Showing posts with label full stop. Show all posts
Showing posts with label full stop. Show all posts
Tagged under:

ಹ್ಯಾಪಿ ವೋಟಿಂಗ್ ಡೇ

ಇವತ್ತು ಮೇ 5 . ಗೆಳೆಯೆರೆಲ್ಲ ಮತ ಚಲಾಯಿಸಲು ಆಚೆ ತೂರಿಕೊಂಡರೆ  ನಾನು ಮಾತ್ರ ಮನೇಲಿ :( .ಈ ಸಲವಾದ್ರೂ ಮತದಾನದ ಗುರುತು ಪತ್ರ ಮಾಡಿಸಿಕೊಳ್ಳಬೇಕು ಅಂತ ಕೊನೆವರೆಗೂ ರಿಮೈನ್ದರ್ ಇಟ್ಕೊಂಡಿದ್ದೆ . ಆದ್ರೆ ಡೆಡ್ ಲೈನ್ ಮಿಸ್  ಆಯ್ತು.  ಈ ವಿಷಯದಲ್ಲಿ ಈಗಲೂ ನನ್ನ ಮೇಲೆ ನನಗೆ ಕೋಪ ಇದೆ. ವೋಟಿಂಗ್ ಮಾಡದೆ ಇರುವ ನನಗೆ ಮುಂದಿನ 5 ವರುಷ ವ್ಯವಸ್ಥೆ ಬಗ್ಗೆ ಬೆರಳು ತೋರಿಸೋ ಹಕ್ಕಿಲ್ಲ. ಎನಿವೇ ಆಯ್  ಪ್ರಾಮಿಸ್ ಇದು ನನ್ನ ಕೊನೆಯ ಮಿಸ್. .
ವೋಟಿಂಗ್ ಬಗ್ಗೆ ನನ್ನ ಗೆಳೆಯರ  ಜೊಷ್  ನೋಡಿ ಹೆಮ್ಮೆ ಆಯ್ತು. ಯಾವಾಗಲೂ ಈ ದಿನ ಟ್ರಿಪ್ ನೆಪ  ಮಾಡಿಕೊಂಡು  ಬೆಂಗಳೂರಿನಿಂದ ಹೊರಗಡೆ ಉಳಿಯೋ  ಗ್ಯಾಂಗ್ ಈ ಸಲ ಕಣದಲ್ಲಿರುವ ಅಭ್ಯರ್ಥಿಗಳ  ಬಗ್ಗೆ ಚರ್ಚಿಸುತ್ತಿರುವುದನ್ನು ಗಮನಿಸಿ  ಹುಬ್ಬೆರಿಸಿದೆ. ವೊಟರ  ಐ ಡಿ ಇಲ್ಲದೇನೆ ಇರೋ ನನಗೆ ಛಿ ಥೂ  ಅಂತ ಉಗಿದು ನನ್ನ ಮೂಲೆಗುಂಪು ಮಾಡಿದ್ದೂ ಆಯ್ತು. . ಅವರ ಈ ವರ್ತನೆಗೆ ನನ್ನ ಫುಲ್ ಸಾತ್ ಇದೆ. ಪ್ರತಿಯೊಬ್ಬ ಪ್ರಜೆಗೂ  ವೋಟಿಂಗ್  ಕಂಪಲ್ಸರಿ ಅನ್ನೋದು  ಜಾರಿಗೆ ಬರಲೇ ಬೇಕು.
ನಮ್ಮ ಸದ್ಯದ ಬ್ರಷ್ಠ ವ್ಯವಸ್ಥೆ ನಮ್ಮನ್ನು ಜಾಗೃತ ಮಾಡಿದ್ದಂತೂ ಸತ್ಯ. ನಾವೆಲ್ಲ  ನಮ್ಮ ನಾಳೆಯದಕ್ಕಾಗಿ ಚಿಂತಿಸುತ್ತಿರುವುದು ಒಳ್ಳೆಯ  ಬೆಳವಣಿಗೆ . ಆದರೆ ಇದು ಬರೀ ಪ್ರಾರಂಭ . ಗುರಿ ತುಂಬಾ ದೂರವಿದೆ.  ಅಂದ ಹಾಗೆ ಈ ಸಲದ ಚುನಾವಣೆಯ  ಪ್ರಚಾರದ ಸಬ್ಯತೆ ನೊಡಿ ಖುಶಿಯಾಯ್ತು.  ಚುನಾವಣೆ ಹೆಸರಿನಲ್ಲಿ ಬೀದಿ ಎಲ್ಲಾ  ಬಿತ್ತಿ ಪತ್ರ ಗಳ ರಾಶಿ ಹರಡಿ ಧ್ವನಿ ವರ್ಧಕದ ಮೂಲಕ ಅರಚುತ್ತ ನಮ್ಮ ನೆಮ್ಮದಿ ಕದಡುತ್ತಿದ್ದ ಹಳೆಯ ಪದ್ದತಿಗೆ ತಿಲಾಂಜಲಿ ಹಾಡಿದ್ದಕ್ಕೆ ಹಾಟ್ಸ್  ಆಫ಼್ . ಜನರನ್ನು   ತಲುಪಲು ಈ ಸಲ  ಎಲ್ಲ ಪಕ್ಷಗಳು ಇ  ಮಾಧ್ಯಮವನ್ನು  ಚೆನ್ನಾಗಿ ಬಳಸಿಕೊಂಡಿವೆ. . ಫೆಸ್ ಬುಕ್ ನಲ್ಲಿ ಪಕ್ಷಗಳ ಭರವಸೆಯ ಜಾಹಿರಾತುಗಳಿಗೆ ಕೊರತೆಯಿಲ್ಲ. . 
ಇನ್ನು  ಮೇ 8 ಗೆ ಕಾಯುತ್ತಿದ್ದೆನೆ. . ನಮ್ಮನ್ನಾಳುವ ಪಕ್ಷ  ಯಾವುದು ಅನ್ನೋ ಕುತೂಹಲ  ಒಂದಾದರೆ, ಸರಕಾರ ರಚಿಸಲು ನಡೆಯುವ ಕಸರತ್ತು ಈ ಸಲ ಸುಲಭವಾಗಲಿ ಅನ್ನೋದು ಮತ್ತೊಂದು.  ಎನಿವೇ ಕಾಲವೇ  ಎಲ್ಲವನ್ನು ಹೇಳುತ್ತೆ.
Tagged under:

ಮತ್ತೆ ಮರಳಿದ ಜಾತ್ರೆ ನೆನಪು

 
ಬೆಂಗಳೂರಿನ ಮಾಲ್ ನ ಗದ್ದಲಕ್ಕೂ ಹಳ್ಳಿಯಲ್ಲಿ ಜರಗುವ ಜಾತ್ರೆಯ  ಆರ್ಭಟಕ್ಕೂ ಅಜಗಜಾಂತರ ವ್ಯತ್ಯಾಸ. ಮಾಲ್ ಅಂದರೆ  ಥಟ್ಟನೆ ಇಣುಕೋದು  ಕಣ್ಣು ಕುಕ್ಕುವ ಲೈಟ್ ಗಳು, ಎತ್ತರದ ಕಾಂಕ್ರೀಟ್ ಬಿಲ್ಡಿಂಗ್, ಕೃತಕ ಹಂದರದಲ್ಲಿ  ಜೋಡಿಸಿದ ಬಣ್ಣ ಬಣ್ಣದ ಮಳಿಗೆಗಳು, ಕೃತಕ ತಂಪು ಗಾಳಿ, ಆಕಾಶವು ಬೀಳಲಿ ಮೇಲೆ ನಾನೆಂದು ಕೈ ಬಿಡೆನು ಹಾಡಿಗೆ ಪರ್ಫೆಕ್ಟ್  ಏಕ್ಸಾಂಪಲ್ಲು  ಅನ್ನೋ ತರಹ ಮೈ ಗೆ  ಮೈ ಲಗತ್ತಿಸಿ  ತಬ್ಬಿಕೊಂಡು ಹೆಜ್ಜೆ ಇಡುವ  ಜೋಡಿಗಳು. ..........
Tagged under:

ಆಹಾ! ನನ್ನ ಮದುವೆಯಂತೆ . . .


