Tagged under:

' ಗರ್ಲ್ ಫ್ರೆಂಡ್ ' ಎಂಬ ಮಾಯಾಜಿಂಕೆ ಬೆನ್ನತ್ತಿ ....


ಕಾಲೇಜ್ ಲೈಫ್ ಲ್ಲಿ ಗರ್ಲ್ ಫ್ರೆಂಡ್ ಬೇಕು ಅಂತಾನೆ ಅವಳಿಗಾಗಿ ಹುಡುಕಿ ಕೊನೆಗೆ ಏನು ಇಲ್ಲದೆನೇ ತಮ್ಮ ಕಲಿಕೆ ಮುಗಿಸೋ ಎಷ್ಟೋ ಗೆಳೆಯರಲ್ಲಿ ನಾನೂ ಒಬ್ಬ :( .ಯಾವುದಾದ್ರೂ ಲವ್ ಸ್ಟೋರಿ ಮೊವೀ ನೋಡಿದಾಗಲೊಮ್ಮೆ ನಂಗೆ ಒಬ್ಬಳು ಗರ್ಲ್ ಫ್ರೆಂಡ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಯಾವಾಗಲೂ ಅನಿಸುತ್ತಿತ್ತು.
ಹೆ ಹೆ !! ಹುಡುಗಿಯರ ಸಂಖ್ಯೆಗೇನೋ ಕೊರತೆಯಿಲ್ಲ ಬಿಡಿ ಅವರ ಹಿಂದೆ ಬಿದ್ದು ಅವರನ್ನ ಇಂಪ್ರೆಸ್ ಮಾಡೊವಸ್ಟು ಪೇಷನ್ಸ್ ಇಲ್ಲ ಅಷ್ಟೆ :D.ಇನ್ನು ನನ್ನ ಫ್ರೆಂಡ್ಸ್ ಯಾರಾದ್ರನ್ನು ನೋಡಿ ಕಲ್ಕೊಬೇಕು ಅಂದ್ರೆ ನನಗೆ ಸಿಗೋ (ಆಗೋ ) ಫ್ರೆಂಡ್ಸ್ ರದೂ ಅದೆ ಕಥೆ.ಹುಡುಗಿ ಬಗ್ಗೆ ಮಾತಾಡು ಅಂದ್ರೆ ಎರಡ ಘಂಟೆ ಭಾಷಣಾ ಬಿಗೀತಾರೆ.ಆದರೆ ಯಾವುದಾದ್ರೂ ಹುಡುಗಿ ಪಕ್ಕದಲ್ಲಿ ನಿಂತರೆ ಮಾತಾಡೋ ರೀತೀನೆ ಬದಲಾಗುತ್ತೆ (ಭಯಾರೀ ಅಷ್ಟು !!).
ಅಂದ ಹಾಗೆ ಗರ್ಲ್ ಫ್ರೆಂಡ್ಸ್ ಇದ್ದವರೂ ಎಂಜಾಯ್ ಮಾಡ್ತಾರೆ ಅಂತೀರಾ.ನನಗೇನೋ ಹಾಗೆ ಆನಿಸೋದಿಲ್ಲ.ವಾರದ ಕೊನೆ ಬಂದ್ರೆ ಸಾಕು ಎಲ್ಲ ಫ್ರೆಂಡ್ಸ್ ಬಳಗ ಬಿಟ್ಟು ಬೈಕ್ ತಗೊಂಡು ( ಬೈಕ್ ಇರ್ಲೇಬೇಕು ) ಅವಳ ರೂಮ್ ಮುಂದೆ ನೀಲ್ಬೇಕು ಅವಳಣ್ನ ಪಿಕ್ ಅಪ್ ಮಾಡೋಕೆ ..ಅಲ್ಲಲ್ಲಾ ಜೋಬು ಖಾಲಿ ಮಾಡಿಸಿಕೊಳ್ಳೋಕೆ.ಆಮೇಲೆ ನಮಗೆ ವಾಪಸ್ ಕಾನ್ಸೋದು ರಾತ್ರೀನೇ (ಅದೂ ರಾತ್ರಿ ಬೇಗ ಬಂದ್ರೆ).ಅಯ್ಯೋ ಇದೆಲ್ಲ ನಮಗೆ ಆಗೋಲ್ಲ ಬಿಡಿ ಗರ್ಲ್ ಫ್ರೆಂಡ್ ಇರದೇ ಇರೋದೇ ವಾಸಿ ( ನರಿ ದ್ರಾಕ್ಷಿ ಹಣ್ಣು ಸಿಗಲಿಲ್ಲ ಅಂದಾಗ ಅದು ಹುಳಿ ಅಂದುಕೊಂಡಾಗಾಯ್ತು ನಮ್ಮ ಕಥೆ ).
ನನ್ನ ಇಂಜನಿಯರಿಂಗ್ ಟೈಮ್ ಲ್ಲಿ ರೂಮ್ ಪಕ್ಕ ಒಬ್ಬ ಮೆಡಿಕಲ್ ಸ್ಟುಡೆಂಟ್ ಇದ್ದ.ಆತ ದಿನಾಲು ಬೇರೆ ಬೇರೆ ಹುಡುಗೀ ಜೊತೆ ಸುತ್ತಾಡ್ತಾ ಇರೋದನ್ನ ನೋಡಿ ದಂಗಾಗಿದ್ದೆ .ಅವನೂ ಸಹಾ ದಿನಾಲು ಸಂಜೆ ಹುಡುಗಿ ಜೊತೆ ಸುತ್ತಾಡಿದ್ದನ್ನ ವರ್ಣಿಸಿ ಹೇಳ್ತಿದ್ದ( ಬಹುಶಃ ನನ್ನ ನೋಡಿ ಬಕರಾ ಅಂದುಕೊಂಡಿರ್ಬೇಕು !!).ಈಗಲೂ ಆ ದಿನಗಳನ್ನು ನೆನೆಸಿಕೊಂಡರೆ ನಗು ಬರುತ್ತೆ .
ನಾನು ಪಿ ಯು ರೆಸಿಡೆನ್ಷಿಯಲ್ ಕಾಲೇಜ್ ನಲ್ಲಿ ( ಸ್ಟ್ರಿಕ್ಟ್ಲೀ ಬಾಯ್ಸ್ ಕಾಲೇಜ್ ) ಓದುತ್ತಿದಾಗ ನನ್ನ ಗೆಳೆಯರಿನ್ದ ಹುಡುಗೀರ ಬಗ್ಗೆ ಬಣ್ಣ ಬಣ್ಣದ ಕಥೆಗಳು ಸಿಗುತ್ತಿದ್ದವು.ನನಗೆ ಕೇಳೊಕೆ ಫುಲ್ಲ್ ಖುಷಿ .. ಹ್ಮ್ :) ಹುಡುಗೀರು ಇರೋದೇ ಬಣ್ಣ ಬಣ್ಣದ ಕಥೆಗಳನ್ನ ಸೃಷ್ಠಿ ಮಾಡೊಕೆ !!
ದಿನವೂ ತನ್ನ ಹುಡುಗಿ ಬಗ್ಗೆ ಹೇಳುತ್ತಿದ್ದ ನನ್ನ ರೂಮೀ ಒಂದು ಸಲ ಗೊಳೋ ಎಂದು ಅಳೊಕೆ ಶುರು ಮಾಡಿದ .
"ಯಾಕೋ ಏನಾಯ್ತು? ಅಪ್ಪ ಅಮ್ಮ ರ ನೆನಪಾಯ್ತಾ" ಮೋಸ್ಟ್ಲೀ ಹೋಮ್ ಸಿಕ್ ಇರಬಹುದು ಅಂತ ಅಂದ್ಕೊಂಡಿದ್ದೆ .

