Tagged under:

ಹ್ಯಾಪೀ ಫ್ರೆಂಡ್ ಶಿಪ್ ಡೇ



"ಟೂಯ್ ಟೂಯ್ "
ಆಗ ತಾನೇ ಸುಂದರವಾದ ಕನಸಿನಲ್ಲಿ ಹಾಯಾಗಿ ಮುಳುಗಿದ್ದ ನನಗೆ ಕಿವಿ ಪಕ್ಕದಲ್ಲಿ ಯಾರೋ ಕಿರುಚಿದ ಅನುಭವ ..
ಯಾರದಪ್ಪ ಇಷ್ಟು ಬೇಗನೇ ಮೆಸೇಜ್ ..ಮನಸ್ಸಿನಲ್ಲೇ ಗುನುಗುತ್ತಾ ಕಣ್ಣು ಜೋರಾಗಿ ಮುಚ್ಚಿದೆ.. ಮೊಬೈಲ್ ಮಾತ್ರ ಎಬ್ಬಿಸಲೇ ಬೇಕೆಂದು ಡಿಸೈಡ್ ಮಾಡಿತ್ತೇನೋ .ಇದ್ದಕ್ಕಿದ್ದಂತೆ ಏರ್ ಟೆಲ್ ಟ್ಯೂನ್ ಬಾರಿಸ್ತಾ ಕಿರುಚೋಕೆ ಶುರು ಆಯ್ತು !!. . ಉಫ್ಫ್.. ಮಲಗೋಕೂ ಬಿಡಲ್ಲ .ಯಾರದು ಇಷ್ಟು ಬೇಗ ಕಾಲ್ /?.
ಓಹ್ ಫ್ರೆಂಡ್ ನದು ..
"ಹೆಲೋ" ಕಣ್ಣು ತೆರೆಯೋಕೂ ಮನಸಿರಲಿಲ್ಲ .ಪಾಪ ಎಲ್ಲಿ ನಿದ್ರಾ ದೇವತೆ ಮುನಿಸಿಕೊಂಡರೆ !!
" ಹೈ ಲೇ.... ವಿಶ್ ಯು ಫ್ರೆಂಡ್ ಶಿಪ್ ಡೇ "
ಲೇ ಮಗನೆ ನಿನ್ನ ವಿಶ್ ಗೆ ಇದೆ ಟೈಮ್ ಬೇಕಾ.. ಆಮೇಲೆ ನಿಧಾನವಾಗಿ ಕಾಲ್ ಮಾಡಬಹುದಿತ್ತಲ್ಲ.. ಮನಸ್ಸಿನಲ್ಲೆ ಗುನುಗುತ್ತಾ ...
"ಓ ಥ್ಯಾಂಕ್ಸ್ .. ವಿಶ್ ಯು ದಿ ಸೇಮ್ "
ಕಾಲ್ ಕಟ್ ಮಾಡಿದೆ..ಹೆ ಹೆ ಇನ್ನೂ ಏನೇನು ಹೇಳಬೇಕು ಅಂತ ಮಾಡಿದ್ದೆನೋ .ನಾನು ನನ್ನ ನಿದ್ರಾ ಫ್ರೆಂಡ್ ಗು ವಿಶ್ ಮಾಡಬೇಕಲ್ಲ ..'ಐ ಲವ್ ಯು ಡಿಯರ್' ದಿಂಬನ್ಣ ಅಪ್ಪಿಕೊಳ್ತಾ ಅರ್ಧಕ್ಕೆ ನಿಂತಿದ್ದ ನನ್ನ ಕನಸಿನ ಲೋಕಕ್ಕೆ ಜಾರಿದೆ.
ಬೆಳಗ್ಗೆ ಎದ್ದಾಗ ಮೆಸೇಜ್ ಬಾಕ್ಸ್ ವಿಶ್ ಗಳಿನ್ದ ತುಂಬಿ ಹೋಗಿತ್ತು ..ಹ್ಮ್ ..ಫ್ರೆಂಡ್ ಶಿಪ್ ಡೇ . ಲೈಫ್ ಲ್ಲಿ ಫ್ರೆಂಡ್ಸ್ ಗಳಿಗೆ ಲೆಕ್ಕ ಇಲ್ಲ.ಚಿಕ್ಕವನಿಂದ ಈಗಿನವರೆಗೂ ಪರಿಚಯವಾದವರು ಸಾವಿರಾರು .ಆಪ್ತರಾದವರು ಕೆಲವರು ಮಾತ್ರ.ಮಿಕ್ಕವರು ಹಾಯ್ ಬಾಯ್ ಗಷ್ಟೆ ಸೀಮಿತ..ಈಗಲೂ ಕನೆಕ್ಟೆಡ್ ಆಗಿರುವವರು ಬೆರಳನಿಕೆಯಸ್ಟು.ಯಾಕೆ ಹೀಗೆ. ನನ್ನನ್ನು ನಾನೇ ಪ್ರಶ್ನೆ ಹಾಕಿಕೊಂಡೆ.ಪ್ರೈಮರಿ ಸ್ಕೂಲ್ ನಲ್ಲಿ ಸದಾ ಜೊತೆಯಲ್ಲೆ ಕಾಲ ಕಳೆಯುತ್ತಿದ್ದ ಗೀತಾ ಮಂಜು ಮಾಂತು ಅಶ್ವಿನಿ ಭಾರತಿ ಸಂಜು ಈಗ ಎಲ್ಲಿ .ದಿನವೂ ಶಾಲೆ ಮುಗಿದ ತಕ್ಷಣ ಎಲ್ಲರೂ ಕೂಡಿ ಕಳ್ಳ ಪೋಲೀಸ್ ಆಟ ಆಡ್ತಿದ್ದು ಮರೆಯೋಕೆ ಉಂಟಾ.. .