"To my delight this small article has been choosen best blog by GM India on the occasion of World Environment Day...cheers :) "
ವೀಕೆಂಡ್ ಬಂದ್ರೆ ಸಾಕು. ನನಗೆ ಎಲ್ಲಿಲ್ಲದ ಖುಷಿ. ಮೂಲೆಯಲ್ಲಿನ ಗಿಟಾರ್ ತುಗೊನ್ದು ಅಮ್ಮ ಮಾಡಿದ ಬಿಸಿ ಬಿಸಿ ಕಾಫಿ ಹೀರುತ್ತಾ ಮಾಗು ಹತ್ರ ಹೋಗಿ ಕೂತ್ಕೊಳ್ಳೋ ಮಜಾನೆ ಬೇರೆ..ಆಹ್ಹಾ ..ಸ್ವರ್ಗಕ್ಕೆ ಎರಡೇ ಗೇಣು .. ಓ ಯಾರು ಈ ಮಾಗು ಅಂದ್ರಾ .. ಅದು ಮನೆಯ ಮುಂದೆ ಬೆಳೆದು ನಿಂತ ನನ್ನ ಪ್ರೀತಿಯ ಮಾವಿನ ಮರ. ಮಾಗು ಅನ್ನೋದು ನಾನು ಚಿಕ್ಕವನಿದ್ದಾಗ ಇಟ್ಟ ನಾಮಧೇಯ. ಆಮೇಲೆ ಮಾಗು ಅಂತಾನೆ ನಮ್ಮ ಕಾಲನಿಯಲ್ಲಿ ಫೇಮಸ್ಸು. ಮಾಗು ಎಲ್ಲರಿಗೂ ಮುದ್ದು. ತಂದೆಗೆ ಅದು ಕಾರ್ ಕಾಯುವ ಕವಚ. ಅಮ್ಮನಿಗೆ ಫ್ರೆಂಡ್ಸ್ ಜೊತೆ ತಮ್ಮ ದಿನಚರಿ ಗಳನ್ನ ಹಂಚಿಕೊಳ್ಳುವ ಕಟ್ಟೆ. ಕಾಲನಿ ಮಕ್ಕಳಿಗೆ ಉಯ್ಯಾಲೆ. ಮೇಲಮಹಡಿ ಬ್ಯಾಚ್ಲರ್ಸ್ ಗಳಿಗೆ ಅದು ಬಟ್ಟೆ ಹಾಕುವ ಕಂಬ. ಪಕ್ಕದ ಮನೆಯವರಿಗೆ ಮನೆಯ ಮುಂದಿನ ಹಂದರ.ಮಂದಿರದ ಪೂಜಾರಿಗೆ ಗಣಪನ ಅಲಂಕರಿಸಲು ಬೇಕಾದ ತೊಳಲು.ಇನ್ನು ಅಸಂಖ್ಯಾತ ಪಕ್ಷಿಗಳಿಗೆ ಮನೆ .ಮತ್ತೆ ನನಗೆ ಅದು ಪ್ರಾಣ :) .ಇನ್ನು ದಾರಿ ಹೋಕರಿಗೆ ನೆರಳು ಕೊಡುವ ಕಲ್ಪ ವೃಕ್ಷ . ಅದಿಲ್ಲದ ನಮ್ಮ ಕಾಲನಿ ನನಗೆ ಊಹಿಸಲು ಅಸಾದ್ಯ.ಒಟ್ಟಿನಲ್ಲಿ ನನ್ನ ಮಾಗು ಇಡೀ ಕಾಲನಿಗೆ ಹಿರಿಯ ಮುಖಂಡ.ಇದೆಲ್ಲದರ ಮೇಲಾಗಿ ರುಚಿಯಾದ ಮಾವು ಕೊಡುವ ಅನ್ನದಾತ.