" ಇಲ್ಲ ಕಣೋ ನನ್ನ ಗರ್ಲ್ ಫ್ರೆಂಡ್ ಬೇರೆಯವನನ್ನಾ ಲವ್ ಮಾಡ್ತಾ ಇದಾಳೊ,ನಾನು ಕಾಲ್ ಮಾಡಿದ್ರೆ ರಿಸೀವ್ ಮಾಡ್ತಾ ಇಲ್ಲ ,ಆಮೇಲೆ ನನ್ನ ಫ್ರೆಂಡ್ ನ್ನ ವಿಚಾರಿಸಿದೆ.ಆಗ ಗೊತ್ತಾಯ್ತು ಅವಳು ಬೇರೆಯವನ ಜೊತೆ ಸುತ್ತಾಡ್ತಾ ಇದಾಳೆ ಅಂತಾ ".ನನಗೆ ಅವನ ಮಾತು ಕೇಳಿ ನಗಬೇಕೋ ಅಳಬೆಕೋ ಗೊತ್ತಾಗಲಿಲ.
ಬಹುಶಃ ಇವನು ಇಲ್ಲಿ ಬಂದ ಮೇಲೆ ಅವಳಿಗೆ ಖರ್ಚು ಮಾಡಿ ತೀನಿಸೋರು ಯಾರು ಇಲ್ಲ್ಲಾ ಅದಕ್ಕೆ ಬೇರೆಯವನನ್ಣ ಹಿಡಿದಿರಬೇಕು :).

