Tagged under:

ಆಹಾ! ನನ್ನ ಮದುವೆಯಂತೆ . . .


ನನ್ನಾಕೆ ಹೊಸ ಆಲ್ಬಮ್ ನ ಮುದುವೆ ಫೋಟೋ ನೋಡುತ್ತಾ ಮುಗುಳ್ನಗುತ್ತಿದ್ದಳು. ನಾನು ಮದುವೆಯಲಿ ಗತಿಸಿದ ಕೀಟಲೆ ಗಳನ್ನು ನೆನೆಯುತ್ತ ಅವಳ ಕಾಲೆಳೆಯುತ್ತಿದ್ದೆ.
ಮಾತು ಮಾತಿನಲಿ ನೆನಪು ಮದುವೆಗಿಂತ ಮುಂಚಿನ ಸಮಯಕ್ಕೆ ಸರಿಯಿತು.
ಆಗ ಯಾಕೋ ಏನೋ ಮದುವೆ ಅನ್ನೋ ಶಬ್ದ ಕೇಳಿದ ತಕ್ಷಣ ನನಗೆ ತಲೆ ನೋವು.
ಅಯ್ಯೋ ಒತ್ತಾಯದ ಮದುವೆಯೇನಲ್ಲ. ಹುಡುಗಿ ಎಲ್ಲರಿಗೂ ಅಚ್ಚು ಮೆಚ್ಚು. ನನಗೆ ಮದುವೆ ಬಗ್ಗೆ ಚಕಾರವಿರಲಿಲ್ಲ. ಆದರೆ ಅದರ ಬೆನ್ನು ಹಿಂದೆಯೇ ಬರುವ ದೊಡ್ಡ ಅಬ್ಬರದ ಜಾತ್ರೆ ನನಗೆ ಬೇಡವಾಗಿತ್ತು. ಗಾದೆ ಮಾತಿದೆಯಲ್ಲ “ಮದುವೆ ಮಾಡಿ ನೋಡು ಮನೆ ಕಟ್ಟಿಸಿ ನೋಡು”. ಮನೆಯವರನ್ನೆಲ್ಲ ಮದುವೆಯೆಂಬ ಮಹಾ ತಯಾರಿಯಲ್ಲಿ ಮುಳುಗಿಸೋದು ನನಗೆ ಇಷ್ಟವಿರಲಿಲ್ಲ. ಸುಮ್ಮನೆ ರಜಿಸ್ಟರ್ ಆಫಿಸಲ್ಲಿ ಮದುವೆಯಾದರೆ ಸಿಂಪಲ್ ಮತ್ತು ಕೂಲ್ ಆಗಿರುತ್ತೆ ಅನ್ನೋದು ನನ್ನ ಸಬೂಬು. ಬಹುಷಹ ನಮ್ಮ ಪೀಳಿಗೆಯವರ ಅಭಿಪ್ರಾಯವೂ ಇದೆ ಅನಿಸುತ್ತೆ. ಆದರೆ ಹಿರಿಯರು ಕೇಳಬೇಕಲ್ಲ. ಅವರಿಗೆ ಮದುವೆಯ ತಯಾರಿಯಲ್ಲೇ ಖುಷಿ . ಸಂಭಂದಿಕರನ್ನು ಬರಮಾಡಿಕೊಂಡು ಆತಿಥ್ಯ ವಹಿಸುವುದರಲ್ಲೇ ಸಂಬ್ರಮ.