ಮಾಗು ವಯಸ್ಸು ನಂಗೆ ಗೊತ್ತಿಲ್ಲ.. ನನಗೆ ಅರಿವು ಬಂದಾಗಿನಿಂದ ನೋಡಿದ್ದೇನೆ. ನಾವು ಬೆಳೆಸಿ ನೀರುಣಿಸಿದ ಋಣಕ್ಕೆ ನಮಗೆ ಸದಾ ನೆರವಾಗಿ ಮನೆ ಮುಂದೆ ನಿಂತಿದೆ. ..ಬಿಸಿಲು ಮಳೆ ಕತ್ತಲು ಅದಕ್ಕೆ ಯಾವ ಭಯ ನು ಇಲ್ಲ. ಇದಕ್ಕಿಂತ ಮಿಗಿಲಾಗಿ ಆದರ ತಾಳ್ಮೆ ಮೆಚ್ಚಲೇಬೇಕು.ನಾನು ಪಕ್ಕದಲ್ಲಿ ಕುಳಿತು ಹೇಗೆಲ್ಲಾ ಗಿಟಾರ್ ನುಡಿಸಿದರೂ ಒಮ್ಮೆಯೂ ಚಕಾರವೆತ್ತಿಲ್ಲ .ಹೆ ಹೆ !! ನಂಗೆ ಈಗಲೂ ನೆನಪಿದೆ ಒಮ್ಮೆ ಮರದ ಟೊಂಗೆ ಕಡಿಯಲು ಬಂದ ಮುನಿಸಿಪಾಲಿಟಿಯವರ ಜೊತೆ ಅಜ್ಜಿ ಎರಡು ಗಂಟೆ ಜಗಳವಾಡಿ ಅವರನ್ನ ಓಡಿಸಿದ್ದು. ಒಮ್ಮೆ ಪುಟಾಣಿ ಗುಬ್ಬಿ ಮರಿ ಮರದಿಂದ ಕೆಳಗೆ ಬಿದ್ದಾಗ ನಾನು ಮನೆಗೆ ತಂದು ಅದನ್ನ ಮುದ್ದು ಮಾಡಿ ಬೆಳೆಸಿದ್ದು ಮರೆಯಲಿಕ್ಕೆ ಉಂಟಾ?..ಈಗಲೂ ಯಾವುದಾದರೂ ಗುಬ್ಬಿ ಮನೆಯ ಮುಂದೆ ಬಂದಾಗ ಒಹ್ ಅದು ನನ್ನ ಗುಬ್ಬಿನ... ಅಂತ ಕಾತರದಿಂದ ನೋಡ್ತೇನೆ.ಒಮ್ಮೆ ನಾನು ಹಾರಿಸುತ್ತಿದ್ದ ಗಾಳಿ ಪಟ ಮರದ ಕೊಂಬೆಗೆ ಸಿಕ್ಕಿ ಕೊಂಡಾಗ ಎಲ್ಲಿ ಕೊಂಬೆ ಮುರಿಯುತ್ತೆ ಅಂತ ಅಜ್ಜಿ ಹತ್ತಲು ಬಿಡಲಿಲ್ಲ.ಅಜ್ಜಿಗೆ ಮಾಗು ಮೇಲೆ ಪ್ರಾಣವೇ ಇತ್ತು.ಅದು ಮನೆಯ ಮುಂದೆ ಎಲೆ ಚೆಲ್ಲಿ ಎಷ್ಟೆ ಗಲೀಜು ಮಾಡಿದರು ಅಮ್ಮ ಅದನ್ನ ಶುಚಿ ಮಾಡಲು ಒಮ್ಮೆಯೂ ಬೇಜಾರು ಪಟ್ಟಿಲ್ಲ.
ಅದು ನಮಗೆ ಮಾಡುವ ಉಪಕಾರದ ಮುಂದೆ ಇವೆಲ್ಯ ನಗಣ್ಯ :) ಅಲ್ವಾ?