ನನ್ನಾಕೆ ಹೊಸ ಆಲ್ಬಮ್ ನ ಮುದುವೆ ಫೋಟೋ ನೋಡುತ್ತಾ ಮುಗುಳ್ನಗುತ್ತಿದ್ದಳು. ನಾನು ಮದುವೆಯಲಿ ಗತಿಸಿದ ಕೀಟಲೆ ಗಳನ್ನು ನೆನೆಯುತ್ತ ಅವಳ ಕಾಲೆಳೆಯುತ್ತಿದ್ದೆ.
Tagged under:

ಹಾಯ್.......


ದಿನವೂ ಬ್ಲಾಗಿಂಗ್ ಮಾಡಬೇಕು ಅಂತ ಕೂತಾಗಲೆಲ್ಲ ಬೇರೆ ಏನೋ ತಲೆ ಹರಟೆ ಕೆಲ್ಸಾ ಮಾಡ್ತಾ ಸಮಯ ನೂಕಿದ್ದು ಸಾಕಾಯ್ತು. ಮೇಲಾಗಿ ಸಮಯ ಸಿಕ್ತಿಲ್ಲ ಅನ್ನೋ ಸಬೂಬು ಬೇರೆ. ಹುಹ್
Tagged under:

The search is on! Bhagwaan Dhoondo


YOURS TRULY THEATRE
presents a play in English
Bhagwaan Dhoondo
the search is on...
A devised theatre performance!
Directed by Nandini Rao & Ranji David


DATE – 28th March 2010 | TIME – 7 pm | TICKETS – RS. 100/-
VENUE – ADA ranga mandira, JC road, next to townhall,
infront of Ravindra kalakshetra, corporation circle, Bangalore
VENUE MAP
from MG road - http://tinyurl. com/yf87amu
from kormanagala- http://tinyurl. com/yj84ba8

Exploring a journey in the city, in search of: a moment of happiness, never ending
quest of self identity, definition of success, a passion which keeps us ticking,
a calling we wait for, chasing dreams, in pursuit of truth, seeking the meaning of life.

This thought provoking play involves and engages you into a surreal world
which is visually striking, musically resonating and emotionally absorbing .
It resembles our lives in a city that we exist.
Bhagwaan Dhoondo is a play with many collages, many slices of our lives.

Online booking – indianstage. in and bookmyshow.com
Telebooking – 9845853093 | 9845243051
yourstrulytheatre@ gmail.com | www.yourstruly- theatre.com
Tagged under:

ಹಾವು ಏಣಿ ಆಟ ಆಡಿದೀರಾ !


ಬೆಂಗಳೂರಿನ ರಸ್ತೆ ಯಲ್ಲಿ ಸಿಗ್ನಲ್ ಬೊರ್ಡು ಗಳದೇ ಕಾರುಬಾರು. ರಸ್ತೆಯ ಬದಿಯಲ್ಲಿ ಗತ್ತಿನಿಂದ ರಸ್ತೆ ಇಣುಕುತ್ತಾ ನಿಲ್ಲುವ ಬೊರ್ಡುಗಳು ದಿನವೂ ಚಿನ್ಹೆ ಬದಲಿಸುತ್ತವೆ.ಇನ್ನು ವೀಕೆಂಡ್ ಗೆ ಮಾತ್ರ ಬೈಕ್ ತುಗೊನ್ಡು ಬೀದಿಗೆ ಇಳಿಯುವ ನನ್ನಂಥವರಿಗೆ ಒಳ್ಳೆ ಅಗ್ನಿಪರೀಕ್ಷೆ . ಅದೇ ಪೋಲೀಸ್ ರಿಗೆ ಹಣ ದೋಚಲು ಸಿಗುವ ಮತ್ತೊಬ್ಬ ಪೆಕರ.ಬೆಂಗಳೂರಿನ ರಸ್ತೆಗಳು ಹಾವು ಏಣಿ ಆಟದ ದಾರಿಯ ಹಾಗೆ. ಅಲ್ಲಲ್ಲಿ ಹಾವಿನತೆ ಟ್ರಾಫಿಕ್ ಪೋಲೀಸ್ ರೂ ಕಾಯುತ್ತಾ ಕುಳಿತಿರುವರು.
ಮೆಜೆಸ್ಟಿಕ್ ಹತ್ತಿರದ ಟೂ ವೇ ಇದ್ದ ರೋಡ್ ವನ್ ವೇ ಅಂತ ಗೊತ್ತಾಗಿದ್ದು ಯಮಲೋಕದ ಕಿಂಕರ ನಂತೆ ಕೈ ಬೀಸುತ್ತಾ ಟ್ರ್ಯಾಫಿಕ್ ಇನ್ಸ್‌ಪೆಕ್ಟರ್ ನನ್ನ ಬೈಕ್ ನ್ನ ನಿಲ್ಲಿಸಿದಾಗಲೆ .
" ಅರೆ! ಮೊನ್ನೆ ತಾನೆ ಈ ರೋಡ್ ಟೂ ವೇ ಆಗಿತ್ತು .ಈಗ ವನ್ ವೇ ನಾ .ಅಯ್ಯೋ ಗೊತ್ತಿರ್ಲಿಲ್ಲ ಸರ್ " ನನ್ನ ಮುಗ್ಧತೆ ಅವರಿಗೆ ತಿಳಿಯಬಹುದು ಅಂತ ಅಂದ್ಕೊಂಡಿದ್ದೆ .
" ಏನಯ್ಯಾ ಬಂಗಳೂರಿನಲ್ಲಿ ಬೆಳಗ್ಗೆ ಇದ್ದ ರೂಲ್ಸ್ ಸಂಜೆ ಇರಲ್ಲ ನೀನು ಮೊನ್ನೆ ಬಗ್ಗೆ ಮಾತಾಡ್ತೀಯಲ್ಲ ..ಸಾಕು ಫೈನ್ ಕಟ್ಟು .." ಕೈಯಲ್ಲಿದ್ದ ಬ್ಲ್ಯಾಕ್ ಬೆರೀ ಅದುಮುತ್ತ ಫೈನ್ ಲೆಟರ್ ಕಿತ್ತು ಕೊಟ್ಟ.ಶುಧ್ಧ ಕನ್ನಡದಲ್ಲಿ ಮಾತಾಡಿದರೆ ನಮ್ಮ ಹುಡುಗ ಏನೋ ತಿಳಿಯದೇ ತಪ್ಪು ಮಾಡಿದೆ ಅಂತ ಅನುಕಂಪ ಸಿಗಬಹುದೇನೋ ಅಂದುಕೊಂಡಿದ್ದೆ. ಪ್ರಯೋಜನವಾಗಲಿಲ್ಲ.ಫ್ರೆಂಡ್ ನ್ನ ಕಳಿಸೊಕೆ ಮೆಜೆಸ್ಟಿಕ್ ಬಂದಿದ್ದಕ್ಕೆ ಒಳ್ಳೆ ಶಿಕ್ಷೆ ಆಗಿತ್ತು.
"ನೀನಾದ್ರೂ ವನ್ ವೇ ಇರೋ ಆ ಮಹಾ ಮಾರಿ ಬೋರ್ಡ್ ನ ನೋಡಬಾರದಾ" ಫ್ರೆಂಡ್ ಮೇಲೆ ಹಿಡಿ ಶಾಪ ಹಾಕ್ತಾ ಬೈಕ್ ಏರಿದೆ.
ಅವತ್ತಿನಿಂದ ನಾನು ಡಿಸೈಡ್ ಮಾಡಿದ್ದು ಒಂದೆ ,ಮುಂದೆ ನೋಡದ್ದಿದ್ದರೂ ಪರ್ವಾಗಿಲ್ಲ ಅಕ್ಕ ಪಕ್ಕ ಬೋರ್ಡ್ ಗಳ ಮೇಲೆ ಕಣ್ಣು ಹಾಯಿಸಬೇಕು ಅಂತ.

