Tagged under:

ನೆನಪುಗಳ ಕಂತೆಯಿಂದ ...ಅಮೇರಿಕಾ ಪಯಣ



ಅಮೇರಿಕದಲ್ಲಿ ಕಳೆದ ಅನುಭವ ಹಿತವಾಗಿತ್ತು.ಅವರ ಸಂಸ್ಕೃತಿ, ದಿನಚರಿ ಎಲ್ಲವೂ ಡಿಫರೆಂಟ್. ಒಟ್ಟಿನಲ್ಲಿ ಮನಸ್ಸಿನಲ್ಲಿ ಹಾಯಾಗಿ ಉಳಿಯೊ ಸಾಕಷ್ಟು ಸಿಹಿ ಕ್ಷಣಗಳನ್ನು ಹೊತ್ತುಕೊಂಡು ವಾಪಸ್ ಬಂದೆ.
ಈಗ ಒಂದೊಂದಾಗಿ ಬಿಚ್ಚಿ ಆ ಗಳಿಗೆಗಳನ್ನು ಮೆಲಕುತ್ತ ಖುಷಿ ಪಡುತ್ತಿರುವೆ =D>.

ಅಪ್ಪ, ಅಮ್ಮ ಅಣ್ಣ ಅನಿಲ್ ಗೆ ಟಾ ಟಾ ಹೇಳಿ ಬೆಂಗಳೂರು ಏರ್‌ಪೋರ್ಟ್ ಹೊಕ್ಕಾಗ ಸಮಯ ರಾತ್ರಿ 11.ಫ್ಲೈಟ್ ಹೊರೊಡದಕ್ಕೆ ಇನ್ನೂ 2 ಗಂಟೆ ಸಮಯ ಬಾಕಿ ಇತ್ತು. ನನ್ನ ಪಯಣ ಬೆಂಗಳೂರಿನಿಂದ ಪ್ರಾರಂಭವಾಗಿ ಜರ್ಮನಿ ಯ ಫ್ರ್ಯಾಂಕ್‌ಫರ್ಟ್ ವರೆಗೆ - ನಂತರ ಫ್ರ್ಯಾಂಕ್‌ಫರ್ಟ್ ನಿಂದ ಅಮೇರಿಕದ ಡೆಟ್ರಾಯಿಟ್ ಗೆ ನಿಗದಿಯಾಗಿತ್ತು. ಒಟ್ಟಿನಲ್ಲಿ ಟೋಟಲ್ 18 ಗಂಟೆಗಳ ಪಯಣ!.
ಬೆಂಗಳೂರಿನ ಏರ್‌ಪೋರ್ಟ್ ನಲ್ಲಿ ಅತ್ತಿತ್ತ ತಿರುಗಿ ಬಣ್ಣ ಬಣ್ಣದ ಶಾಪ್ ಗಳ ಮೇಲೆ ಕಣ್ಣು ಹಾಯಿಸುತ್ತಾ ಸಮಯ ಕಳೆದದ್ದಾಯ್ತು.ಕೊನೆಗೆ ಏರ್ ಹಾಸ್ಟೆಸ್ ಚಲುವೆ ಆಕರ್ಷಕ ಮುಗುಳ್ನಗೆ ಬೀರುತ್ತಾ ಪ್ಲೇನ್ ಲ್ಲಿ ಬರಮಾಡಿಕೊಂಡಾಗ ಸಮಯ ಸರಿಯಾಗಿ 12 30AM. ನನ್ನದು ಮೊದಲ ಇಂಟರ್‌ನ್ಯಾಶನಲ್ ಟ್ರಿಪ್.ಸೋ ಸಹಜವಾಗಿಯೇ ಪ್ರತಿ ಘಟ್ಟದಲ್ಲೂ ಕುತೂಹಲ-ಜಾಗರೂಕತೆ-ಸಂತಸ ಮನೆ ಮಾಡಿತ್ತು.ಅಕ್ಕಪಕ್ಕದ ಟ್ರ್ಯಾವೆಲರ್ಸ್ ಜೊತೆ ಹೀ..ಹೌ ಆರ್ ಯು ಮಾತು ಬೆಳೆಯುವ ಹೊತ್ತಿಗೆ ಪ್ಲೇನ್ ಆಗಲೇ ಆಗಸ ಚುಂಬಿಸಿತ್ತು. ಹೊರಗೆಲ್ಲ ಕತ್ತಲು. ನಿದ್ರೆಗೆ ಜಾರಿದ್ದು ಅರಿವಿಗೆ ಬರಲಿಲ್ಲ.
"ಗುಡ್ ಮಾರ್ನಿಂಗ್ ಸರ್ " ಕೈಯಲ್ಲಿ ಬೆಚ್ಚನೆಯ ಟಿಶ್ಯೂ ಪೇಪರ್ ಹಿಡ್ಕೊಂಡು ಪಕ್ಕದಲ್ಲಿ ಆಗಲೇ ನಿಂತಿದ್ದಳು ಅದೇ ಚಲುವೆ.
