Tagged under:

ಹ್ಯಾಪೀ ಹೋಲಿ








ಮೈಯೆಲ್ಲಾ ಮೆತ್ತಿದ ಬಣ್ಣ ಆಗಲೇ ಮನಸೆಲ್ಲ ಒದ್ದೆ ಮಾಡಿತ್ತು.ಎಚ್ಚರವಾಗಿ ಕಣ್ಣು ಬಿಚ್ಚಿ ನೋಡಿದರೆ ಬೆಳಗ್ಗೆ 7 ಗಂಟೆ.ಮತ್ತೆ ಮಲಗಲು ಪ್ರಯತ್ನಿಸಿದರೂ ಕನಸು ಆಗಲೇ ಬೆಳಕಿಗೆ ಹೆದರಿ ಮಾಯವಾಯಿತು. ಹೊರಗಡೆ ಪುಟಾಣಿಗಳು ಬಲೂನಿನಲ್ಲಿ ಬಣ್ಣ ತುಂಬಿ ಬಣ್ಣದ ಲೋಕದಲ್ಲಿ ಇಳಿಯಲು ತಯಾರೀ ನಡೆಸುತ್ತಿದ್ದರು. ಬೇರೆ ಗ್ರಹದ ಪ್ರಾಣಿಗಳೂ ನಾಚುವಂತೆ ಬದಲಾಗುತ್ತಿದ್ದ ನಮ್ಮ ವೇಷಗಳು, ಒಂದು ವಾರದವರೆಗೂ ಮುಖದಿಂದ ಅಳಿಯದ ಬಣ್ಣಗಳು, ಬಟ್ಟೆಗಳನ್ನೆಲ್ಲ ಹರಿದುಕೊಂಡು ಬಣ್ಣದ ಓಕಳಿಯಾಡಲು ಗೆಳೆಯರ ಬೇಟೆಯಾಡುತ್ತಾ ಅಲೆಯುವ ದಿನಗಳನ್ನು ಮನದಲ್ಲೇ ನೆನೆದು ನಕ್ಕೆ.ಈಗ ಎಲ್ಲರೂ ಬೆಂಗಳೂರಿನ ಸೂಪರ್ ಫಾಸ್ಟ್ ಟೈಮ್ ಜೊತೆ ಕುಣಿಯೋದರಲ್ಲಿ ಬೂಸಿ. ಯಾರಿಗೂ ಹಳೆ ನೆನಪುಗಳನ್ನು ಮರಳಿ ತರಲು ಸಮಯವಿಲ್ಲ. ಇನ್ನು ಚಂದ್ರನಲ್ಲಿಯೂ ನೆಲ ಮಾರಾಟಕ್ಕಿದೆ ಅನ್ನೋದು ಮೊನ್ನೆ ಪೇಪರ್ ಲ್ಲಿ ಪ್ರಕಟವಾದ ಮೇಲೆ ಕೆಲವರ ಕನಸು ಇನ್ನೂ ಎತ್ತರವಾಗಿದೆ. ಅವರೆಲ್ಲ ಕನಸು ನನಸು ಮಾಡೋದರಲ್ಲಿ ಮಗ್ನ. ಬಣ್ಣ ಆಡುವ ಯೋಗ ಈ ಸಲವೂ ಬರಲಿಲ್ಲ. ಅದೆ ಹಳೆ ನೆನಪು ಮೆಲಕು ಹಾಕುತ್ತಾ ತಿಂಡಿ ತಿಂದು ಮುಗಿಸೋದೊರಳಗೆ ಸಮಯ 10 ಗಂಟೆ.

"ಎನ್ ಲೇ ಎನ್ ಮಾಡ್ತೀದೀಯಾ ..ರೆಡೀ ಆಗಿಲ್ಲೇನ್ ಇನ್ನೂ .. ಜಲ್ದಿ ಬಾ" ರಘುನ ವೇಳಾಪಟ್ಟಿ ತಯಾರಾಗಿತ್ತು. ನoದಿ ಹಿಲ್ಸ್ ಗೆ ಹೋಗೋಣ ಅಂತ ಯಾವಾಗಲೋ ಹೇಳಿದ್ದ. ಏನೋ ಗಾಳಿಯಲ್ಲಿ ಗುಂಡು ಹಾರಿಸಿದನೇನೋ ಅಂದುಕೊಂಡಿದ್ದೆ.