“ಅಪ್ಪಾ, ಸುಮ್ಮನೆ ಇಷ್ಟೆ ಲ್ಲಾ ಹಣ ಪೋಲು ಯಾಕೆ ಮಾಡಬೇಕು.ನಾವು ರಜಿಸ್ಟರ್ ಮ್ಯಾರೇಜ್ ಮಾಡ್ಕೊತಿವಿ . .ನೀವು ಬೇಕಾದರೆ ನಾವು ಬೆಂಗಳೂರಿಗೆ ವಾಪಸಾದ ಮೇಲೆ ಏನಾದ್ರೂ ಪ್ರೊಗ್ರಾಮ್ ಮಾಡ್ಕೊಳ್ಳಿ “ ಶತಾಯಗತಾಯ ಈ ತಯಾರಿಯನ್ನು ನಿಲ್ಲಿಸಲು ಪ್ರಯತ್ನ ಪಟ್ಟೆ.
“ಹೆ ಹೆ! ಅದೆಲ್ಲ ಸಾದ್ಯವಿಲ್ಲ . ಮದುವೆ ಅನ್ನೋದು ಲೈಫ್ ಲ್ಲಿ ಒಂದೆ ಸಲ ಬರೋ ಸುಂದರ ಗಳಿಗೆ . ಎಲ್ಲಾ ಬಂಧು ಬಳಗ ಕೂಡಿ ನಿಮಗೆ ಆಶೀರ್ವಾದ ಮಾಡೋ ಪರಿ ಪವಿತ್ರವಾದದ್ದು. ನಾವಂತೂ ನಮ್ಮ ಕರ್ತ್ಯವ್ಯ ಮಾಡ್ತೀವಿ. ಬೇಕಾದರೆ ನಿಮ್ಮ ಮಕ್ಕಳಿಗೆ ರಜಿಸ್ಟರ್ ಮದುವೆ ಮಾಡಿಸಿ ” ಅಪ್ಪನದು ಕರಾರುವಕ್ಕಾದ ಮಾತು.

“ಹುಹ್ ! ಯಾಕಪ್ಪ ಇಷ್ಟು ಹಣ ಮದುವೆ ಹೆಸರಲ್ಲಿ ಪೋಲು ಮಾಡಬೇಕು. ನಮಗೆ ಕೊಡಿ . ನಾವಾದ್ರೂ ಬೆಂಗಳೂರಿನಲ್ಲಿ ಹಾಯಾಗಿ ಎಂಜಾಯ್ ಮಾಡಬಹುದು “ ಮನಸಿನಲ್ಲೇ ಗುನುಗುತ್ತ ಹಿರಿಯರ ಕಟ್ಟು ಪಾಡು ಬಗ್ಗೆ ಕೋಪ ಬಂತು.