ಅವಳ ನಗು ನನಗೇನೋ ಆಪ್ತವಾಯಿತು.ಇಷ್ಟವೂ ಆದಳು :X .
"ಅಯ್ಯೋ ಮಂಕೆ ನಿನಗೊಬ್ಬನಿಗೆ ಅಲ್ಲ ಎಲ್ಲರಿಗೂ ಅವಳದು ಅದೇ ನಗು.ಅದೇ ಆಪ್ತತೆ. ಸುಮ್ಮನೇ ನಿನ್ನ ದಾರಿ ನೋಡ್ಕೋ" ಥಟ್ಟನೆ ಯಾರೋ ತಲೆಗೆ ಹೊಡದನ್ತೆ ಭಾಸವಾಯಿತು :-&.
"ಥ್ಯಾಂಕ್ ಯು..ಹೀ :D". ನಾನೂ ನಕ್ಕೆ . ಬಹುಶಹ ಇಂಪ್ರೆಸ್ ಆದ್ಲು ಅನ್ಸುತ್ತೆ. ಹೆ ಹೆ. ಏನೇ ಇರಲಿ ನಾಳೆ ಲೈಫ್ ಲ್ಲಿ ಬರೋ ನನ್ನ ಸಂಗಾತಿಯೂ ಇದೆ ತರಹ ಉಪಚರಿಸಿದರೆ ಸಾಕಪ್ಪ ಅಂತ ಮನದ ಬಯಕೆ ಆಗಲೇ ಬೇಡಿಕೊಂಡಿತ್ತು <):). ಫ್ರ್ಯಾಂಕ್‌ಫರ್ಟ್ ಏರ್‌ಪೋರ್ಟ್ ರೀಚ್ ಆದಾಗ ಬೆಳಗ್ಗೆ ಸರಿಯಾಗಿ ಸಮಯ 8 30AM. "Thank you..Have a great Day" ಏರ್ ಹಾಸ್ಟೆಸ್ ಎಲ್ಲರಿಗಿಂತ ನಂಗೆನೆ ಹೆಚ್ಚು ಪ್ರೀತಿಯಿಂದ ಗ್ರೀಟ್ ಮಾಡಿದ್ಲು ಅಂತ ನಂಗಂತೂ ಖಾತ್ರಿಯಾಯ್ತು :> . ಹೋಗ್ಲಿ ಬಿಡಿ ;;).
ಫ್ರ್ಯಾಂಕ್‌ಫರ್ಟ್ ಏರ್ ಪೋರ್ಟ್ ತುಂಬಾ ದೊಡ್ಡದು. ಒಂದು ಟೆರ್ಮಿನಲ್ ನಿಂದ ಮತ್ತೊಂದು ಟರ್ಮಿನಲ್ ಗೆ ಹೋಗಲು ಮಿನಿ ಟ್ರೇನ್ ಸೌಲಬ್ಯವಿದೆ..ನಾನು ನನ್ನ ಪ್ಲ್ಯಾಟ್‌ಫಾರ್ಮ್ ವಿಚಾರಿಸಿ ಬೋರ್ಡಿಂಗ್ ಪಾಯಿಂಟ್ ಗೆ ಬಂದೆ.. ಸಮಯ 9AM. ನನ್ನ ನೆಕ್ಸ್ಟ್ ಫ್ಲೈಟ್ ಇದ್ದ್ಡುದು 1PM ಗೆ.ಆಗಲೇ ನನ್ನ ದಿನಚರಿಯ ಮೊದಲ ರೂಢಿ ಮಿಸ್ ಮಾಡಿಕೊಳ್ಳುತ್ತಿದ್ದೆ. ಬೆಳಗ್ಗೆ ಎದ್ದು ೧ ಲೀಟರ್ ನೀರು ಕುಡಿದಾಗಲೆ ನನಗೆ ಖುಷಿ. ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ನೀರು ಕುಡಿಯೊ ಅಬ್ಯಾಸ ನನಗೆ ಅಮ್ಮನಿಂದ ಬಂದಿದ್ದು. ಅದು ಹೆಲ್ತ್ ಗೆ ತುಂಬಾ ಒಳ್ಳೇದು.ಅತ್ತ ಇತ್ತ ಗಮನ ಹರಿಸಿದ ಮೇಲೆ drinking water ಟ್ಯಾಪ್ ಕಾಣಿಸಿತು.. ಆದರೆ ನಾನು ಬೋಟಲ್ ಪ್ಲೇನ್ ಲ್ಲೆ ಮರೆತು ಇಳಿದಿದ್ದೆ. ಎಲ್ಲ ಆ ಏರ್ ಹಾಸ್ಟೆಸ್ ಪ್ರಭಾವ :(.