ಅರೆ ತುಂಬಾ ಸೀರೀಯಸ್ ಆಗಿಯೇ ಕಾಲ್ ಮಾಡಿದ್ದ. ನನಗೂ ನoದಿ ಹಿಲ್ಸ್ ನೊಡೊ ಕುತೂಹಲ.ಕೊನೆಗೂ ಎಲ್ಲರೂ ಸೇರಿ ಹೊರಡುವಾಗ ಸಮಯ 12 30 ಮುಟ್ಟಿತ್ತು.ನಾನು ಟ್ರ್ಯಾಫಿಕ್ ನಲ್ಲಿ ಮತ್ತೆ ಸಿಕ್ಕು ಮತ್ತೆ ಲೇಟಾಗಿ ಗುಂಪು ಸೇರಿದೆ(ಅಯ್ಯೋ ಏನು ಅನುಮಾನವಾ ನಿಜಾ. ನಂಬಿ ). ..ಎಲ್ಲರೂ ಲೇಟ್ ಆಗಿದ್ದಕ್ಕೆ ನನ್ನ ಮೇಲೆನೆ ಗೂಬೆ ಕೊರಿಸಿದ್ರು. ಮುಗ್ಧರಿಗೆ ಕಾಲ ಇಲ್ಲ ಬಿಡಿ. ಜಯಂತ ಕಾರಿನಲ್ಲಿ ನಾನು ..ಜಯಂತ.. ಪರಸು...ಪ್ರಶಾಂತ.. ರಘು ಕೂತಿದ್ದು. ಆಮೇಲೆ ಪ್ರತಾಪ ತನ್ನ ಸೂಪರ್ ಮ್ಯಾನ್ ಸ್ಟೈಲ್ ಲ್ಲಿ ಬೈಕ್ ತುಗೊಂಡು ಹೆಬ್ಬಾಳ ಹತ್ತಿರ ನಮ್ಮನ್ನು ಕೂಡಿಕೊoಡ.
ಏರ್‌ಪೋರ್ಟ್ ರೋಡ್ ಲ್ಲಿ ಡ್ರೈವ್ ಮಾಡೋದು ಸೂಪರ್ರ್ ಮಜಾ.. NFS ಗೇಮ್ ಲ್ಲಿ ಕಾರು ಓಡಿಸಿದ ಹಾಗೆ ನಾವೂ ಅಕ್ಕ ಪಕ್ಕದ ಕಾರನ್ನು ಹಿಂದಿಕ್ಕಿದೆವು. 2 ಗಂಟೆಗೆ ಧಾಬಾ ಗೆ ಹಾಜರ್ರ್.ಇದೊಂದೇ ಅನ್ಸುತ್ತೆ ನಾವು ಸಮಯಕ್ಕೆ ಸರಿಯಾಗಿ ಪಾಲಿಸೊದು.ಚೆನ್ನಾಗಿ ಮುಕ್ಕಿದ ಮೇಲೆ ನಿದ್ರೆಗೇನೂ ಬರವಿಲ್ಲ. ಸ್ವಲ್ಪ ಅಲ್ಲೇ ಇದ್ದ ದ್ರಾಕ್ಷಿ ತೋಟದಲ್ಲಿ ಕುಳಿತು ಚಿಂತನ ಕೂಟವೂ ಆಯ್ತು.ಟಾಪಿಕ್ ಏನು ಅಂತ ಕೇಳ್ಬೇಡಿ .ನಂಗೂ ನೆನಪಿಲ್ಲ .ಹೆ ಹೆ
ಮತ್ತೆ ನoದಿ ಹಿಲ್ಸ್ ಗೆ ಹೊರಟಿದ್ದು 4 ಗಂಟೆಗೆ.ಬೆಟ್ಟ ನಾನು ಊಹಿಸಿದ್ದಕ್ಕಿಂತ ಮನಮೋಹಕವಾಗಿದೆ. ಉರಿ ಬಿಸಿಲಲ್ಲೂ ಹಸಿರನ್ನು ಅಪ್ಪಿಕೊಂಡು ಆಕಾಶ ಮುತ್ತಿಕ್ಕುವ ಬೆಟ್ಟಗಳನ್ನು ನೋಡಲು ಕಣ್ಣಿಗೆ ಹಬ್ಬ.ನoದಿ ಬೆಟ್ಟವನ್ನು ಸುತ್ತು ಹೊಡೆದು ತುದಿಗೆ ತಲುಪಿದಾಗ ಸರಿಯಾಗಿ ಸಂಜೆ 4 40. ಬಂಡೆಯಿಂದ ಬಂಡೆಗೆ ಕುಣಿಯುತ್ತಿದ್ದ ಮಂಗಗಳು ನಮ್ಮನ್ನು ನೋಡಿದ ಮೇಲೆ ಹೆದರಿದವು (ನಮ್ಮ ಮಂಗ ಚೇಷ್ಟೆಗಳಿಗೆ ಹೆದರದೇ ಇನ್ನೇನು).

