"ಯಾವಾಗ ನೋಡಿದ್ರು ನೋ ಸೇವಿಂಗ್ ಅಂತಾನೆ ಹೇಳ್ತಿಯಲ್ಲ.ಏನು ಮಾಡ್ತೀರೋ ದೇವರೇ ಬಲ್ಲ .... ಲೆಕ್ಕ ಹಚ್ಚೋದು ಕಲಿ " ಅಪ್ಪ ಎಂದಿನಂತೆ ತಮ್ಮ ಭಾಷಣ ಮುಂದುವರೆಸಿದ್ದರು.ಹಣ ಎಲ್ಲಿ ಹೋಗ್ತಾ ಇದೆ ಅಂತ ನಂಗೆ ಗೊತ್ತಿಲ್ಲ ಇನ್ನು ಸೇವಿಂಗ್ ಎಲ್ಲಿಂದ ಬರಬೇಕು ನನ್ನನ್ನು ನಾನೇ ಸಮರ್ಥಿಸಿಕೊಳ್ತಾ ಇದ್ದೆ . ಪ್ರತಿ ಸಲ ಮನೆಗೆ ಹೋದಾಗ ಅಪ್ಪನಿಂದ ಇದೆ ಪ್ರಶ್ನೆ ..ಹಣ ಎಲ್ಲಿ ಹೋಗ್ತಿದೆ ಅನ್ನೋದು ಇಬ್ಬರಿಗೂ ಯಕ್ಷ ಪ್ರಶ್ನೆ ..ಬೆಂಗಳೂರಿನಲ್ಲಿ ಇರೋ ಸಾಫ್ಟವೆರ ಇಂಜಿನಿಯರ್ ಗಳಿಗೆಲ್ಲ ಇದೆ ಗೋಳು.ನಮ್ಮನ್ನ ಕಂಡ ತಕ್ಷಣ ತಮ್ಮ ರೇಟ್ ನ್ನೇ ಬದಲು ಮಾಡುವ ಮನೆಯ ಬ್ರೋಕರ್ ಗಳು, ಮೀಟರ್ ಮೇಲೆ ೫೦ ರುಪಾಯಿ ಕೊಟ್ಟಾಗಲೇ ಹೊಕ್ತೀನಿ ಅಂತ ಹೇಳುವ ಆಟೋವಾಲಾಗಳು, ಯಾವುದೆ ಮುಲಾಜಿಲ್ಲದೆ ಮನೆ ಬಾಡಿಗೆ ಏರಿಸುವ ಮನೆ ಮಾಲೀಕರು, ಬ್ರ್ಯಾಂಡ್ ಎಂಬ ಸೋಗು ಹಾಕಿಕೊಂಡು ನಮ್ಮ ಜೇಬನ್ನ ದೋಚುವ ಬಟ್ಟೆಗಳು ಇರೋವರೆಗೂ ನಮಗೆ ನೋ ಸೇವಿಂಗ್!!
ಅಪ್ಪ ಹೇಳಿದ ಹಾಗೆ ಸೇವಿಂಗ ಲೆಕ್ಕಾನು ಶುರು ಮಾಡಿದ್ದಾಯ್ತು ..ಆದರೆ ಅದು ಯಾವ ದಿನವೂ ಟಾರ್ಗೆಟ್ ಮುಟ್ಟಿದ್ದು ನೆನಪಿಲ್ಲ..