"ಟ್ಯಾಪ್ ನ್ನೇ ಬಾಯಿಯಿಂದ ಕಚ್ಚಿ ಕುಡಿದರೆ ಹೆಂಗೆ" ಒಳ್ಳೇ ಐಡಿಯಾ ತಟ್ಟನೆ ಹೊಳೆದಿತ್ತು :)).
ಆದರೆ ಏನೋ ..ಹೊಸ ಪ್ಲೇಸ್ ಲ್ಲಿ ದೈರ್ಯ ಬರಲಿಲ್ಲ.. ನೀರಿನ ಬೊತಲ್ ಕೊಂಡುಕೊಳ್ಳಲು ಸಮೀಪದ ಶಾಪ್ ಗೆ ಕಾಲಿಟ್ಟೆ. .
"ಎಕ್ಸ್‌ಕ್ಯೂಸ್ ಮಿ"
"ಎಸ್"
"ಶಲ್ ಆಯ್ ಪೇ ಇನ್ ಡಾಲರ್ಸ್" ಯೂರೋಪಲ್ಲಿ ಯೂರೋ ಕರೆನ್ಸೀ ಚಾಲ್ತಿಲಿ ಇರೋದು .
"ಎಸ್ ಯು ಕ್ಯಾನ್ "
"ಹೌ ಮಚ್ ಫಾರ್ ದಿಸ್ ವಾಟರ್ ಬಾಟಲ್"
""ಈಟ್ಸ್ 366 ಡಾಲರ್ಸ್"
"366 ಡಾಲರ್ಸ್ !!" ( 366 * 46 = 16470 Rs :-O $-) @-)!!!)
ಸರಿಯಾಗಿ ಕೇಳಿಸಿಲ್ವ. ಮತ್ತೆ ಕೇಳಿದ ಮೇಲೂ ಅದೇ ರೇಟು. .ಬೋಟಲ್ ಮುಟ್ಟಿ ಕೊಂಡುಕೊಳ್ಳದೆ ವಾಪಸ್ ಬಂದು ಕೂತೆ.
ಆ ರೇಟ್ ನ ಶಾಕ್ ದಿಂದ ಹೊರಗೆ ಬರೋದಕ್ಕೆ ಬಹಳ ಸಮಯವೇನೋ ಬೇಕಾಗಲಿಲ್ಲ.ಬಣ್ಣ ಬಣ್ಣದ ಡ್ರೆಸ್ ನಲ್ಲಿ ಥಳಕು ಬಳುಕಿನ ಸುಂದರ ಲಲನೆಯರು, ನಾವೇನೂ ಕಡಿಮೆಯಿಲ್ಲ ಅನ್ನೋ ತರಹ ಸುಂದರವಾಗಿ ಅಲಂಕರಿಸಿಕೊನ್ಡು ಠೀವಿಯಿಂದ ಸುತ್ತುತ್ತಿದ್ದ ಪುಟಾನಿಗಳು ಎಲ್ಲವೂ ಬಣ್ಣದ ಲೋಕ. ವಯ್ಯಾ ರದ ಪಾಕ :)...
ನನ್ನ ಪಕ್ಕದಲ್ಲಿ ಕುಳಿತಿದ್ದ ಪುಟ್ಟ ಮುದ್ದು ಮಗು ನನ್ನ ಆಕರ್ಷಿಸಿತು. ನಾನೂ ಅದರ ಜೊತೆ ಮಗುವಾಗಿ ಕಣ್ಣಲ್ಲೇ ಸನ್ನೆ ಮಾಡುತ್ತಾ ಆಟವಾಡತೊಡಗಿದೆ. ಎಲ್ಲಿ ಎಡವಟ್ಟು ಮಾಡಿದೆನೊ ಗೊತ್ತಿಲ್ಲ.ಮಗು ಇದ್ದಕ್ಕಿಂದಂತೆ ಮುಖ ಮುದುಡಿಕೊನ್ದು ಆಳೋಕೆ ಶುರು ಮಾಡಿತು. ಬಹುಶಹ ನನ ತರಲೆ ಜಾಸ್ತಿ ಆಯಿತೇನೋ.ನನ್ನ ಮುಖ ನೋಡಿ ಅದಕ್ಕೆ ಕಲ್ಪನೆಯ ಭೂತ ನೆನಪಿಗೆ ಬಂದಿರಲಿಕ್ಕೂ ಸಾಕು >:).