ಚಿಕ್ಕ ಚಿಕ್ಕ ವಿಷಯಗಳನ್ನೇ ದೊಡ್ಡದು ಮಾಡಿ ಜಗಳ ಆಡಿದ್ದು , ಮರುದಿನ ಏನು ಆಗಿಲ್ಲವೇನೋ ಎಂಬಂತೆ ಮತ್ತೆ ಕೂಡಿ ಕುಣಿದಿದ್ದು .. ಉಫ್ಫ್ .. ಮೂವೀ ಯಲ್ಲಿ ತೋರಿಸುವ ಹಾಗೆ ಟೈಮ್ ಮಶೀನ್ ಇದ್ದರೆ ನಾನು ಮತ್ತೆ ನನ್ನ ಬಾಲ್ಯದ ಜೀವನಕ್ಕೆ ಧುಮುಕೋಗೆ ರೆಡೀ .ಆ ಕೂಡಿ ಬೆಳೆದ ಐದು ವರುಷಗಳ ನೆನಪು ಇನ್ನೂ ಮಾಸಿಲ್ಲ.ನನ್ನ ತರ್ಲೆಯಿಂದ ಒಮ್ಮೆ ಗೀತಾ ನ ಅಳಿಸಿದ್ದು ಈಗಲೂ ನಗೆ ಬರುತ್ತೆ . ಪಾಪ ಅವಳು ಮನೆಗೆ ಅಳುತ್ತ ಲೆ ಹೋಗಿದ್ಲು .ಸಾರಿ ಡಿಯರ್. ಛೇ ನಾನು ನಿಮ್ಮನೆಲ್ಲ ಮಿಸ್ ಮಾಡ್ಕೋತಿದಿನಿ ..ನಿಮ್ಗೆ ಇಲ್ವಾ ?
ಪ್ರೈಮರೀ ಸ್ಚೂಲ್ ಮುಗಿದ ಮೇಲೆ ಅಪ್ಪನ ಟ್ರಾನ್ಸ್ಫರ್ ಆಯ್ತು..ಹೊಸ ಊರು ..ಹೊಸ ಸ್ಕೂಲ್ ..ಇಲ್ಲಿ ಹಳೆಯ ಶಾಲೆಯ ಥರಾ ಮುಗ್ಧತೆ ಇರಲಿಲ್ಲ ..ಎಲ್ಲರೂ ಕಿಲಾಡಿಗಳು ..ಹೊಸ ಗೆಳೆಯರನ್ನು ಮಾಡಿಕೊಳ್ಳಲು ನನಗೇನೂ ಜಾಸ್ತಿ ಸಮಯ ಬೇಕಾಗಲಿಲ್ಲ ..ಸಂದೀಪ್ ಜಯತೀರ್ತ ಚೇತನ್ ಪ್ರಸಾದ್ ಶ್ರೀನಿ . ಆಹಾ ಎಲ್ಲದರಲ್ಲೂ ನಾವೇ ಮುಂದು .ನಾವು ಮಾಡಿದ ತರ್ಲೆಗಳು ಪರೀಕ್ಷೆಯ ಮಾರ್ಕ್ಸಗಳಿಂದ ಮುಚ್ಚಿ ಹೊಗುತ್ತಿದ್ದವು.. ಅರ ರೇ ನೀವೆಲ್ಲ ಈಗ ಎಲ್ಲಿ ?? ನನಗೆ ಒಮ್ಮೆ ಸಿಗಬಾರದಾ .
10th ಮುಗಿದ ತಕ್ಷಣ ದೂರದ ರೆಸಿಡೆನ್ಶಿಯಲ್ ಕಾಲೇಜ್ ಗೆ ಸೇರಿದೆ.ಇದು ಅಕ್ಷರಶಹ ಜೇಲು.ರೂಲ್ಸ್ ಗಳಿಗೇನೂ ಕಡಿಮೆ ಇರಲಿಲ್ಲ .ಸದಾ ಮಾಯಾ ಲೊಕದಲ್ಲಿಯೇ ಹಾರಾಡುತ್ತಿದ್ದ ನನಗೆ ಹಿಂಸೆಯಾಗಿತ್ತು.ಆದರೆ ಇಲ್ಲಿ ಕಲಿತದ್ದು ಬಹಳ..ಸದಾ ಅಪ್ಪ ಅಮ್ಮ ನೆರಳಲ್ಲಿಯೇ ಪ್ರಪಂಚ ಕಂಡಿದ್ದ ನಂಗೆ ಹೊಸ ಲೋಕ ಅನುಭವ ಆಗಿದ್ದು ಇಲ್ಲಿಯೇ ..ಇಲ್ಲಿ ಕಳೆದ ಎರಡು ವರುಷಗಳು ಗೋಲ್ಡನ್.. ಆಗಲೇ ನನ್ನ ಕನಸಿಗೆ ಹೆಗಲು ಕೊಟ್ಟು ಮುನ್ನೆಡಿಸಿದವನು ಕಾರ್ತಿಕ್ ..ಎಗ್ಸ್ಯಾಮ್ಸ್ ಗೆಲ್ಲ ಇಬ್ಬರು ಕೂಡಿಯೇ ಪ್ರಿಪರೇಶನ್ಸ್ ಮಾಡುತ್ತಿದ್ದೆವು...ಥ್ಯಾಂಕ್ ಯು ಕಾರ್ತಿಕ್ .. u r so special to me .ಎಲ್ಲಿದಿಯೋ ? ನನ್ನ ಮರೆತೆಯಾ.. ಸಿಕ್ರೆ ನಿಂಗೆ ಮಾಡ್ತೀನಿ ತಾಳು.