ಮೊನ್ನೆ ರವಿವಾರ ಥಿಯೇಟರ್ ವರ್ಕ್‌ ಶಾಪ್ ಗೆ ಸರಿಯಾಗಿ 10 30 ಗೆ ಇರಬೇಕು ಅನ್ನೋದು ತಟ್ಟನೆ ತಲೆಗೆ ಫ್ಲ್ಯಾಶ್ ಆಗಿದ್ದು 9 30 ಗೆ ಎದ್ದ ಮೇಲೆ . ಅದು ದೂರದ ಇಂದಿರಾ ನಗರ. ಉಹ್! ಬೇಗ ಬೇಗ ರೆಡಿ ಆಗಿ ( ರವಿವಾರವೂ ಈ ಗೊಳು ತಪ್ಪಲಿಲ್ಲ) ಬೈಕ್ ಎರಿದೆ. ಬೆಂಗಳೂರಿನ ಹಾಟ್ ಪ್ಲೇಸ್ ಎಂ ಜಿ ರೋಡ್ ಪಾಸ್ ಆಗ್ತಿದ್ದೆ ..ಈ ಹಾಳು ಮೆಟ್ರೊ ವರ್ಕ್ ಎಲ್ಲವನ್ನು ಸ್ಲೋ ಮಾಡಿತ್ತು. ಮೆಟ್ರೋ ಕಂಬಗಳು ನುಂಗಿದ್ದ ಅರ್ಧ ರೋಡ್ ದಲ್ಲಿ ದೊಡ್ಡ ತಿರುವು ಹಾಕಿದ ಮೇಲೆ ಸಿಗ್ನಲ್ ಲೈಟ್ ಕಣ್ಣು ಮುಚ್ಚಾಲೆ ಆಡುತ್ತಾ ಲಗುಬುಗನೆ ರೆಡ್ ಆಯಿತು.ಅದಕ್ಕೂ ನನ್ನ ಮೇಲೆ ಕೋಪ . ಅರೆ ನನ್ನ ಪಕ್ಕದ ಬಸ್ಸು ಹಿಂದಿನ ಕಾರು ಯಾವುದೇ ಮುಲಾಜಿಲ್ಲದೇ ಮುಂದೆ ನುಗ್ಗಿದವು.

"ಈ ಸಿಗ್ನಲ್ ಕೆಲಸ ಮಾಡಲ್ವಾ ಅಥವಾ ಈ ಮೆಟ್ರೋ ವರ್ಕ್ ಸಲುವಾಗಿ ಟ್ರಾಫಿಕ್ ಪೋಲೀಸ್ ಯಾವುದೋ ಮೂಲೆಯಲ್ಲಿ ನಿಂತು ಕೈಯಿಂದ ಸನ್ನೆ ಮಾಡುತ್ತಾ ನಿಯಂತ್ರಿಸುತ್ತಿರುವನಾ. ಇವರೆಲ್ಲ ನುಗ್ಗುತ್ತಿರುವದನ್ನು ನೋಡಿದರೆ ಬಹುಶಹ ಸಿಗ್ನಲ್ ಸುಮ್ಮನೆ ಇರೋದು ಅನಿಸುತ್ತೆ"
ಮನಸ್ಸು ಥಿಂಕ್ ಮಾಡೋ ಹೊತ್ತಿಗೆ ನನ್ನ ಬೈಕ್, ಮಾಲೀಕನ ಇಚ್ಛೆ ಮೊದಲೇ ತಿಳಿದುಕೊ0ಡು ರೆಡ್ ಲೈಟ್ ಧಿಕ್ಕರಿಸಿ ರೋಡ್ ಕ್ರಾಸ್ ಮಾಡಿಯಾಗಿತ್ತು.

"ಓ ಭೇಷ್ ಡಿಯರ್ ನೀನು ನೊಡು ನನ್ನ ಪರ್ಫೆಕ್ಟ್ ಫ್ರೆಂಡ್" ಖುಷಿಯಿಂದ ಬೈಕ್ ಮುಂದಿನ ಧೂಳು ಒರೆಸುತ್ತಾ ರೇಸ್ ಮಾಡಿದೆ .ಪಕ್ಕದಲ್ಲಿ ಪಲ್ಸರ್ ನನಗಿಂತ ಮುಂದೆ ಹೋಗಿ ನನ್ನ ಮುಂದೆ ಬಂತು ನಿಂತಿತು.

ಟ್ರಾಫಿಕ್ ಪೋಲೀಸ್ ನನ್ನ ಅಡ್ಡಗಟ್ಟಿದ್ದ!!

ನನಗೆ ಏನು ತಿಳಿಯದೆ ಬೈಕನಿಂದ ಇಳಿದೆ .

"ಏನಯ್ಯಾ ರೆಡ್ ಲೈಟ್ ಕಾಣ್ಸಲ್ವಾ " ಪೋಲೀಸ್ ನಿಗೆ ಖುಷಿಯೋ ಖಿಷಿ ಸಿಕ್ಕ ಬಲಿಯನ್ನು ಬೇಟೆಯಾಡೋಕೆ.

"ಓಹ್ ಸರ್.. ಅಲ್ಲಿ ಸಿಗ್ನಲ್ ಇದೆಯಾ.ನಾನು ವರ್ಕ್ ಆಗಲ್ಲ ಅಂದುಕೊಂಡಿದ್ದೆ " ಗೊತ್ತಿತ್ತು ಜಾರಿಕೊಳ್ಳಲು ಸಾದ್ಯವಿಲ್ಲ ಅನ್ನೋದು.ಆದ್ರೆ ಪ್ರಯತ್ನ ಮಾಡೋದ್ರಲ್ಲಿ ತಪ್ಪೇನಿಲ್ಲ.

"ಹಾ ಹಾ.. ಒಳ್ಳೆ ಜೋಕು ಆಡ್ತೀಯಾ. ಅಷ್ಟು ದೊಡ್ಡ ಲೈಟ್ ಮಿನುಗೋದು ಕಾಣಿಸಲ್ವಾ" ಪೋಲೀಸ್ ನಿಗೆ ಖುಷಿಯಾಗಿತ್ತು ಬೆಳಗ್ಗೆ ಬೆಳಗ್ಗೆ ನೇ ಒಳ್ಳೇ ಸಂಪಾದನೆ ಶುರು ಅಂತ.

"ಆದ್ರೆ ನನಗಿಂತ ಹಿಂದೆ ಇದ್ದ ಬಸ್ಸು ಕಾರು ಎಲ್ಲ ಪಾಸ್ ಆಯ್ತಲ್ಲ..ಸೋ ನಂಗೆ ಏನು ಗೊತ್ತಾಗದೇ ಕ್ರಾಸ್ ಮಾಡಿದೆ ಸರ್" ನನ್ನಿಂದ ನೂರು ರೂಪಾಯಿ ಕೈ ಜಾರುವುದಂತೂ ಆ ಬ್ರಹ್ಮನಿ0ದಲೂ ತಪ್ಪಿಸಲು ಸಾದ್ಯವಿರಲಿಲ್ಲ .ನಾನು ಆಸೆ ಬಿಟ್ಟೆ.

"ಲೈಸೆನ್ಸ್ ತೋರಿಸು" ಕೈಯಲ್ಲಿನ ಬುಕ್ ಪೇಜ್ ತಿರುವುತ್ತಾ ಸಿಗ್ನಲ್ ಕ್ರಾಸ್ ಮಾಡಿದ ಫೈನ್ ಜೊತೆಗೆ ಬೇರೆ ಏನಾದ್ರೂ ಲೋಪ ಸಿಗುತ್ತಾ ನೋಡುತ್ತಿದ್ದ. ಫೈನ್ ಮೇಲೆ ಫೈನ್ ಕಟ್ಟಬಹುದಲ್ಲ.