ನಾನು ಅದು ಅಳೊದನ್ನು ನೋಡಿ ನಗುತ್ತಾ ಕೂತಿದ್ದೆ. ಮಗುವಿನ ಅಮ್ಮ ಲಗುಬುಗನೆ ಬ್ಯಾಗ್ ನಿಂದ ಏನೋ ಕ್ಲಿಪ್ ತರಹ ಇರುವ ವಸ್ತು ತಗೆದು ಅದರ ಬಾಯಿಗೆ ಲಗತ್ತಿಸಿದಳು :|. ಅದು ಎರಡೂ ತುಟಿಗಳನ್ನು ಬಿಗಿಯಾಗಿ ಹಿಡಿಯಿತು ಅನಿಸುತ್ತೆ.ಪಾಪ ಮಗು ಕ್ಷಣ ಕಾಲ ಅಳೋಕೆ ಪ್ರಯತ್ನಿಸಿ ಮತ್ತೆ ಸುಮ್ಮನಾಗಿ ನನ್ನ ನೋಡತೊಡಗಿತು.
ಸಮಯ ಸರಿಯಾಗಿ 12PM.ಇನ್ನೂ ಒಂದು ಗಂಟೆ. ಹೊಟ್ಟೆಗೆ ನೀರಿಲ್ಲದೇ ಕುಳಿತಿದ್ದೆ. 16000 ಕೊಟ್ಟು ನೀರು ಕೊಳ್ಳೋ ಬದಲಿಗೆ ಕುಡಿಯದೇ ಕೂಡೊದು ಒಳಿತು ಅನಿಸಿತು :|.ಸುತ್ತ ಮುತ್ತ ಅಲೆದಾಡಿದ ಮೇಲೆ ಮತ್ತೊಂದು ತಾಯಿ ಮಗುವಿನ ಭೇಟಿಯಾಯಿತು. ಪುಟ್ಟ ಮಗುವನ್ನು ತಾಯಿ ಎಳೆದುಕೊಂಡು ಹೋಗೋ ಪರಿ ನೋಡುವಂತದ್ದು. ಮಗುವನ್ನು ದಾರ ಕಟ್ಟಿ ಕರೆದುಕೊಂಡು ಹೋಗುತ್ತಿದ್ದಳು. ಆ ಮಗುವಿಗೆ ಮುಂದೆ ಹೋಗಲು ಮನಸ್ಸಿರದಿದ್ದರೆ ಥಟ್ಟನೆ ಕೆಳಗೆ ಕುಳಿತು ಆಟದಲ್ಲಿ ಮಗ್ನವಾಗಿ ಬಿಡೊದು. ಹೆ ಹೆ :)).
ಸಮಯ 12:30PM. ಆಗಲೇ ನೆಕ್ಸ್ಟ್ ಫ್ಲೈಟ್ ಸಿಧ್ಧವಾಗಿತ್ತು. ಮಿನಿ ಡ್ರೆಸ್ ನಲಿ ಮುಗುಳ್ನಗುತ್ತಾ ಸುಂದರ ಯುವತಿ ಫ್ಲೈಟ್ ಗೆ ಬರಮಾಡಿಕೊಂಡಳು ~:>.
"ಥ್ಯಾಂಕ್ ಯೂ :D" ಹಲ್ಲು ಕಿರಿಯುತ್ತಾ ಒಳ ಹೊಕ್ಕೆ. ಅದೇ ಬೆಚ್ಚನೆಯ ಅನುಭವ .Detroit ಗೆ ರೀಚ್ ಆದಾಗ ಸಂಜೆ 4PM.ಸಂಜೆಯ ತಿಳಿ ಬಿಸಿಲು ಬೆಂಗಳೂರಿನಂತೆ ಭಾಸವಾಯಿತು.
ಓಹ್ ಅಂದ ಹಾಗೆ ಮರೆತಿದ್ದೆ. US ಗೆ ಬಂದಿಳಿದ ಮೇಲೆ ಗೊತ್ತಾಯ್ತು. 366$ ಅಂದ್ರೆ 3 ಡಾಲರ್ಸ್ 66 ಸೆಂಟ್ ಅಂತ.ಸಾಮಾನ್ಯವಾಗಿ ಎರಡನ್ನೂ ಕೂಡಿಸಿ ಹೇಳೋದು ರೂಢಿ ಅಂತೆ.ಆದ್ರೂ ನನ್ನಂತಹ ಅಮಾಯಕನಿಗೆ ಈ ರೀತಿ ಆ ಅಂಗಡಿಯವಳು ಬಕರಾ ಮಾಡಿದ್ದು ಸರೀನಾ =))!! .ನೆಕ್ಸ್ಟ್ ಟೈಮ್ ಅವಳನ್ನು ನೊಡ್ಕೊತಿನಿ ;) :P :D :-B