ಆ ದಿನಗಳು ಎಲ್ಲವೂ ಮಾಯ .ಈಗ ಬರೀ ನೆನಪು . ಸಮಯ ಗತಿಸಿದ ಹಾಗೆ ಅವೂ ಸಹ ಮರೆಯಬಹುದು.ಆಮೇಲೆ ಲೈಫ್ ಲ್ಲಿ ಮೀಟ್ ಆದರೆ ಓ ನಾನು ಈತನಣ್ಣ ಎಲ್ಲೋ ನೋಡಿದ್ದೀನಲ್ಲ ಅಂತ ಭಾಸವಾಗಬಹುದು ಅಥವಾ ಕಂಡೂ ಕಾಣದಂತೆ ಮರೆಯಾಗಬಹುದು. ಇನ್ನು ಡಿಗ್ರಿ ಕಾಲೇಜ್ ಸಡಗರನೇ ಬೇರೆ. ಇವರೆಲ್ಲ ಈಗಲೂ ಸಿಗ್ತಾರೆ .ಹೊಸ ಫ್ರೆಂಡ್ಸ್ ರ ಬಳಗ ಇದ್ದರೂ ನನ್ನ ಜೀವನದ ದಾರಿಯಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ ಹಳೆ ಫ್ರೆಂಡ್ಸ್ ರನ್ನ ಮರೆಯೋಕೆ ಹೇಗೆ ಸಾದ್ಯ ?.ಓರ್ಕುಟ್ ಫೇಸ್ ಬುಕ್ ನೆಟ್‌ವರ್ಕಿಂಗ್ ಸೈಟ್ ನಲ್ಲಿಯೂ ಅವರ ಪರಿಚಯ ಕಾಣದಾಯ್ತು .. .ನೋಡೋಣ ಭೂಮಿ ದುಂಡಗಿದೆ.ನಮ್ಮ ದಾರಿ ಎಲ್ಲಿಯಾದರೂ ಕೂಡಬಹುದು .ಮೀಟ್ ಆಗೋಕೆ ಲೈಫ್ ಲ್ಲಿ ಅವಕಾಶ ಸಿಕ್ರೆ ನಾನು ಲಕೀ .ಮೊಬೈಲ್ ನಲ್ಲಿ ರೊ ಗೆಳಯರಿಗೆಲ್ಲ ವಿಶ್ ಕಳಿಸಿದೆ.ಇನ್ನು ಫೋನ್ ಬುಕ್ ನಲ್ಲಿ ನೂರಾರು ನಂಬರ್ ಇದ್ರು ಕಾಲ್ ಮಾಡೊದು,ಮೀಟ್ ಆಗೋದು ಕೆಲವೇ ಫ್ರೆಂಡ್ಸ್ ರಿಗೆ ಮಾತ್ರ. ಎಲ್ಲರೂ ಹೇಳೋದು ಒಂದೆ ನೋ ಟೈಮ್ ಕಣೋ .ಹಾ ಹಾ . ಕಾಲೇಜ್ ಸಮಯದಲ್ಲೆ ಜಾಸ್ತಿ ಟೈಮ್ ಪಾಸ್ಸ್ ಮಾಡಿದ್ವಿ ಅಂತ ಕಾಣ್ಸುತ್ತೆ ಈಗ ಟೈಮ್ ಗು ಕೊರತೆ ಆಗಿದೆ .ಮನಸ್ಸಿನಲ್ಲಿ ಹಳೆ ಗೆಳೆಯರನ್ನು ಮೇಲಕು ಹಾಕುತ್ತಾ ಹೊಸ ಗೆಳಯರ ಜೊತೆ ಹರಟೆ ಹೊಡೆಯುತ್ತಾ ಫ್ರೆಂಡ್‌ಶಿಪ್ ಡೇ ಕಳೆದೆ.ಹೊಸ ಫ್ರೆಂಡ್ಸ್ ರಿಗೇನು ಕೊರತೆಯಿಲ್ಲ .ಎಲ್ಲರೂ ಕ್ಲೋಸ್ ಫ್ರೆಂಡ್ಸ್-ಗುಡ್ ಫ್ರೆಂಡ್ಸ್- ಫ್ರೆಂಡ್ಸ್ ಹೀಗೆ ಮನಸ್ಸಿನ ವಿವಿಧ ಸೆಕ್ಷನ್ ದಲ್ಲಿ ಸೇರುತ್ತಾ ಹೋಗುವರು .ಆಗಾಗ ಚಿಕ್ಕ ಪುಟ್ಟ ವಿಷಯಗಳಿಗೆ ಮನಸ್ತಾಪ ಆಗಿ ಕೆಲವೊಮ್ಮೆ ಈ ಲಿಸ್ಟ್ ಗಳೂ ಶಫಲ್ಲ್ ಆಗುವುದುಂಟು. ಏನೇ ಆಗಲಿ ಫ್ರೆಂಡ್ಸ್ ಲೈಫ್ ಲ್ಲಿ ಕಲಿಸೊ ಪಾಠ ಬೇರೆ ಯಾರೂ ಕಲಿಸಲು ಸಾದ್ಯವಿಲ್ಲ .ಆಯ್ ಲವ್ ಯು ಆಲ್ .ಆಫ್ ಲೇಟ್ ವಿಶ್ ಯು ಹ್ಯಾಪೀ ಫ್ರೆಂಡ್ ಶಿಪ್ ಡೇ .ಬಿ ಇನ್ ಟಚ್ ..