"ಲೇ ಅವಳು ಇಲ್ಲದಿದ್ರೆ ಮತೊಬ್ಬಳು ಸಿಗ್ತಾಳೆ ಬಿಡು" ನಾನೇನು ನೂರಾ ಎಂಟು ಹುಡುಗೀರನ್ಣ ಮೇಂಟೇನ್ ಮಾಡ್ತಾ ಇರೋ ತರಹ ಅವನ ಸಂತೈಸಿದೆ .

ಆಗ ಸಂಜೆ ಆದ ಮೇಲೆ ತಕ್ಷಣ ಎಲ್ಲರೂ ಮ್ಯಾಥ್ಸ್ ಬುಕ್ ಹಿಡಿದುಕೊಳ್ಳೋರು .ಯಾಕೆ ಅಂತೀರಾ .ಮ್ಯಾಥ್ಸ್ ನಲ್ಲಿ ಡೌಟ್ ಹುಡುಕೋಕೆ .ಡೌಟ್ ಸಿಗದಿದ್ರೂ ಅದನ್ನು ಸೃಷ್ಠಿಸಿ ಸರ್ ಮನೆಗೆ ಒಡ್ತಾ ಇದ್ದರು .ಹೆ ಹೆ !!.ಅಯ್ಯೋ ಎಷ್ಟು ಒಳ್ಳೇ ಹುಡುಗರು ಅಂತ ಅನ್ದುಕೊಬೆಡಿ !! ಸರ್ ಇಡೀ ದಿನಾ ಕಾಲೇಜ್ ನಲ್ಲಿ ಇದ್ದಾಗ ಒಬ್ಬರೂ ಅವರ ಹತ್ರ ಹೋಗ್ತಿರ್ಲಿಲ್ಲ.ಒಮ್ಮೆಲೇ ಸಂಜೆ ಆದ ಮೇಲೆ ಎಲ್ಲರಿಗೂ ಡೌಟ್ ಗಳೆ ಡೌಟುಗಳು .
ಯಾಕಿರಬಹುದು ಅಂತಾ ನೀವು ತಲೆ ಕೆಡಿಸ್ಕೋಗಿಂತ ಮುಂಚೇನೆ ಹೇಳ್ತೀನಿ ಬಿಡಿ ... ಸರ್ ಮಗಳನ್ನ ( ಸೂಪರ್ ) ನೋಡೋಕೆ ..ಪಾಪ ಸರ್ ಗೆ ಕೊನೇವರೆಗೂ ಗೊತ್ತಾಗಲಿಲ್ಲ.. ಗೊತ್ತಾಗದಿದ್ದುದು ಒಳ್ಳೆಯದೇ ಆಯ್ತು .ಯಾಕೆ ಅಂದರೆ ನಾನೂ ಒಂದೆರಡು ಸಲ ಅವರ ಮನೆಗೆ ಸುಳ್ಳು ಡೌಟ್ ನೆಪ ಮಾಡುಕೊಂಡು ಹೋಗಿದ್ದೆ!!
ಇನ್ನು ಬೆಂಗಳೂರು ಎಂಬ ಮಾಯಾ ನಗರಿ ಗೆ ಬಂದ ಮೇಲೆ ಗರ್ಲ್ ಫ್ರೆಂಡ್ ಮಸ್ಟ್ ಆಂಡ್ ಶುಡ್ ಇರಲೇಬೇಕು ಅಂತಾ ತೀರ್ಮಾನಿಸಿದೆ ( ಹೇಗೋ ಅಪ್ಪ ಅಮ್ಮ ನ್ನ ಬಿಟ್ಟು ತುಂಬಾ ದೂರ ಇದೀವಿ .ಯಾರು ನಮ್ಮ ನ್ನು ನೋಡಲ್ಲಾ ಬಿಡಿ )ಹೇಗೋ ನನ್ನ ಗ್ರಹಚಾರಕ್ಕೆ ಯಾವ ಒಳ್ಳೇ ಹುಡುಗೀನು ಸಿಗಲಿಲ್ಲ ( ಎಲ್ಲರೂ ಕೆಟ್ಟ ಹುಡುಗೀರಾ ಅಂತಾ ಕೆಳ್ಬೆಡಿ ...