17 comments:

Chinmay said...

Excellent post! good work .. / keep writing.. !

Shrinivas sonnad said...

:-)

Sudhir said...

@Chin,
Thanks le.. Keep reading :)

@Shrini
nice smile :) thanks..

Unknown said...

Nice One

Sudhir said...

@Praveen
Thanks le ..Pavya. . keep reading :)

Unknown said...

Good One Sudhir, I enjoyed reading it:-)

Sudhir said...

@Sandy,
Oye Sandy..nice to see ur comments.

Unknown said...

Nice and funny too.
Good keep it up

Sudhir said...

@kavita,
he he..thx Kavita..:) keep reading

Unknown said...

ha ha :).. Nice post yar..

Keep bloggin..

Also write more about your lifestyle n' work culture at detroit in the next blog.. okie??

Sudhir said...

@Supriya
Yes ji..Khandita :)

Jayashree said...

cool. ella hosa experience :). odi khushi aytu.

Shweta said...

oye nanage half story ashte gottittu ,idu full story hmmm :)

Sudhir said...

@Jay
Thx Jay.. Innu tumba ide helodu :)

Sudhir said...

@Shweta
Kelavu vishayanagalannu blogg nalle helodaralli maja iruttealva.. keep reading :)

Prashant Kulli said...

ನಿಮ್ಮ ಪೋಸ್ಟ್ ತುಂಬಾ ಇಷ್ಟವಾಯಿತು. ನಾಚಿಕೆ ಇಲ್ಲ್ದೇ ಹೇಳುವ ವಿಷಯ ಅಂದ್ರೆ ನಾನು ಕನ್ನಡದಲ್ಲಿ ಓದುವುದೇ ಅಪರೂಪ ಆಗಿ ಬಿಟ್ಟಿತ್ತು. ನಿಮ್ಮ ಬ್ಲೊಗ್ನ ಓದಿ ಏನೋ ಖುಷಿ. ಹೀಗೆ ಬರೀತಾ ಇರಿ. 366 ಕಥೆ ಚೆನ್ನಾಗಿದೆ. ನಂಗೂ ಈ ಅನುಭವ ಆಗಿತ್ತು. ನಾನು ಪ್ಯಾರಿಸ್ ಗೆ ಹೋದಾಗ. ಇನ್ನೂ ಜಾಸ್ತಿ ಪೋಸ್ಟ್‌ಗಳನ್ನು ನಿಮ್ಮಿಂದ ಓದುವೆ.

Sudhir said...

@Prashant
Thank u :) heege oduttiri. .