ಇನ್ನು ಮದುವೆ ಖರೀದಿ ಸರದಿ. ನಾನು ಅರ್ಧ ದಿನದಲ್ಲಿ ನನ್ನ ಖರೀದಿ ಮಾಡಿ ಮುಗಿಸಿದ್ದೆ. ಆದರೆ ನನ್ನಾಕೆಯದು ಹೇಳತೀರದು. ಅವಳ ಬಟ್ಟೆ ಹುಡುಕಲೆಂದೇ ಸಂಭಂದಿಕರ ದಂಡು ಬೆಂಗಳೂರಿಗೆ ಬಂದಿತ್ತು. ಇಡೀ ಬೆಂಗಳೂರು ಜಾಲಾಡಿದ ಮೇಲೆ ಸೀರೆ ಖರೀದಿ ಮಾಡಿದ್ದಾಯ್ತು. ಮರುದಿನ ಮತ್ತೆ ಖರೀದಿ. ನಂತರ ಫ್ರೆಂಡ್ಸ್ ರಿಗೆಲ್ಲ ತೋರಿಸಿದ ಮೇಲೆ ಎಕ್ಸ್ ಚೇಂಜ್ ಮಾಡೋಕೆ ಮತ್ತೊಂದು ರೌಂಡು. ಅಬ್ಬಾ! ಬೆಂಗಳೂರಿನಲ್ಲಿ ಯಾಕೆ ಎಲ್ಲ ಅಂಗಡಿಗಳೂ ಸದಾ ಜಿನುಗುದುತ್ತವೆ ಅನ್ನೋದು ಈಗ ಗೊತ್ತಾಯ್ತು. ಬಹುಶಃ ಟ್ರಾಫಿಕ್ ಜಾಮ್ ಗೂ ಮೂಲ ಇದೆ ಏನೋ! ಇನ್ನು ಒಂದು ವಾರ ಕಳೆದ ಮೇಲೆ ನಮ್ಮ ಹುಡುಗಿಗೆ ತಂದ ಸೀರೆಯ ಮೇಲಿನ ವ್ಯಾಮೋಹ ಕಡಿಮೆಯಾಯ್ತು ಅನಿಸುತ್ತೆ. ಮತ್ತೆ ಹೊಸ ಸೀರೆಯ ಖರೀದಿ. ಇನ್ನು ಅದರ ರೇಟ್ ಕೇಳಲೇಬಾರದು. ಬ್ಯಾಂಕ್ ಲ್ಲಿ ಬಂಗಾರದ ಲಾಕರ್ ಥರ ಸೀರೆಗೂ ಬೇಗ ಲಾಕರ್ ಪ್ರಾರಂಭವಾಗಬಹುದು. ಇಷ್ಟೆಲ್ಲಾ ಶಾಪಿಂಗ್ ಸಡಗರ ಮುಗಿದ ಮೇಲೆ ಅವಳದು ಒಂದೇ ಅಳು “ನನಗೆ ಬೇಕಾದ ಸೀರೆ ಸಿಗಲೇ ಇಲ್ಲ”. ಅಬ್ಬ ಈ ಜಗತ್ತಿನ್ನಲ್ಲಿ ಖರೀದಿ ಹಬ್ಬ ಸಡಗರ ಅನ್ನೋದು ಹುಡುಗಿಯರಿಂದಲೇ ಬಂದಿರಬೇಕು. ಬರೀ ಹುಡುಗರಿದ್ದರೆ ಎಲ್ಲವೂ ಸಪ್ಪೆ. ನಿಜಾ!! . ಮದುವೆ ದಿನ ಸಮೀಪಿಸಿತ್ತು.