ನನಗೆ ಸಿಗಲಿಲ್ಲ ಅಲ್ಲಾ ಅದಕ್ಕೆ ಅವರು ಒಳ್ಳೆಯವರಲ್ಲ ಅಂದುಕೊಂಡೆ ಅಸ್ಟೆ ..ಗೊತ್ತಲ್ಲಾ ನರಿ ಕಥೆ )ಮೊನ್ನೆ ಆಫೀಸಿನಲ್ಲಿ ಒಳ್ಳೇ ಸುಂದರ ಸುಸಂಕೃತ ಹುಡುಗೀನ ನೋಡಿದೆ ..ಅವಳು ಯಾರು ಅಂತಾ ನನ್ನ ಫ್ರೆಂಡ್ ನ್ನ ವಿಚಾರಿಸಿದ್ರೆ ಗೊತ್ತಾಯ್ತು ಅವಳು ಮ್ಯಾರೀಡ್ ಅಂತಾ !! ಇಲ್ಲಿ ನಾನು ಮೆಚ್‌ಕೊಳ್ಳೋ ಹುಡುಗೀರೆಲ್ಲ ಮ್ಯಾರೀಡೆ !! ಯಾರೋ ನನಗಿಂತಾ ಮುಂಚೇನೆ ಕಣ್ಣ ಹಾಕಿ ಸಕ್ಸೆಸ್ಸ ಆಗವರೇ ಅಲ್ವಾ !!!ಒಮ್ಮೆ ನಮ್ಮ ಆಫೀಸಿನ ಕೆಳಗಿನ ಫ್ಲೋರ್ ನಲ್ಲಿ ಒಬ್ಬಳು ಅನ್ ಮ್ಯಾರೀಡ್ ಹುಡುಗೀಯ ಪರಿಚಯವಾಯ್ತು ..ಈ ಹುಡುಗಿ ಯಾರು ಎಲ್ಲಿಯವಳು ಅಂತಾ ನನ್ನ ಫ್ರೆಂಡ್ ನ ಹತ್ರಾ ಕೇಳಿದ್ರೆ ಅವನು ಲೇ ಮಗನೆ ಅವಳನ್ನು ನಾನು ಪ್ರೀತಿಸ್ತಾ ಇದೀನೋ..ಅವಳು ನನ್ನ ಕಾಲೇಜ್ ಮೆಟ್ ಅಂದಾ .
ಓ ಇಂಥಾ ಹುಡುಗರಿಗೆ ( ಅವನೋ ಪೆಕರಾ ತರ ಇದ್ದಾ ಬಿಡಿ ) ಇಂಥಾ ಹುಡುಗಿ ಸಿಕ್ತಾಳಲ್ಲಾ ಅಂತಾ ಆ ದೇವರಿಗೆ ಮನಸಿನಲ್ಲೇ ಶಪಿಸುತ್ತಾ "ಮತ್ತೆ ನೀನು ಅವಳ ಜೊತೆ ಸುತ್ತಾಡೋದನ್ನ ನಾನು ನೋಡೇ ಇಲ್ಲಾ "
"ಅಯ್ಯೋ ಅದನ್ನೇನು ಕೇಳ್ತೀಯ ಬಿಡು ನಾನು ಫೈನಲ್ ಸೆಮ್ ನಲ್ಲಿ ಇದ್ದಾಗ ಅವಳಿಗೆ ಲವ್ ಲೆಟರ್ ಕೊಟ್ಟಿದ್ದೆ"
"ಓ ಮುಂದೆ !! "ನಾನು ಹಿಂತಹ ವಿಷಯಗಳನ್ನು ಕೇಳೋಕೆ ಸ್ವಲ್ಪ ಜಾಸ್ತೀನೆ ಮುಂದು ...ಯಾಕಂದ್ರೆ ನಾನು ಪ್ರ್ಯಾಕ್ಟಿಕಲ್ ಆಗಿ ಯಾರಿಗೂ ಲವ್ ಲೆಟರ್ ಕೊಟ್ಟಿರದಿದ್ರೂ ಮತ್ತೊಬ್ಬರಿಗೆ ಹುರುದುಂಬಿಸೊದರಲ್ಲಿ ನಂಬರ್ 1 !!!

