪಕ್ಷ ಯಾವುದು ಅನ್ನೋ ಕುತೂಹಲ ಒಂದಾದರೆ, ಸರಕಾರ ರಚಿಸಲು ನಡೆಯುವ ಕಸರತ್ತು ಈ ಸಲ ಸುಲಭವಾಗಲಿ ಅನ್ನೋದು ಮತ್ತೊಂದು. ಎನಿವೇ ಕಾಲವೇ ಎಲ್ಲವನ್ನು ಹೇಳುತ್ತೆ.