"ಹ್ಮ್!! ಕೋರಮಂಗಲ ಲೈಸೆನ್ಸ್! ಕೋರಮಂಗಲದವರು ತಪ್ಪು ಮಾಡೋದು ಕಡಿಮೆ"

ಅಷ್ಟು ಅನ್ನೋದು ತಡ ನಾನು ಅದೇ ಅನುಕಂಪದ ಲಾಭ ಪಡೆಯೋಕೆ ಪ್ರಯತ್ನಿಸಿದೆ.
"ಭಲೇ ಕಿಲಾಡಿ ಕಣೋ ನೀನು.ಪ್ರಯತ್ನಿಸು ಬಿಡಬೇಡ" ಕುರಿ ಬಲಿ ಕೊಡೋದಕ್ಕಿನ್ತ ಮುಂಚೆ ಹಾರ ಹಾಕಿ ಪೂಜೆ ಮಾಡೋ ಥರ ಮನಸ್ಸು ನನ್ನ ಹುರುದುಂಬಿಸಿ ಅಖಾಡಕ್ಕೆ ನೊಕಿತು.

"ನಾನು ಸಹ ರೂಲ್ಸ್ ಅಂದ್ರೆ ರೂಲ್ಸ್. ಈ ಥರ ತಪ್ಪು ಮಾಡಲ್ಲ..ಇವತ್ತು ಏನೋ ನನ್ನ ಪಕ್ಕದ ಕಾರು ನಂಬಿ ದಾಟಿದೆ ಸರ್"

"ಹೋಗ್ಲಿ ಬಿಡು. 100 ರೂಪಾಯಿ ಬಿಚ್ಚು ಬೇಗ" ಫೈನ್ ಲೆಟರ್ ಹರಿಯದೆ ಹಣ ಕೇಳುವುದು ನೋಡಿದರೆ ಆತ ತನ್ನ ಜೇಬಿಗೆ ಇಳಿಸೊದು ಖಾತ್ರಿಯಾಯಿತು.
ಇನ್ನು ಆಗಲ್ಲ ಸುಮ್ಮನೆ ಹಣ ಕೊಟ್ಟು ಬೇಗ ಗುರಿ ಸೇರೋದು ಒಳ್ಳೆದು ಅಂತ ನನ್ನ ವಾಲೆಟ್ ಬಿಚ್ಚಿದೆ.

ಒಂಟಿ ನೋಟು ಅವಿತು ಕುಳಿತಿತ್ತು .ಎ ಟಿ ಎಮ್ ನಿಂದ ಹಣ ತಗೆಯೋದು ಮರೆತಿದ್ದೆ .

" ಸರ್ ನೋ ಮನೀ "
ಈ ಥರದ ನೆಪಗಳು ಪೋಲೀಸ್ ರಿಗೆ ಮಾಮೂಲಿ.ನನಗೆ ಹಣ ತರೋಕೆ ಕಳಿಸೊದು ಗ್ಯಾರಂಟಿ.ಅಕ್ಕ ಪಕ್ಕದಲ್ಲಿ ಯಾವುದಾದರೂ ಎ ಟಿ ಎಮ್ ಗಳು ಇವೆಯಾ ಸುತ್ತ ಮುತ್ತ ಕಣ್ಣು ಹಾಯಿಸಿದೆ.

"ಮೇಲೆ ಸಿಗ್ನಲ್ ಕ್ರಾಸ್ ಮಾಡಿ ಈಗ ಫೈನ್ ಕಟ್ಟೋಕೆ ಹಣವೂ ಇಲ್ಲ ಅಂತಿಯಲ್ಲ.ಎಷ್ಟು ಇದೆ ನಿನ್ ಹತ್ರ ಈಗ"

"10 ರೂಪಾಯಿ"

ಬೆಳಗ್ಗೆ ಎದ್ದು ಯಾರ ಮುಖ ನೋಡಿದೆನೋ ಆತ ಮನಸ್ಸಿನಲ್ಲೆ ಬಯ್ದುಕೊಳ್ಳುತ್ತಿದ್ದ ಅನಿಸುತ್ತೆ.
ಸ್ವಲ್ಪ ಹೊತ್ತು ಯೋಚಿಸಿ ನನ್ನ ಹತ್ತಿರ ಇದ್ದ 10 ರೂಪಾಯಿಯನ್ನು ಮಾರ್ಕೆಟ್ ನಲ್ಲಿ ಚಾಲ್ತಿ ಇಲ್ಲದ ನೊಟು ನೊಡುವ ಹಾಗೆ ದುರುಗುಟ್ಟಿದ . ಅವರದ್ದು ಏನಿದ್ದರೂ 50 100 ರೂಪಾಯಿಯ ವ್ಯವಹಾರ. ಏನೋ ಲೆಕ್ಕ ಹಾಕುತ್ತಿರುವಂತೆ ಕೆಲ ಕಾಲ ಹಾಗೆ ನಿಂತ.
ನಾನು ಸಾದ್ಯ ಆದಷ್ಟು ಪೇಚೆ ಮುಖ ಮಾಡಿ ನಿಂತಿದ್ದೆ. ಥಿಯೇಟರ್ ಆರ್ಟಿಸ್ಟ್ ಆಗಿರೊದು ಈಗ ಕೆಲಸಕ್ಕೆ ಬಂದಿತ್ತು.

"ಆಯ್ತು ಅದೇ 10 ರುಪೀಸ್ ಕೊಡು .ಚೆನ್ನಾಗಿ ಮಾತಾಡ್ತೀಯಾ "
ಈ ಥರ ಸಿಗ್ನಲ್ ಕ್ರಾಸ್ ಮಾಡಬೇಡ ಅಂತ ವೇದವಾಕ್ಯ ಹೇಳ್ತಾನೇ ಅಂದುಕೊಂಡೆ ಆದರೆ ಆ ಮಾತೇನು ಹೊರಬರಲಿಲ್ಲ. ಎಲ್ಲರೂ ಸಿಗ್ನಲ್ ಚಾಚೂ ತಪ್ಪದೇ ಪಾಲಿಸಿದರೆ ಅವರ ಜೇಬಿಗೆ ಕತ್ತರಿ ಅಲ್ವಾ.

"ತುಗೊಳ್ಳಿ" ನಾನು ಉಳಿದ 10 ರೂಪಾಯಿಯನ್ನು ಕೊಟ್ಟು ಬರಿದಾದ ವಾಲೇಟ್ ಜೇಬಿಗೆ ತುರುಕಿದೆ.

"ನೀನು ಕಾಫೀ ಟೀ ಗೆ ಎನ್ ಮಾಡ್ತೀಯಾ. ನಿನ್ನ ವಾಲೇಟ್ ಖಾಲಿ ಆಯ್ತಲ್ಲಾ"

ಮುಂದೆ ಎ ಟಿ ಎಮ್ ನಲ್ಲಿ ತಗೊಂಡ್ರೆ ಆಯ್ತು ಅಂತ ಹೇಳಬೇಕು ಅಂತ ಮಾಡಿದ್ದೆ .

"ಹೋಗ್ಲಿ ಬಿಡಿ ಸರ್.ಸಿಗ್ನಲ್ ಕ್ರಾಸ್ ಮಾಡಿದ ತಪ್ಪಿಗೆ ನಂಗೆ ಪನಿಶ್ ಮೆಂಟ್ " ಮುಗುಳ್ನಗುತ್ತಾ ಬೈಕೆ ಏರಿದೆ.