" ಅವಳು ಎರಡು ಮೂರು ದಿನಾ ಆದ್ರೂ ರಿಪ್ಲೈ ಮಾಡಲಿಲ್ಲಾ "'

" ಓ ಸುಮ್ಮನಿದ್ದಾಳೆ ಅಂದ್ರೆ ಒಪ್ಪಕೊಂಡಿರ್ಬೆಕಲ್ವಾ "

" ಇಲ್ಲಾ ಕಣೋ ..ಆಮೇಲೆ ನಾನೇ ಹೋಗಿ ಅವಳನ್ನು ಕೇಳಿದೆ ಅವಳು ಅದನ್ನು ರಿಜೆಕ್ಟ್ ಮಾಡಿದ್ಲು ..ಯಾಕೆ ಗೊತ್ತಾ "

"ಯಾಕೆ" ಓ ರಿಜೆಕ್ಟ್ ಅನ್ನೋ ವರ್ಡ್ ಕೇಳಿದ ತಕ್ಷಣ ಖುಷಿ ಆಯ್ತು :) ..ಸಾರೀ ಫ್ರೆಂಡ್ ..ಸರ್ವೈವೆಲ್ಲ್ ಆಫ್ ದ್ ಫಿಟೆಸ್ಟ್ ಅನ್ನೋ ಡಾರ್ವಿನ್ ನಿಯಮ ಗೊತ್ತಲ್ಲ :).

"ನಾನು ಬರೆದ ಲವ್ ಲೆಟರ್ ನಲ್ಲಿ ನನ್ನ ಅಕ್ಷರ ಸರೀ ಇಲ್ಲ ಅಂತೆ "

ಅವನ ಆವಾಂತರ ನೋಡಿ ( ಪೇಚು ಮುಖ) ನನಗೆ ನಗು ತಡೆಡುಕೊಳ್ಳಲಾಗಲಿಲ್ಲಾ :)

" ಹಂಗಾದ್ರೆ ಲೆಟರ್ ಪ್ರಾಕ್ಟೀಸ್ ಮಾಡ್ತಾ ಇದೀಯಾ ಅನ್ನು "

" ಅಯ್ಯೋ ಇಲ್ಲಾ ..ಈ ಸಲ ಲವ್ ಲೆಟರ್ ಪ್ರಿಂಟ್ ಹಾಕೊಂಡು ಕೊಡಬೇಕು ಅಂತಾ ಅಂದುಕೊಂಡಿದೀನಿ " ಅಂದಾ.ನಾನು ಅವನ ಪ್ರಯತ್ನಕ್ಕೆ ಶುಭ ಹಾರೈಸಿದೆ.
ಬಹುಶಃ ಹುಡುಗೀ ಸಿಗಬೇಕು ಅಥವಾ ಫ್ರೆಂಡ್ ಆಗಬೇಕು ಅಂದರೆ ಎರಡು ಮೂರು ತಿಂಗಳು ಸತತ ಪರಿಶ್ರಮ ಪಡಬೇಕು ಅನ್ನೋ ಪಾಠ ಮಾತ್ರಾ ಕಲಿತೆ .ಇನ್ನೊಬ್ಬ ಫ್ರೆಂಡ್ , ಹುಡುಗಿ ಸಿಕ್ಕ ತಕ್ಷಣ ಈಗ ಸಿಗೋದೇ ಅಪರೂಪ .ಯಾವಾಗ್ ನೊಡಿದ್ರು ಕಾಲ್ ಲ್ಲಿ ..ಇಲ್ಲಾಂದ್ರೆ ಹೊರಗಡೆ..ನೋಡಿ ,ಒಬ್ಬಳು ಹುಡುಗಿ ಎಂಟ್ರೀ ಲೈಫ್ ನ್ನ ಎಸ್ಟು ಚೇಂಜ್ ಮಾಡುತ್ತೆ .. ಹಳೇ ಫ್ರೆಂಡ್ಸ್ರಿಗೆಲ್ಲ ಗೋತಾ!!.