ನಾವು ಫೋಟೋ ಕ್ಲಿಕ್ಕಿಸುತ್ತಾ ಚೀರುತ್ತ ಸಿಳ್ಳೆ ಹೊಡೆಯುತ್ತಾ ಬೆಟ್ಟದ ತುದಿಯಲ್ಲಿ ಸೂರ್ಯ ಜಾರುವ ಕ್ಷಣಕ್ಕೆ ಕಾದೆವು. ಕೊನೆಗೆ ಬಣ್ಣದ ಬಣ್ಣದ
ಸೂರ್ಯನ್ನ ಸೆರೆ ಹಿಡಿದು ಬಣ್ಣ ಆಡಿದ್ದು ಆಯ್ತು.. ಪೂರ್ಣ ಚಂದ್ರ ಆಗಲೇ ಇಣುಕಿ ನೋಡುತ್ತಿದ್ದ.ಬೆಟ್ಟದ ತುದಿಯಿoದ ಹಲ್ಲು ಕಿರಿಯುತ್ತಾ ಅಲ್ಲಿದ್ದ ಮಂಗಗಳೂ ನಗುವಂತೆ ಪೋಸು ಕೊಡುವುದನ್ನು ಕ್ಲಿಕ್ಕಿಸಿದ್ದು ಆಯ್ತು. ಸಮಯ ಆಗಲೇ 6 30. ನಸು ಗತ್ತಲು.
ಮತ್ತೆ ಕಾರಿನಲ್ಲಿ ಧುಮುಕಿ ಹೊರಗೆ ಇಣುಕಿ ನೋಡಿದರೆ ಅಲ್ಲಿಂದ ಕದಲಲು ಒಲ್ಲದ ಮನಸ್ಸು ಭಾರವಾಗಿತ್ತು.ನೋಡು ನೋಡುತ್ತಿದ್ದಂತೆಯೇ ಎಲ್ಲವೂ ಮರೆಯಾಗಿ ಮೊಟಾರುಗಳ ಆರ್ಭಟ ನಮ್ಮನ್ನು ಬರಮಾಡಿಕೊಂಡಿತು. ಮನಸು ಮಾತ್ರ ಬಯಕೆಗಳ ಗೊಂದಲದಲ್ಲಿ ಗೂಡು ಮರೆತ ಹಕ್ಕಿಯಂತೆ ಮೌನವಾಗಿತ್ತು. ಮತ್ತೆ ಆ ಬಣ್ಣದ ಲೋಕ ಕಾಣಲು ಪರಿತಪಿಸುತ್ತಿತ್ತು.
ಥ್ಯಾಂಕ್ಸ್ ರಾಗ್ಯಾ.I dedicate this trip to u. ಸೋ ಮತ್ತೆ ಬಣ್ಣ ಆಡೊದು ಯಾವಾಗಾ ...

16 comments:

Mallesh KR said...

Good one le....In this we strongly miss the character Parshya?

Anonymous said...

le mabb,,,,,, masta bardila :)its gud one sUDHI

Sudhir said...

@Mallesh,
Parshya was quite in this trip...Enu tarle maadlilla :)

Who is this Anonymous ??? swlpa hesru bareebarda ..

Jayashree said...

"ಮನಸು ಮಾತ್ರ ಬಯಕೆಗಳ ಗೊಂದಲದಲ್ಲಿ ಗೂಡು ಮರೆತ ಹಕ್ಕಿಯಂತೆ ಮೌನವಾಗಿತ್ತು". e line super.

Jai said...

Very nice le..,,, ful trip REPLAY aad'hung aaatu :-)

Keep Going!!

Sudhir said...

@Jayshree
Thank u :)

@ Jay
keep reading

Unknown said...

Sudhir mast baradi le...:)
keep it up..

Sudhir said...

@ Bhagya,
heege odutta iru :)

Unknown said...

Awesome yar..
I dont know from where ll u get (Oops.. sorry how ll u think of) all these dramatic lines..

I wish u do somethin worth rememberin in every moment of life and enjoy every bit of it..

Anonymous said...

Nice writting that 2nd picture is very nice gud luck keep writting like dis "happy holi", bye..........

Unknown said...

hi sudir realy chennagi bardidiya .
matte barita eru

Sudhir said...

@Supriya
Thx ..its not dramatic lines ..its realistic :)

@Swathi
Happy holi u too .. heege odutta iru :) thank u

@ Suman
thx guddy :) ..keep reading

Shweta said...

say cheese still more...:-)(jus kidding)..cooooooooooool pics.

Sudhir said...

@Shweta,
Thx Shweta..Keep reading :)

Shrinivas sonnad said...

Good one

Sudhir said...

@Shrini
Thanks Anna. .