ಅಜ್ಜಿ ಕೊಟ್ಟ ಒಂದು ರೂಪಾಯಿಯನ್ನ ಏಷ್ಟೋ ತಿಂಗಳವರೆಗೆ ಕಾದಿಡ್ತಾ ಇದ್ದ ದಿನಗಳು ಈಗ ಬರೀ ನೆನಪು. ಈಗ ಗೆಳೆಯರ ಜೊತೆ ಟೀ ಕುಡಿಯೋಕೆ ಹೋದ್ರೆ ಸಾಕು. ನೂರು ರೂಪಾಯಿ ಕ್ಷಣ ಮಾತ್ರದಲ್ಲಿ ಮಾಯ. ಮುನ್ನೂರು ರೂಪಾಯಿಯ ಬಟ್ಟೆ ನೋಡಿ ಅಬ್ಬ ಅನ್ನೋ ಕಾಲ ಹೋಯ್ತು .ಈಗ ಸಾವಿರ ರೂಪಾಯಿಯ ಬಟ್ಟೆ ನೋಡಿ ಒಳ್ಳೆ ಡಿಸ್ಕೌಂಟ್ ಇದೆಯೋ ಅಂತ ಮುಗಿ ಬಿದ್ದು ತುಗೊತೀವಿ ..ಇನ್ನು ಹೋಟಲಲ್ಲಿ ಟಿಪ್ಸ್ ಬೇರೆ ಕೇಡು ..ಮೊನ್ನೆ ಒಂದು ರೆಸ್ಟೊರಂಟ ನಲ್ಲಿ ಬಿಲ್ ಜೊತೆಗೆ ಟಿಪ್ಸ್ ಸಹ ಆಡ್ ಮಾಡಿದ್ದು ನೋಡಿ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ.ಮೋಸ್ಟ್ಲೀ ನನ್ನ್ ನೊಡಿ ಟಿಪ್ಸ್ ಕೊಡಲ್ಲ ಈತ ಅಂತ ತಾನೇ ಬಿಲ್ಲಲ್ಲಿ ಟಿಪ್ಸ್ ಹಾಕಿದ್ದ ಏನೋ .. ಏನು ಕೇಳದೆನೇ ಬಿಲ್ ಕೊಟ್ಟು ಬಂದೆ.. ಆಮೇಲೆ ಕೇಳಬೇಕಾಗಿತ್ತು ಅಂತ ಮನಸಿನಲ್ಲಿ ಪರಿತಪಿಸಿದ್ದೊ ಆಯ್ತು...ಈ ಮನಸೇ ಹೀಗೆ ತನ್ನ ಕೆಲಸ ತಡ ಮಾಡಿಯಾದ್ರೂ ಚಾಚೂ ತಪ್ಪದೇ ಮಾಡಿಬಿಡುತ್ತೆ...ಸ್ವಲ್ಪ ಮೊದಲೇ ಎಚ್ಚರಿಸಿದ್ದರೆ ನನ್ನ ಟಿಪ್ಸ್ ಹಣವಾದ್ರೂ ಉಳಿಯುತ್ತಿತ್ತು ..ಇದೆಲ್ಲದರ ಮೇಲಾಗಿ ಸಾಫ್ಟ್‌ವೇರ್ ಇಂಜಿನಿಯರ್ ಗಳೆಲ್ಲಾ ಸಿಕ್ಕಪಟ್ತೆ ದುಡ್ಡು ಎನಿಸ್ತಾರೆ ಅನ್ನೋ ಟ್ಯಾಗ್ ಬೇರೆ ಕೇಡು .. ನಮಗಿಂತ ಜಾಸ್ತಿ ನಮ್ಮ್ ಊರಲ್ಲಿ ಟ್ಯೂಷನ್ ಹೇಳುವ ಟೀಚರ್ ಜಾಸ್ತಿ ಉಳಿಸ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ..ಅವರು ಟ್ಯಾಕ್ಸ್ ನೂ ತುಂಬಲ್ಲ ಎಷ್ಟು ಸೇವಿಂಗ್ ಇದೆ ಅಂತ ತೋರಿಸೋದೂ ಇಲ್ಲ.