ಕೊನೆಗೆ ನಾನು ಲಕೀ ಕಣ್ರೀ ..ಏನು ಪರಿಶ್ರಮ ಪಡದೇ ನನಗೆ ಒಳ್ಳೇ ಹುಡುಗೀ ಸಿಕ್ಲು .ಮೊದಲ ಡೇಟ್ ಲ್ಲೆ ಇಬ್ಬರೂ ಒಳ್ಳೇ ಮೂವೀ ಗೆ ಹೋಗಬೇಕು ಅಂತ ಡಿಸೈಡ್ ಮಾಡಿದ್ವಿ .ಆದರೆ ಈ ಮಳೆ ಹಾಳಾದ ಟೈಮಲ್ಲೇ ಬಂತು .ಈ ಜೋರು ಮಳೆ ನಮ್ಮ ಪ್ಲಾನು ಹಾಳು ಮಾಡ್ತಾಲ್ಲಾ ಎಂದು ಅಂದು ಕೊಳ್ತಾ ಅಲ್ಲೇ ಸಮೀಪದ ಚೇರ್ ಒದ್ದೇ.
"ಲೇ ಯಾಕೂ ನನ್ನನ್ಣ ಓದೀತಿದೀಯಾ" ನನ್ನ ಪಕ್ಕಾ ಮಲಗಿದ್ದ ನನ್ನ ರೂಮ್ ಮೆಟ್ ಸಿಟ್ಟಿನಿಂದ ಬಯ್ತಿದ್ದ .ಕಣ್ಣು ತಗೆದು ನೋಡಿದ್ರೆ ಅದೆ ಹಾಳು ಮುಖಾ ( ನನ್ನ ರೂಮ್ ಮೆಟ್ ನದು ).ಪಾಪ ಅವನೂ ಸಹ ತನ್ನ ಹುಡುಗೀ ಜೊತೆ ಕನಸು ಕಾನ್ತಾ ಇದ್ದಾ ಅಂತಾ ಕಾಣ್ಸುತ್ತೆ .ಅವನಿಗೆ ಸಾರೀ ಕಣೋ ಅಂತಾ ಹೇಳಿ ಮತ್ತೆ ನಿದ್ರೆಗೆ ಹೋದೆ .

25 comments:

Rakesh Pawali said...

Sooper guru sooper ..!

Anup said...

mind blowing stuff.. d best thing i can suggest u is to publish ur autobiography...!! i ll b d first person to buy it for sure..gr8 narration

Sudhir said...

Rakesh,
Thnak u very much..

Anup,
heege odutta iri..thanks :)

Unknown said...

Wonderful... simply splendid.... u r sure to go places buddy!!!

Patkar said...

I loved the narration. Simply superb.

Roopa said...

Toooooooooooooooo goooooood, chenagi bardidira..... :),

Roopa

Shrinivas sonnad said...

barediruva reeti tumbane INTERESTING ide. Shirshike kooda channagide.

Sudhir said...

Chandan , Patkar, Shrini n Roops
nimm comments nodi khushi aaytu.. it already boosted me to blog down more..yeh...keep reading :)

Unknown said...

hi super aagi baradidiya kanu
really mind blowing

Sudhir said...

thank u Suman..heege odutta iru :)

Anonymous said...

hey sudhir....
really superb yar...i was laughing while reading this...hinge baritiru...k..odaak majjaa bartaiti...dat too u hav written in kannada...very nice...

smitha said...

hey sudhir....
really superb yar...i was laughing while reading this...hinge baritiru...k..odaak majjaa bartaiti...dat too u hav written in kannada...very nice...

Shweta said...

sudhir anna hi.....
your "MY flYing colourS" is very nice....
i enjoyed while i was reading..
and keep writng..

chinni chikka said...

chennagide.....chennagide maga.....hinge barita iru.....

Sudhir said...

Shweta, Chinni and Smita,
Thank u for reading.. read my other blogs also :)

Unknown said...

heyyy! dis is too-oo much ha!! don't comment about girls in dis manner ok??!! all d girls r not d same! ninge e tharad mentality irodikene ninge innu ond hudginu sikkilla!!! [;)]

Sudhir said...

@Yash
ha ha.. truth is always bitter :D ..keep reading

Unknown said...

kharene sooooooooooooooper blog sudhir..its real thing whats happening in the repesent world.... good keep it up...

Sudhir said...

hi Smita,
Dhanyavadagalu :)

Unknown said...

lee katarnaak aite lee... hinga baritaa iru....

Sudhir said...

Thanks le Mantu..read other blogs also

Shweta said...

nice.... :-):-)

Sudhir said...

@Shweta,
Thank u

Rashmi Patil said...

yogaraj bhat movie dialogs thara annistu. somehow i felt like golden star Ganesh is explaining his feelings :). nim bareyo styly kannadada "oh manase" magazine nalli baro articles thara ide. tumba chennagi barediddeeri.

Sudhir said...

@Rashmi
he he..Thanks Rashmi. . This is my first blog which inspired for rest of the blogs :)