"ಇದೊಂದು ಸಲ ಬಿಡ್ತೀನಿ ಮುಂದಿನ ಸಲ ಹೀಗೆ ಸಿಕ್ಕರೆ ಫೈನ್ ಖಂಡಿತ. ತುಗೊ ನಿನ್ನ 10 ರೂಪೀಸ್ " ಜೇಬು ಸೇರಿದ ಹಣ ವಾಪಸ್ ನನ್ನ ಕಡೆ ಮುಖ ಮಾಡಿತ್ತು. ಜೇಬಿನಲ್ಲಿದ್ದ ನೂರು ರೂಪಾಯಿಯ ಕಂತುಗಳ ಮದ್ಯೆ ನನ್ನ ಹತ್ತು ರೂಪಾಯಿ ಹೆದರಿತ್ತೆನೊ.ಆಗಲೆ ಜಾಸ್ತಿ ಮುದುಡಿತ್ತು.

" ಓ ಥ್ಯಾಂಕ್ಸ್ ಸರ್ " ನನ್ನನು ನಾನೇ ನಂಬದಾದೆ.

10 ರೂಪಾಯಿ ಜೇಬಿಗಿಳಿಸಿ ಮುಗುಳ್ನಗುತ್ತಾ ಜಾಗ ಕಿತ್ತೆ .
ಮರಳಿ ವಾಪಸು ನೋಡುವ ಗೋಜಿಗೂ ಹೋಗಲಿಲ್ಲ.ಕ್ಷಣ ಮಾತ್ರದಲ್ಲಿ ಹಾವು, ಏಣಿಯಾಗಿದ್ದು ಅಚ್ಚರಿ ಮೂಡಿಸಿತ್ತು.
Tagged under:

weird exams and wayward distractions..



My way paused!.This time the reason was reasonable !.what else, exams were nearing and the deadline cut down to 3 days! Its not so unusual for me..Last sem I had the same pinch.but my goodness, the score was beyond expected .
I afraid that my complacency shouldn't affect this sem. I don't believe in LUCk too.Luck kicks only when effort follows.. so true..
This time my efforts were NIL. I was finding hard to tie my mind to the book.What should I do ya..I easily dwell in silence and lost in my world..cant help! Dreams peep to head unveiling tons of colorful thoughts..I am weird.. isn't it? I am in a space of my own.
Finally I got 3 day off for studies..Amit n Mohan too got 3 day off.We stuck in our usual adda Mohan's house..

lil study..lotz of sense ( non!) talks..tomato maggy..night outs..old papers..guessing..skipping..all the exam gimmicks were played one by one..We enjoyed the pain..I smelt the fun of back to college..

The final days were at the door.Its usual to see some guys reading in last minute,turning their notes( yes they prepared notes!).some were referring 2 to 3 books for specific topics! We awesome three left many topics in single book!.hu hu.
Time bucked us badly.. Both the Saturdays exams were too tough..I trust GOD this time to push me to 2 digits! please dear ... Sundays exams were not bad..
I renewed my old promise to read regularly for final exams to new dates.fooooo..
Its been two weeknds from the deadly midsem exams.I yet to open the books..whenever I think of books my inner spirit whispers "arre..pagal hai kya..final exams are stil far. start reading from March.."..yes I listen ma mind..simple way to be happy..lol..
Tagged under:

ವೀಕೆಂಡ್ ಎಂಬ ಮಹಾಮಾಯೆ


ಹ್ಯಾಪೀ ವೀಕೆಂಡ್ :) ಬಣ್ಣ ಬಣ್ಣದ ಮೇಲ್ ಇನ್ ಬಾಕ್ಸ್ ಲ್ಲಿ ಕಾಣಿಸಿಕೊಂಡಾಗ ಪಕ್ಕದ ಕ್ಯಾಲಂಡರ್ ನೋಡಿದೆ ..ಹೌದು ..ನಿಜವಾಗ್ಲೂ ಶುಕ್ರವಾರನೆ .. ಮನಸ್ಸಿನಲ್ಲೇ ಮುಗುಳ್ನಗುತ್ತಾ ವರ್ಕ್ ಮೇಲೆ ಕಾನ್ಸೆಂಟ್ರೇಟ್ ಮಾಡಲು ಪ್ರಯತ್ತಲೆ ಇದ್ದೆ . ಶುಕ್ರವಾರದ ನಶೆಯೇ ಹೀಗೆ .. ಎರಡು ದಿನದ ರಜೆಯ ಮಜಾದ ಕನಸು ಕಾಣುತ್ತಾ ಇಡೀ ದಿನ ನುಂಗಿ ಹಾಕಿ ಬಿಡುತ್ತೆ. ಹ್ಯಾಪೀ ವೀಕೆಂಡ್ ಮೇಲ್ ವೈರಸ್ ಥರಾ ಒಬ್ಬರಿಂದ ಒಬ್ಬರಿಗೆ ಹರಡಿ ಕ್ಷಣ ಮಾತ್ರದಲ್ಲಿ ಎಲ್ಲರ ತಲೆಯನ್ನು ಬಿಸೀ ಮಾಡಿಬಿಡುವುದು. ಬಹುಶಹ ಕೋಡ್ ಬರೆಯುವಾಗಲು ಇಷ್ಟು ತಲೆ ಉಪಿಯೋಗಿಸೋಲ್ಲ ಅನಿಸುತ್ತೆ. ಒಟ್ಟಿನಲ್ಲಿ ಕೆಲಸಿಕ್ಕಿಂತ ವೀಕೆಂಡ್ ಪ್ಲಾನಿಂಗ್ ನಲ್ಲೇ ಶುಕ್ರವಾರ ಗುಳುಮ್ .