ಒಳ್ಳೇ ಜಾಣರು.. ಇನ್ನೂ ಬೆಂಗಳೂರಂತಹ ಸಿಟಿ ಯಲ್ಲಿ ಎಷ್ಟು ಸಂಬಳ ಇದ್ದರೂ ಕಡಿಮೆ ನೇ.. ಹ್ಮ್...ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅನ್ನೋದೆನೋ ನಿಜಾ. ಆದರೆ ಹಾಸಿಗೆಯಲ್ಲಿ ಕಾಲು ಚಾಚೋಕು ಇಲ್ಲಿ ಸಿಕ್ಕಾಪಟ್ಟೆ ಹಣಾ ಸುರೀಬೇಕು ಕಣ್ರೀ :)..ಎಲ್ಲದರ ಮೇಲೆ ಟ್ಯಾಕ್ಸ್ ಬೇರೆ ... ಸುಲಿಗೆ ಅಂದ್ರೆ ಇದೆ. ಹ್ಮ್... ಕೊನೆಗೆ ಏನಾದ್ರೂ ಮಾಡಲೇ ಬೇಕು ( ಅಯ್ಯೋ ಯಾರ ಮನೆಗೂ ಕಣ್ಣ ಹಾಕೋ ಯೋಚನೆ ಇಲ್ಲಾ ಬಿಡಿ) ಅಂತ ಡಿಸೈಡ್ ಮಾಡಿದೆ .. ನೋ ಫ್ರೆಂಡ್ಸ್ ..ನೋ ಮೂವೀಸ್ .. ನೋ ಶಾಪಿಂಗ್ .. ನೋ ರೆಸ್ಟೋರಂಟ್ಸ್ ...ಕಂಪ್ಲೀಟ್ ವನವಾಸ !! ನನ್ನ ನಿರ್ಧಾರ ಕೇಳಿ ಜ್ಞಾನೋದಯವಾದಂತೆ ಕಂಡ ನನ್ನ ಗೆಳಯರೂ ಸಹ ನನ್ನ ಪಥವನ್ನೆ ತುಳಿಯಲು ಡಿಸೈಡ್ ಮಾಡಿದರು.
ಉಫ್ ...ವನವಾಸದ ಮೊದಲ ವೀಕೆನ್ಡ್ !!
ಹೇಗೋ ನನ್ನ ಲವರ್ ಗಿಟಾರ್ ಜೊತೆ ಕಾಲ ನೂಕ್ತಾ ಇದ್ದೆ..
" ಸುಧಿ .. ಲೊ.... ರೂಮಿಗೆ ಬಾರಲೊ ..ಫುಲ್ಲ್ ಬೋರ್ ಆಗ್ತಿದೆ.. ಪ್ರಾಮಿಸ್..ಜಸ್ಟ್ ರೂಮ್ ... ನೋ ರೋಮಿಂಗ್ " ಪರಸು ನ ಫ್ರಸ್ಟ್ರೇಶನ್ ಮಾತಿನಲ್ಲಿ ಎದ್ದು ಕಾಣುತ್ತಿತ್ತು.ಅವನೂ ನನ ಥರಾನೇ ಸೇವಿಂಗ್ ಅಕೌಂಟ್ ಸ್ಟಾರ್ಟ್ ಮಾಡಿದ್ದ . ಯಾರ ಜೊತೆಯೂ ಮಾತು ಹೇಳದೆ ಉಸಿರು ಬಿಗಿ ಹಿಡಿದು ಕೂತಿದ್ದ ನನಗೆ ಇಷ್ಟು ಇನ್ವಿಟೇಶನ್ ಸಾಕು ... ಬೈಕ್ ಏರಿ ಆತನ ರೂಮಿಗೆ ಧಾವಿಸಿದೆ.. " ಲೊ ಮಗನೆ ..ಜಸ್ಟ್ ಚಾಟಿಂಗ್ ನೋ ರೋಮಿಂಗ್ " ಮನಸ್ಸು ದಬಾಯಿಸ್ತಾ ಇತ್ತು..
"ಗೂತ್ತಪ್ಪ ನಾನು ಅಷ್ಟು ಕಂಟ್ರೋಲ್ ನಲ್ಲಿ ಇದೀನಿ ನೀನೇನು ನನಗೆ ಹೆಳೊದು ಬೇಡ "ಮನಸಿಗೆ ತಾಕೀತು ಮಾಡಿದೆ .