ಮದುವೆ ದಿನ ಅರಿಶಿನ ಸ್ನಾನದ ಮೂಲಕ ಆರಂಭವಾಯ್ತು.. ಬೆಳಗಿನ ಮಹುರ್ತಕ್ಕೆ ಸಮೀಪದ ದೇವರ ಗರ್ಭ ಗುಡಿಯಲ್ಲಿ ಸಪ್ತ ಪದಿ ನಿಗದಿಯಾಗಿತ್ತು. ಸರಿಯಾದ ಮಹೂರ್ತಕ್ಕೆ ಪೂಜೆ ಪ್ರಾರಂಭವಾಯಿತು. ಎಲ್ಲರೂ ಸುತ್ತುವರಿದು ನಮ್ಮನ್ನು ತದೇಕ ಚಿತ್ತದಿಂದ ನೋಡುತ್ತಿದ್ದರು. ಪೂಜೆಯ ಪರಿಚಾರಕ ಏರು ಧ್ವನಿಯಲ್ಲಿ ಶ್ಲೋಕ ಪಠಿಸುತ್ತಾ ನಮಗೆ ಸಲಹೆ ಕೊಡಿತ್ತಿದ್ದ. ಪೂಜೆಯ ಶ್ಲೋಕಗಳಲ್ಲಿ ಏನೋ ಮಾಯೆ ಅಡಗಿದಂತೆ ಭಾಸವಾಯಿತು. ಪರಿಚಾರಕನ ಸನ್ನೆ ಪಾಲಿಸುತ್ತ ಪೂಜೆ ಪಾಲಿಸಿದ ನಾವು ಕೆಲವೇ ಕ್ಷಣದಲಿ ಅಕ್ಷತೆಯ ಮಳೆಯಲಿ ಮಿಂದು ಸತಿ ಪತಿಗಳಾದೆವು. ಮಂತ್ರ- ಶ್ಲೋಕ -ಗಂಟೆಯ ನಾದ ಕಿವಿಯಲ್ಲಿ ಧ್ವನಿಸುತ್ತಿತ್ತು, ಹವಣದ ಜ್ವಾಲೆ ಅತ್ತ ಇತ್ತ ಜೂಜಾಡುತ್ತ ನಮ್ಮ ಸಂಬ್ರಮಕ್ಕೆ ಕುಣಿಯುತ್ತಿತ್ತು. ಈ ಸುಂದರ ಘಟ್ಟ ನನಗೆ ತಿಳಿಸಿತ್ತು ಮದುವೆ ಅನ್ನೋದು ಲೈಫ್ ಲ್ಲಿ ಡೇಟಿಂಗ್ ಅಲ್ಲ ಅದು ಎರಡು ಜೀವ ಬೆಸಿಸುವ ಪರಿ. ಬಂಧು ಬಾಂಧವರ ಜೊತೆಗೂಡಿ ಸಂಬ್ರಮಿಸುವ ಒಂದು ಮನೆ ಹಬ್ಬ. ಅವರೆಲ್ಲರ ಹರಕೆಯೇ ಮುಂದೆ ಬರುವ ವಿಘ್ನಗಳಿಗೆ ನಿವಾರಕ. ಈ ಅನುಭವ ಅಧುನಿಕ ರಜಿಸ್ಟರ್ ಮದುವೆಯಲ್ಲಿ ಖಂಡಿತ ಸಿಗುತ್ತಿರಲಿಲ್ಲ. ಹಿರಿಯರು ಪಾಲಿಸುವ ಪ್ರತಿ ವಿಧಾನಗಳಿಗೂ ಅರ್ಥ ಇದೆ. ಯಾವುದನ್ನೂ ವಿರೋಧಿಸದೆ ಪಾಲಿಸಿ ನೋಡಿ. ಅದರಿಂದ ಸಿಗುವ ಆನಂದ ಹೇಳತೀರದು.
ನೆನಪುಗಳ ಕಂತೆ ಮದುವೆಯ ಆಲ್ಬಮ್ ನ ಕೊನೆಯ ಪ್ರತಿ ಸರಿಸಿದಾಗ ಮರೆಯಾಯ್ತು.ಆದರೆ ಮನಸು ಮಾತ್ರ ಮತ್ತೊಮ್ಮೆ ಮದುವೆಯಾದಂತೆ ಕುಣಿಯುತ್ತಿತ್ತು.

14 comments:

Prashant Desai said...

Sudhir,

Good one..keep it up..

Sudhir said...

Thanks Prashant :)

Jayashree said...

nice post Sudhir :)

Vasu said...

Nice one sudhir. :)

Sudhir said...

Thank you Jayashree and Vasu

Rakesh S Joshi said...

ನವ ಜೋಡಿಗೆ ಮದುವೆಯ ಹಾರ್ದಿಕ ಶುಭಾಶಯಗಳು.
ಮಾಡುವೆ ಮುಂಚಿನ ಸೀರೆ ಖರೀದಿಗೆ ಇಷ್ಟೊಂದು ಪೇಚಾಡಿದರೆ ಹೇಗೋ? :-) ಇದು ಈಗ ತಾನೇ ಶುರುವಾಗಿದೆ..

Manjunath said...

Congratulation :)
Happy married life brother :)

Sudhir said...

@Rakesh
he he . . Nimmanta hiriyara salahe beko :)

@Manjunath
Thank you :)

Anup said...

Superlike..!!

Sudhir said...

Thanks Anup .. keep reading

Prashant G said...

mast bariti bidapa...

Sudhir said...

Thanks le Parasya. . Read other blogs also. .

kulalafriends mumbai said...

maduve yennuvudu kevala vadhu-varareege maatraa khushi tarruvantaddalla,yeraDuoo parivaarada makkaLu, hiriyaroo santosha paDuttare.saraLate iddare uttama.

Sudhir said...

@Kulalasangha
Thank you. :)