" ಲೊ ನಂಗೂ ಎರಡು ಪೆಗ್ ಕಣೋ ..ಲಾಸ್ಟ್ ಟೈಮ್ ಥರಾ ಈ ಸಲ ಒಂದೇ ತoದ್ರೆ ನೀನು ಕುಡಿದಂಗೆ " ಆಫೀಸ್ ಕೋಲೀಗ್ ಮೊಬೈಲ್ ಲೀ ಕಿರುಚಿತ್ತಿದ್ದ.. ಫ್ರೈಡೇ ಗುಂಡು ಪಾರ್ಟಿಯ ತಯಾರಿ ಅನಿಸುತ್ತೆ . ಫ್ರೆಂಡ್ಸ್ ನೆಟ್‌ವರ್ಕ್ ಲ್ಲಿ ಆಗಲೇ ವೀಕೆಂಡ್ ಬಗ್ಗೆ ನಾನಾ ತರಹದ ಯೋಜನೆಗಳ ಪಟ್ಟಿ ಸಿಧ್ಧ ಆಗಿರುತ್ತೆ.ಎಲ್ಲರಿಗೂ ಕಾಲ್ ಮಾಡಿ ವೀಕೆಂಡ್ ನ ಎರಡು ದಿಂದ ಹಬ್ಬಕ್ಕೆ ಪ್ಲಾನ್ ರೆಡೀ ಮಾಡೊದು ಪ್ರಾಜೆಕ್ಟ್ ಪ್ಲ್ಯಾನಿಂಗ್ ಗಿಂತ ಕಷ್ಟ . ಆದರೆ ಎಲ್ಲರೂ ಈ ವಿಷಯದಲ್ಲಿ ಪ್ರಬುದ್ಧರು . ಹೊಸ ಹೊಸ ಐಡಿಯಾ ಗಳು ಪ್ಲ್ಯಾನಿಂಗ್ ನಲ್ಲಿ ಧುಮುಕೋದಂತೂ ಸತ್ಯ.
ತಿಂಗಳಿನ ಎಲ್ಲ ವೀಕೆಂಡ್ಗೂ ಊರಿಗೆ ಓಡಲು ಟಿಕೆಟ್ ಬುಕ್ ಮಾಡುವ ನನ್ನ ಕೋಲೀಗ್ ಒಬ್ಬಳು ಪ್ರತಿ ಶುಕ್ರವಾರ ಅಮ್ಮನ ಜೊತೆ ಹೇಳೋದು ಒಂದೇ ಮಾತು "ಹ್ಮ್ ಅಮ್ಮ ಬೇಗ ಬಿಡ್ತೀದೀನಿ .. ಡೊಂಟ್ ವರೀ " .ಶುಕ್ರವಾರ ಮನೆಗೆ ಓಡೊ ಖುಷಿಯಲ್ಲಿ ಅಗಲವಾಗುವ ಅವಳ ಮುಖ ಸೋಮವಾರ ಸಪ್ಪೆಯಾಗಿರುತ್ತದೆ . ಹೆ ಹೆ ..
ಪಕ್ಕದ ತುಮಕುರಿಗೆ ಒಡಿ ಹೋಗುವ ಇನ್ನೊಬ್ಬ ಫ್ರೆಂಡ್ ಶುಕ್ರವಾರವೇ ಗಂಟು ಮೂಟೆ ಕಟ್ಟಿ ಸಂಜೆಯ ವರೆಗೆ ವೇಟ್ ಮಾಡ್ತಾಳೆ .ನನಗೇನೂ ಅವಳು ಶುಕ್ರವಾರ ಇಡೀ ದಿನ ವರ್ಕ್ ಮಾಡ್ತಾಳೆ ಅನಿಸಲ್ಲ .
ರೂಮ್ ಲ್ಲಿ ಬೇಜಾರು ಕಣೋ ..ಆಫೀಸೆ ಗೆ ಬಂದು ಯೂ ಟ್ಯೂಬ್ ಲ್ಲಿ ಒಳ್ಳೇ ಮೂವೀ ನೋಡಬಹುದು ಅಂತ ಎರಡು ದಿನವೂ ಆಫೀಸ್ ಗೆ ಬರೋರು ಇದ್ದಾರೆ.ಇನ್ನು ಕೆಲವು ಚಲುವೆಯರು ಆಗಲೇ ಎಕ್ಸ್ ಪೈರ್ ಆಗಿರುವ ಒಂದು ವಾರದಸ್ಟು ಹಳೆಯದಾದ ತಮ್ಮ ಲುಕ್ ನ್ನ ಹೊಸ ವಾರಕ್ಕೆ ನವೀಕರಿಸಲು ಬ್ಯೂಟೀ ಪಾರ್ಲರ್ ಲಿಸ್ಟ್ ಗೂಗಲ್ ನಲ್ಲಿ ಹುಡುಕ್ತಾ ಶುಕ್ರವಾರ ನೂಕುವರು.ಅರ್ರೆ!! ನಿದ್ರೆಗಿಂತ ಬೇರೆ ಮಜ ಉಂಟಾ ಎರಡೂ ದಿನವೂ ನಿದ್ರೆಗೆ ಶರಣಾಗುವರೂ ಸಾಕಷ್ಟು.
ಕೆಲವರು ಹೊಸ ಗರ್ಲ್ ಫ್ರೆಂಡ್ ಹುಡುಕೊಕೆ ವೀಕೆಂಡ್ ಮೀಸಲಿಟ್ಟರೆ ಕೆಲವರು ಅವಳನ್ನ ಓಲೈಸುವುದಕ್ಕೆ ಎರಡು ದಿನದ ದಿನಚರಿ ರೆಡೀ . ಹುಡುಗಿ ಗೆ ತನ್ನ ಬಾಯ್ ಫ್ರೆಂಡ್ ನ್ನ ಜೊತೆ ಕನಸಿನ ಲೋಕ ಕ್ಕೆ ಜಾರೋಕೆ ಇನ್ನೋದು ವೀಕೆಂಡ್ ರೆಡೀ. ಇನ್ನು ಕೆಲವರಿಗೆ ವೀಕೆಂಡ್ ಅನ್ನೋದು ಗರ್ಲ್ ಫ್ರೆಂಡ್ ಬಾಯ್ ಫ್ರೆಂಡ್ ಯಾವುದೇ ರಗಳೆ ಇಲ್ಲದೇ ತಮ್ಮ ಫ್ರೆಂಡ್ಸ್ ಜೊತೆ ಹರಟೆ ಹೋಡೇಯೋಕೆ ಮತ್ತೊಂದು ರಜಾ. ಲೈಫ್ ಪಾರ್ಟ್ನರ್ ಹುಡುಕೋ ದರಲ್ಲಿ ಮಗ್ನ ಆಗಿರೋ ಫ್ರೆಂಡ್ಸ್ ರದು ಇನ್ನೊಂದು ಗೋಳು. ವೀಕೆನ್ಡ್ ಬಂದ ತಕ್ಷಣ ಏನೇನೋ ನೆಪ ಮಾಡಿಕೊಂಡು ಊರಿಗೆ ಲಗ್ಗೆ ಇಡೊದು ಅವರಿಗೆ ಕಾಮನ್. ಫ್ರೆಂಡ್ಸ್ ರ ಪಿ ಜೆ ಗಳಿಗೆ ಆಹಾರವಾಗದೆ ಇರೋದಕ್ಕೆ ಅವರಿಗೆ ಇರೋದು ಇದೊಂದೇ ದಾರಿ..ಹೆ ಹೆ.
ಇನ್ನು ವೀಕೆಂಡ್ ನಲ್ಲಿ ಬೆಂಗಳೂರಿನ ಶಾಪ್ ಗಳ ಬಗ್ಗೆ ನೋ ಕಮೆಂಟ್ಸ್ . .ತಮ್ಮ ಎಲ್ಲ ಬೆಲೆಗಳನ್ನು ಗಗನಕ್ಕೆ ಏರಿಸಿ ಎರಡು ದಿನದಲ್ಲೇ ವಾರದ ಗಳಿಕೆ ಗಳಿಸುವ ಚಾಲಾಕಿಗಳು .ಸೋಮವಾರದಿಂದ ಶುಕ್ರವಾರದ ವರೆಗೆ ಫಾಸ್ಟ್ ಫಾರ್‌ವರ್ಡ್ ನಂತೆ ಓಡುವ ಎಲ್ಲ ದಿನಗಳು ವೀಕೆಂಡ್ ಬಂದ ತಕ್ಷಣ ನಿಲ್ಲುತ್ತವೆ.
ಕೊನೆಗೆ ನನ್ನ ವೀಕೆಂಡ್ ದಿನಚರಿ ನಾ.... ಸಿಂಪಲ್ ..ಸ್ವಲ್ಪ ಬ್ಲಾಗಿಂಗ್ .. ಸ್ವಲ್ಪ ಥಿಯೇಟರ್ ..ಡ್ರಾಮಾ ..ಸ್ವಲ್ಪ ಗಿಟಾರಿಂಗ .ಜಾಸ್ತಿ ತರಲೆ ಮತ್ತೆ ಬ್ಲಾ ಬ್ಲಾ ..ಕಾನ್ಫಿಡೆನ್ಶಿಯಲ್ !.ಹೀ...
ಎರಡು ದಿನ ನಾನಾ ರೂಪಗಳನ್ನ ಧರಿಸಿ ಕುಣಿದು-ಕುಪ್ಪಳಿಸಿದ ಮೇಲೆ ಕೊನೆಗೆ ಟೈಮ್ ನೊಡಿದ್ರೆ ರವಿವಾರ ಸಂಜೆ . ಅಯ್ಯೋ ವೀಕೆಂಡ್ ಇನ್ನೂ ಸ್ವಲ್ಪ ಎಳಿಬಾರದಾ .ದೇವರಿಗೆ ಸ್ಮಾಲ್ ರಿಕ್ವೆಸ್ಟ್ ಹಾಕೋದರಲ್ಲೇನೋ ತಪ್ಪಿಲ್ಲ . ಹ್ಯಾರಿ ಪಾಟರ್ ಮೂವೀ ಥರಾ ಮ್ಯಾಜಿಕ್ ಆದ್ರೆ .
ಹುಹ್..ಎರಡು ದಿನದ ಲೋಕ ನೋಡ್ತಾ ನೋಡ್ತಾ ಮಾಯ .ಮತ್ತೆ ಮುಂದಿನ ವೀಕೆಂಡ್ ವರೆಗೆ ಕಾಯಬೇಕು .ಬೆಂಗಳೂರಿನ ತುಂಬೆಲ್ಲ ಹುಚ್ಚು ಮನಸನ್ನ ಕುಣಿಸೋಕೆ .. ಗೆಳೆಯರ ಪಿ ಜೆ ಗಳಿಗೆ ಹೊಟ್ಟೆ ಹುನ್ನಾಗಿಸುವಷ್ಟು ನಗೊಕೆ ..ಪ್ರಬುಧ್ಧ ದಿನಚರಿ ಯನ್ನು ಸ್ವಲ್ಪ ಏರು ಪೆರು ಮಾಡಿ ಅಶಿಸ್ತಿನ ಲೋಕದಲ್ಲಿ ಜಾರೋಕೆ ಹುಚ್ಚು ಮನಸಿನ ಹತ್ತು ಮುಖಗಳನ್ನು ನೊಡೊಕೆ ಇನ್ನೂ 5 ದಿನ ಕಾಯಬೆಕು . ಬೇಜಾರಿನಿಂದಲೇ ಸೋಮವಾರದ ದಿನ ಪ್ರಾರಂಭ.ಮತ್ತೆ ಹ್ಯಾಪೀ ವೀಕೆಂಡ್ ಮೇಲ್ ಗೋಸ್ಕರ ದಿನಗಳ ಎಣಿಕೆ ಶುರು.ವೀಕೆಂಡ್ ಎಂಬ ಮಹಾ ಮಾಯೆಗೆ ಬಲಿಪಶು ಆಗದೆ ಇರೋರು ಉಂಟಾ..
Tagged under:

ಒಂದು ಮನಸಿನ ನೂರು ಕನಸು


ಮನಸೇ ಹೀಗೆ, ಕೆಲವು ಸಲ ಇದ್ದಕ್ಕಿದ್ದಂತೆ ಮೌನವಾಗಿ ಒಂಟಿತನ ಬಯಸುತ್ತೆ.ಕ್ಷಣ ಮಾತ್ರದಲ್ಲಿ ಮೌನ ಮುರಿದು ಬಯಕೆಗಳ ಚಿತ್ತಾರ ತೆರೆದಿಡುತ್ತೆ. ಮನಸಿನ ಅಂಗಳದಲ್ಲಿ ನಾನಾ ಕನಸುಗಳನ್ನ ಬಿತ್ತಿ ದಿನವೂ ಕನಸಿನಲ್ಲಿ ಮೂಡುವ ಆ ಕನಸಿನ ಕುವರಿಯ ಕಾಣಲು ಹಾತೊರಿಯುತ್ತೆ .ಬಿಸಿಲ್‌ಗುದುರೆಯಂತೆ ಆಗಾಗ ಮನಸಿನಲಿ ಮಿಂಚಿ ಮರೆಯಾಗಿ ಹೋಗುವ ಆ ಮುಗುಳ್ನಗೆಯ ಜೊತೆ ಭಾವನೆಗಳ ಹಂಚಿಕೊಳ್ಳಲು ಆಸೆ ಪಡುತ್ತೆ..
ಆ ತುಂಟ ಬಯಕೆಗೆ ಈಗ ಹಲವು ವರುಷ ಆಯುಷ್ಯ.ಹಿಂದೆ ಚಿಕ್ಕದಾಗಿ ಮನದ ಯಾವುದೋ ಮೂಲೆಯಲ್ಲಿ ಕಾಣಿಸಿಕೊಂಡ ಆ ಕನಸು ಈಗ ಮನಸಿನ ಒಡೆಯ.ತನಗೆ ಇಚ್ಛೆ ಬಂದಂತೆ ಮನಸನ್ನು ಕುಣಿಸುವ ಸೂತ್ರಧಾರ .ಹೇಗೋ ಅದಕೆ ಮುದ್ದು ಮಾಡಿ ಮುನಿಸಿಕೊಂಡ ಮನಸನು ಮತ್ತೆ ಸಹಜ ಸ್ಥಿತಿಗೆ ತರೋಕೆ ಅಬ್ಬಾ ಕೆಲ ಸಮಯವೆ ಬೇಕು ..ಹುಚ್ಚು ಅಲ್ವಾ ..
ಪ್ರತಿ ಮುಗ್ಧ ಮನಸಿಗು ಈ ಪಿಡುಗು ಇದ್ದದ್ದೆ... ಸಂಗಾತಿಯನ್ನು ನಾವೇ ಹುಡುಕಿಕೊಳ್ಳಬೇಕಾ...ಅಪ್ಪ ಅಮ್ಮನ ಮೇಲೆ ಜವಾಬ್ಧಾರಿ ಹೊರಿಸಬೇಕಾ ಅಥವಾ ಇದೆಲ್ಲದರ ಪರಿವೆ ಇಲ್ಲದೇ ಲೈಫ್ ಅನ್ನು ಬಂದ ಹಾಗೆ ಸ್ವೀಕರಿಸುತ್ತಾ ಕನಸುಗಳ ಮೇಲೆ ಕನಸ ಹೆಣೆಯುತ್ತಾ ಸಾಗಬೇಕಾ...ನಾನು ಕೊನೇ ಸಾಲಿಗೆ ಸೇರುವ ಪಡ್ಡೆ ಹುಡುಗ.ಆಗಾಗ ನನ್ನವಳ ಜೊತೆ ಮನಸಿನ್ನಲ್ಲೇ ಹರಟೆ ಹೊಡೆಯುತ್ತಾ ಕನಸಿನಲ್ಲೇ ಅರಮನೆ ಕಟ್ಟುವ ದೊಡ್ಡ ಲೂಸು. ಹೆ ಹೆ..ಯಾಕೆ ಲೈಫ್ ಲ್ಲಿ ರಿಸ್ಕ್ ತುಗೊಳ್ಳೋದು .ನಾವೇ ಹುಡುಕೊಂಡ್ರೆ ಆಯ್ತಪ್ಪಾ .ನಾನು ಹುಡುಗ ಆಗಿದ್ರೆ ಆಗಲೇ ಹುಡುಕೋಕೆ ಶುರು ಮಾಡಿರ್ತಿದ್ದೆ ಅಂತ ನನ್ನ ಫ್ರೆಂಡ್ ಒಬ್ಬಳು ಆಗಾಗ ನಂಗೆ ಕಿವಿಮಾತು ಹೇಳ್ತಿದ್ರೆ ನಾನು ಹ್ಮ್ ಅಂತ ಹೇಳಿ ಜಾರಿಕೊಳ್ಳೋದೇ ಹೆಚ್ಚು.
ದಿನನಿತ್ಯ ನೂರಾರು ಕಣ್ಣುಗಳು ಮನಸಿನ ಮಾತು ಬಿಂಬಿಸುತ್ತ ಎದುರಾಗುತ್ತವೆ .ಕೆಲವು ತನ್ನ ಸಂಗಾತಿಯ ಹುಡುಕಾಟದಲ್ಲಿ ಮೈ ಮರೆತರೆ ಇನ್ನು ಕೆಲವು ಕಣ್ಣುಗಳು ನುಂಗುವಂತೆ ದುರುಗುಟ್ಟುತ್ತವೆ.ಕೆಲವು ಯಾವುದೋ ಲೋಕದ ಕನಸಿನಲ್ಲಿ ಜಾರಿಕೊಂಡಿದ್ದರೆ ಮತ್ತೆ ಹಲವು ಗತಿಸಿದ ವೇದನೆಯಿಂದ ಹೊರಬರಲು ಹೆಣಗಾಡುತ್ತಿರುತ್ತವೆ.ಇವೆಲ್ಲದರ ಮದ್ಯೆ ನನ್ನ ಕನಸಿನ ಕಣ್ಣುಗಳು ಸನಿಹ ಬಂದರೂ ಗೋಚರಿಸದೇ ಹೋಗಬಹುದು.ಮತ್ತೊಂದು ನೊಟ ಗುರುತಿಸಿದರೂ ನನಗೆ ಅರಿವಿಗೆ ಬಾರದೇ ಹೋಗಬಹುದಲ್ಲ .ಯಾವುದಕ್ಕೂ ಲಕ್ ಬೇಕು ಅನ್ನೋ ನನ ಫ್ರೆಂಡ್ ಹೇಳೋ ಮಾತು ನಿಜವೇ ಅಲ್ವಾ. .ಕೆಲವು ಮನಸುಗಳು ನನ್ನ ಇಷ್ಟ ಪಟ್ಟು ಸನಿಹಕೆ ಬಂದರೂ ನಾನು ಅವರಲ್ಲಿ ಕಂಡಿದ್ದು ಗೆಳೆತನ ..ಮುದ್ದು ಪ್ರೀತಿಯ ಅಕ್ಕರೆ ... ಲೈಫ್ ಅಂದ್ರೆ ಮೂವೀ ಅಲ್ಲ ಕಣೋ ಕನಸಿನ ಹುಡುಗಿ ಅನ್ನೋದು ಕನಸಲ್ಲೇ ಮಾತ್ರ .. ಜೀವನದಲ್ಲಿ ಸಿಗಲ್ಲ ಅನ್ನೋ ನನ್ನ ಫ್ರೆಂಡ್ ನಿಗೆ ನಾನು ತೋರಿಸ್‌ಬೇಕು ಅವಳು ಸಿಕ್ಕೇ ಸಿಗ್ತಾಳೆ ಅಂತ.
ನನಗೆ ಅವಳೇ ಬೇಕು ತಂಗಾಳಿ ಯ ರಾತ್ರಿಯಲಿ ನನ್ನ ಜೊತೆ ಕುಳಿತು ಚುಕ್ಕಿ ಎಣಿಸೋಕೆ .. .ನನ್ನ ಕನಸಿಗೆ ಜೀವ ತುoಬೊಕೆ .. ನನ್ನ ಕಲ್ಪನೆಯ ಜಗತ್ತಿಗೆ ಹೆಸರು ಕೊಡೋಕೆ.. ನನ್ನ ಮುಗ್ಧಮನಸಿನ ಅಂಗಳದಲಿ ಚಿತ್ತಾರ ಬಿಡಿಸೊಕೆ.ಅವಳೇ ಬೇಕು ದಟ್ಟ ಕಾಡಿನ ಮದ್ಯೆ ಉರಿ ಬೆಂಕಿಯ ಪಕ್ಕ ಕುಳಿತು ಹೇಳುವ ನನ್ನ ಹಾಡಿಗೆ ಕೇಕೆ ಹಾಕೋಕೆ.ಹ್ಮ್ .ಅವಳೇ ಬೇಕು.