ಗ್ರೇಟ್ .. ನಾನು ಗ್ರೂಪ್ ದಲ್ಲಿ ಇದ್ದರೆ ಮಾತಿಗೆ ಬರ ಇಲ್ಲ.. ಇನ್ನೂ ಮತನಾಡುವ ವಿಷಯಗಳಿಗಂತೂ ಮೊದಲೇ ಇಲ್ಲ .. ಮಾತು ಪ್ರಾರಂಭ ಆಗಿದ್ದು ಪ್ರಶಾಂತ ನ ಕಾಲೆಳುವ ಮುಖಾಂತರ ..ಆಮೇಲೆ ಬಸು ನ ಹೊಟ್ಟೆ ಬಗ್ಗೆ ( ಬರೀ ಬೊಜ್ಜು... ಹಾ ಹಾ ) ..ಆಮೇಲೆ ಆಫ್ಕೋರ್ಸ್ ಎದರು ಮನೆ ಹುಡುಗಿ ಬಗ್ಗೆ ..ಸ್ವಲ್ಪ ಚಿಟ್ ಚಾಟ್ ಆದ ಮೇಲೆ ಸುಸ್ತೋ ಸುಸ್ತು.. ಟೀ ಟೈಮ್ !! .ಸ್ವಲ್ಪ ಹೊರಗಡೆ ಹೋಗಿ ಟೀ ಕುಡ್ಕೊಂಡು ಫ್ರೆಶ್ ಆಗಬೇಕು ಅಂತ ಎಲ್ಲರೂ ಹೊರಗೆ ಬಿದ್ವಿ. ಸಂಜು ಕಣ್ಣು ಟೀ ಕುಡಿತಾ ಪಕ್ಕದ ಮೂವೀ ಥಿಯೇಟರ್ ಮೇಲೆ ಬಿತ್ತು."ವಾವ್ ಹೊಸ ಮೂವೀ".... ಎಲ್ಲರೂ ಒಬ್ಬರನ್ನೊಬ್ಬರು ಮುಖ ನೋಡ್ತಾ ಕಣ್ಣಲ್ಲೇ ಮಾತಾಡಿದ್ದಾಯ್ತು .. ಹೇ ಹೇ ..ಆಮೇಲೆ ಏನಾಯ್ತು..ಮೂವೀ ಸಕತ್ತಾಗಿತ್ತು ... ವನವಾಸ ನೆಕ್ಸ್ಟ್ ವೀಕೆಂಡ್ ಗೆ ಪೋಸ್ಟ್ ಪೋನ್ !! ಹುರ್ರೆ !!
13 comments:
baraha da reete tumba mecchuge aaitu!!
Hege baritaa iiru..
Tumbane channagide. Haage baritaa iru. Love to read
Great sudhir.. nice to read.
khushi aytu odi. light hearted write-up. ulisbeku anta hodrene kharchu jasti agbidatte. adondu vichitra.
ond kelsa madi... no matter what, take-out a bit of your income n give it to your dad/mom or put it in a piggy bank/bank n forget it for few yrs ;) n learn to maintain with what u have.
Thank u Prabya, Shrini,Nabhi n Jayashree.. keep reading .ll pen down more ....Saving tips heliddake Jayashree ge thanks.. aaytu..savings start madteeni :)
mast ad le.. naanu try maadi bittaytu :)
Hmm..Rakya Idu yellar golu..no solution :)..Thank u for reading
ತುಂಬಾ ಚೆನ್ನಾಗಿದೆ.. :)
ನಾನು saving ಮಾಡೋಕೆ ಟ್ರೈ ಮಾಡ್ತೀನಿ ... :)
ನೋಡೋಣಾ ಏನಾಗತ್ತೆ ಅಂತ ...
Manjunath try maadi.. Savings nimmm plan prakaara aadre congrats..illa andrunu parvagilla try next time :)
bhari bardi pa...sudhir
Thanks Guru..Read other blogs also
Sooper le...
Malya,
Thanks le...keep reading :)
Post a Comment