ಆದರೆ ಈಗ ಕಾಲನಿಯಲ್ಲಿ ಎಲ್ಲರೂ ಮೌನ.ಏನು ಗೊತ್ತಿರದ ಮೂಕ ಪ್ರಾಣಿ ನನ್ನ ಉಳಿಸಿ ಅಂತ ರೋದಿಸುತ್ತಿದ್ದರೂ ಏನು ಮಾಡದ ಪರಿಸ್ಥಿತಿ. ಮೆಟ್ರೋ ಎಂಬ ಆಧುನಿಕತೆಗೆ ತನ್ನನ್ನೇ ಬಲಿ ಕೊಡಬೇಕಾದ ಪರಿಸ್ಥಿತಿ. ಅಜ್ಜಿ ಇದ್ದಿದ್ದರೆ ಏನಾದ್ರೂ ಮಾಜಿಕ್ ಮಾಡಿ ಮಾಗು ನ ಉಳಿಸುತ್ತಿದ್ದರೆನೊ? ಮೆಟ್ರೋ ಗೆ ಇದೆ ದಾರಿ ಬೇಕಾ? ಅದಕ್ಕೆ ಪಾಪ ನನ್ನ ಮಾಗು ತರಹ ಮೂಕ ಮರಗಳೇ ಆಹುತಿಯಾಗಬೇಕಾ ? ತನ್ನ ಜೀವನವಿಡೀ ಪರರ ಉಪಕಾರಕ್ಕಾಗಿಯೇ ಬೆಳೆದು ನಿಂತಿದ್ದಕ್ಕೆ ನಾವು ಕೊಡುವ ಗೌರವ ಇಷ್ಟೇನಾ? ಉತ್ತರವಿಲ್ಲದ ಪ್ರಶ್ನೆಗಳು.
ಈಗ ನಮ್ಮ ಮನೆ ಹಿಂದೆ ಮತ್ತೊಂದು ಪುಟ್ಟ ಮಾಗು ಬೆಳೆಸುತ್ತಿರುವೆ..ಮತ್ತೆ ನನ್ನ ಕನಸಿನ ಲೋಕಕೆ ಜಾರಲು ಅದು ಬೆಳೆದು ನಿಲ್ಲೊವರೆಗೂ ಕಾಯುವೆ.ಹೇ ಅಜ್ಜಿ, ಯಾರ ವಕ್ರ ದೃಷ್ಟಿಯೂ ನನ್ನ ಪುಟ್ಟ ಗೆಳೆಯನ ಮೇಲೆ ಬೀಳದಂತೆ ನೋಡಿಕೊ ಪ್ಲೀಸ್ !

11 comments:
Sudhir bhai... i would be obliged :)
if you can send me the english version of it....
The article seems to be on farming or something related to it. Would be interested to read it :).
Pankaj
Supeeerb le,,, :)
Mast ad le. Writer aagiddi :)
Keep it up.
he he..when i read this blog..i get to remember the poem which i read in school days"mera naya bachpan"...the innocence in childhood days with mixture of awareness is very neatly described ...good luck ..keep writing..we will be lucky to read these stuffs:):):)
Really Superb Sudhiraaa.....Ysetu hogalidaru saladu ninna Barahavanu..
Keep It Up yaar...Who knows if ur the Next Jayant Kaykani
Reagrds
Praveen
Le sudya simply super le.....:)
nice script.....go head with some more blogs,,,,,,!!!!!
Fantastic....as always!!!
Keep it up sir :)
Regards,
Shivashankar
Pankaj, Jay,Pratibha,Sneha, Praveen , Sanju n Shivu..
Thanks 4 sharing ur views..keep reading
narration wise, superb. As always.
maagu(n other thousands of trees) metro ge bali aagtirodu besarada sangati.:(
ajji magic madidre superb. illandru, u can. elladru ondishtu gidagaLanna beLsi or maavin gida haaki maagu nenpige. aaga adra jote matte beautiful memories jodane aagatte :).
Thanks jayashree..Most of the trees were axed for Metro..Nan Vijay Nagr eega complete bolu.. dukha aagutte :(
@Rashmi,
Thanks for reading old blogs...:)
Post a Comment