ಮೈ ಡಿಯರ್ ಗಾಡ್ ಕಾಲದ ದಾರಿಯ ಯಾವುದೋ ನಿಲ್ದಾಣದಲ್ಲಿ ನನಗಾಗಿ ಕಾಯ್ದು ಕುಳಿತಿರುವ ಅವಳಿಗೆ ನನ್ನಡೆ ಬರಲು ದಾರಿ ತೋರಿಸ್ತೀಯ ಅಥವಾ ಈ ಜೀವನದ ಗಾಲಿಯನ್ನು ಸ್ವಲ್ಪ ಜೋರಾಗಿ ತಳ್ಳಿ ಅವಳಿರುವ ನಿಲ್ದಾಣಕ್ಕೆ ಹೋಗಿ ನಿಲ್ಲಿಸ್ತೀಯ ಪ್ಲೀ..ಸ್ !!
Tagged under:

"wanna see it again"



Its a team of creativity called improvisation
lively charming lovely gang of YT section

Golden pasts are picked from audience memory cane
and redo it on the stage with great perfection

old is painted new in colorful pane
Spices of music added in every lane

love stumbles to see herself in new vein
sadness creeps for being so harsh in history line

even the past stuns to see its own presentation
being portraited so neatly with live narration

Congrats YT..we r all proud of your creation
I wanna see it again n again

clap clap!!
Tagged under:

YT SiGNS..cheering smiles.sparkling eyes...pampering experience

I never celebrated any day so special like this.During my school days children's day was fun..sweets..and half day holiday..
I grew up forgetting all these days.Now I remember only the days registered as holidays in my office calender.
When YT decided to launch SIGNS on the occasion of children's day i also was excited like other actors.Yeh tying kids to stick on their seats for complete two hours is not small job..
It was cloudy morning.We all made it on time.At sharp 10 30 tweeting muttering kids started filling up the spaces in big auditorium.I was curious to see the kiddos faces and their excitement for the show.Just managed to peep through green room.Innocent cute smiles were eager to watch the show.They were in their own world imagining and adjusting to new place.
Show started with cheering claps and ended with big applaud.it was the day child within me came out..my kiddish mind rolled out on the stage and we made the difference to 600 kids..It was d day I felt I would have been child always..

"ನನ್ನೊಳಗಿನ ಮಗುವು ಅಂದು ಇಣುಕಿ ನೋಡಿತ್ತು
ನೂರಾರು ಮನಸುಗಳ ಮುಗ್ಧ ನಗುವಿನ ಗತ್ತು
ಹರೆಯದ ಪರೆದಯ ಸರಿಸಿ ನನ್ನೊಳಗೆ ಏರಿಸಿತು ಬಾಲ್ಯದ ಮತ್ತು
ಕುಣಿದು ಕುಪ್ಪಳಿಸಿ ಹಾಡು ನಲಿದ ಎಲ್ಲವೂ ಅಂದು ಕಿನ್ನರ ಲೋಕದ ಸೊತ್ತು
ಈಗಲೂ ಮನಸು ಬಯಸುತಿದೆ ಪದೇ ಪದೇ ಅದೇ ಮಾತು
ಮುಗ್ಧ ಮನಸಿನ ಮುಗುಳು ನಗೆ ನನ್ನೊಳಗಿರಲಿ ಯಾವತ್ತೂ "

Read the show review in http://bangalore.citizenmatters.in/articles/view/1549-yours-truly-childrens-play-review

Here are some pics..Try to figure me out.. he he ..












Tagged under:

my first public show ...Children's day special..



lemmi give u short intro abt YT group..

Yours Truly is a Bangalore based theatre group. We experiment with various forms
and formats of theatre (http://www.yourstruly-theatre.com)

Signs' is an initiative started by Yours Truly Theatre with an attempt to reach out to children who have limited quality entertainment. These interactive theatre performances will give children a well deserved break from cartoon channels and video games.

I'm excited for my first public show....wawwwww..many grounds to celebrate...first public show..Children's day... cute sweet smilies ...

uh..cant wait...help me to pull d days..come on!!
Tagged under:

yuppeee..its my birthday


9th October !! I smiled at calender wondering how soon these 12 pages turned back!!It was the same day last year was curious n anxious for the coming year with loads of dreamZ.Whole year was full of colorful emotions.Most of it was filled with joyous n achievement.It looked like I was in a circus jumping in different jumbled roles son-brother-friend-techie-artist-musician and off all better human being.Hope I gave justice to all of them.
Love u Mom n Dad..u blessed me to live my dream and I knew I am one more helpless techie staying far leaving u all in ur own world.I am doing my best to fill my space in u.Be my back always.
Thank u my brother-bhabhi for being my virtual parents and leading me to a brighter light.U are my models.
Hats off to my cute sweet friends for adding spices to my life.I m not in me without u all.Be the same always.
Finally how can I forget my endless dreamZ and cheerfull spirit.U are my life..I am just a flesh without u.Keep fueling me.

"The whole year went so neat
offcourse credit goes to my dream n spirit
I looked up to express my gratitude to it
it was busy crafting better route
full of dreams with colourfull lit
restless..lively..amazed at its purport
and I saluted to its dancing upbeat
it turned down and wishd with smiling sweet
happy birthday my dear!"