8 comments:

Roopa said...
This comment has been removed by the author.
Roopa said...

Guarantee ond dina Flying colors tara ne ningu tumba fans sigtare nodu :) hehe.....real goood.....keep writing no matter how young or old ul be in the years to come :),

Sudhir said...

he he..Thanks Roops.. khandita bareetini..u keep commenting :)

anilmalali said...

ಹ್ಯಾಪೀ ಫ್ರೆಂಡ್ ಶಿಪ್ ಡೇ
ತುಂಬಾ ಚೆನ್ನಾಗಿತ್ತು . ಭಾವನೆಯನ್ನ ವ್ಯಕ್ತಗೊಲಿಸಿದ ರೀತಿ ತುಂಬಾ ತುಂಬಾ ಚೆನ್ನಾಗಿದೆ . ಕೆಲಸದ ಜಂಜಾಟದಲ್ಲಿ ಬರೆಯುದೋ? ತುಂಬಾ ಕಠಿಣ ,ಹೇಗೆ ಬರದೆಯೋ ಗೊತ್ತಿಲ್ಲ . ಹೀಗೆ ಬರೀತಾ ಇರೀ .the photo that u attached with the article is really a good matching ,i really enjoyed it . ಒಹ್ ಭಾವನೆಗಲೋ ತುಂಬಾ ತುಂಬಾ .................

Unknown said...

Hey nice one yar.. I'm feeling very nostalgic after reading this remeberin my old pals.. Very emotional.. N' belated wishes for friendship day :)..

Sudhir said...

@Anil,
welcome to my profile..read other blogs also :)

@Supriya,
Thank u.. We have not connected th many of our old friends who added some spices to our life sometime.This article is dedicated to them.. :)

Nitty said...

Hi Sudhi,.

I really wonder how cm you put the appropriate words 2gather. Those lines won't be just quoted words, in fact they themselves will be live expressions.

Probably U are the triggering point for start of my blogging,.! Unmet, neve spoken, yet impressive ;)

Thnx, en Belated wishes of d Good time,. Stay tuned :)

Sudhir said...

Nitty,
Thank u very much for ur compliments.I got wings :) ..he he..nice to kno dat u r intersted in blogging.. good luck