Tagged under:

ಹೊಸ ಗೆಳತಿಯ ಮೊದಲ ರೊಮ್ಯಾನ್ಸ್..ಮಂಚಿನಬೇಲೆ ಟ್ರಿಪ್


"38 ಕೀ ಮಿ ರೈಡ್ ! ಅದೂ ಸೈಕಲ್ ಮೇಲೆ :-L!!" ಆಫೀಸಲ್ಲಿ ಮ್ಯಾನೇಜರ್ ಮಾತು ಕೇಳುವಂತೆ ನಟಿಸುತ್ತಾ ಮನದಲ್ಲೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಮೀಟಿಂಗ ಮುಗಿಯುವ ಹೊತ್ತಿಗೆ
"ಎಸ್ I m IN" ಮೈಲ್ ಕಳಿಸಿದ್ದಾಯ್ತು ..
ರಘು, ಅಭಿಜಿತ್, ಸಂಗಮೇಶ್, ಚಿನ್ಮಯ, ಶ್ರೀನಿ, ಸಂತೋಷ್, ಪರಮ್ ಕೊನೆಗೆ ನಾನೂ ಸೇರಿದ ಮೇಲೆ ಸೈಕಲ್ ಸವಾರರ ಸಂಖ್ಯೆ 8 ಕ್ಕೆ ತಲುಪಿತು.. ಟಾರ್ಗೆಟ್ ಪ್ಲೇಸ್ ಮಂಚಿನಬೇಲೆ. ಬೆಂಗಳೂರಿನಿಂದ 38 ಕೀ ಮಿ ದೂರ!
ಲಗುಬುಗನೆ ಹೊಸ ಸೈಕಲ್ ಗೆಳತಿಯ ಸವಾರಿ ಮಾಡುತ್ತ ಅಣ್ಣ ಶ್ರೀನಿ ಮತ್ತು ಪರಮ್ ಜೊತೆ ನಾನು ಜೆ ಪಿ ನಗರದಿಂದ-ವಿಜಯ ನಗರದ ರಘು ಮನೆ ತಲುಪಿದಾಗ ಸಂಜೆ 4 30 . .ಹುಹ್ b-(! ಟ್ರಿಪ್ ಗಿಂತ ಮೊದಲೇ ಸುಮಾರು 15 ಕೀ ಮಿ ಕ್ರಮಿಸಿದ್ದಾಯ್ತು.ಕೊನೆಗೆ ರಘು ಮನೆಯಿಂದ ನಮ್ಮ ಸೈಕಲ್ ದಂಡು ಹೊರಟಿದ್ದು ಸಂಜೆ 5 30 ಗೆ.
ಯೂನಿವರ್ಸಿಟಿ ಮೂಲಕ ರಸ್ತೆಯಲ್ಲಿ ಟ್ರ್ಯಾಫಿಕ್ ಮದ್ಯೆ ಸರ್ಕಸ್ ಮಾಡುತ್ತ ಬೆಂಗಳೂರಿನಿಂದ ಹೊರಗೆ ಬರುವ ಸಮಯಕ್ಕೆ ವೇಳೆ ಸಂಜೆ 6 ತಲುಪಿತ್ತು..ರಸ್ತೆಯ ತಗ್ಗುಗಳಿಗೆ ಹಾಯಾಗಿ ನಗುತ್ತ :), ಉಬ್ಬುಗಳಿಗೆ ಮುಖ ಕಿವುಚಿಕೊಂಡು :-& ಸೈಕಲ್ ತುಳಿಯುತ್ತ ಕೆಲ ದೂರ ಕ್ರಮಿಸುವ ಹೊತ್ತಿಗೆ ಕತ್ತಲು ಆಗಲೇ ಬೆಳಕು ಸರಿಸುತ್ತಿತ್ತು.
ಇಕ್ಕೆಲ ಕಾಲು ದಾರಿ. ಸುತ್ತಲೂ ಮರಗಳು. ನಿರ್ಜನ ಪ್ರದೇಶ. ಅಲ್ಲಲ್ಲಿ ಹಳ್ಳಿಗರು ಪ್ರತ್ಯಕ್ಷವಾಗಿ ಕತ್ತಲಲ್ಲಿ ಮಾಯವಾಗುತ್ತಿದ್ದರು.
"ಇಲ್ಲೆಲ್ಲಾ ಹೀಗೆ ಬರಬೇಡಿ ಸ್ವಾಮಿ.ಇಲ್ಲಿ ಕರಡಿ ಚಿರತೆ ಜಾಸ್ತಿ ಇವೆ.ವಾಪಸ್ ಹೋಗಿ" ದಾರಿ ಹೋಕ ನಮಗೆ ಎಚ್ಚರಿಸಿದ.
ನಮಗೇನೋ ಅದರ ಪರಿವು ಇರಲಿಲ್ಲ. ಎಲ್ಲ 8 ಮಂಗಗಳೂ ( ಮತ್ತೆ ನಾವೆನು ಮಂಗಗಳಿಗಿಂತ ಕಡಿಮೆ ನಾ :O)) ಒಟ್ಟಿಗೆ ದಾಳಿ ಮಾಡಿದರೆ ಯಾವ ಪ್ರಾಣಿಯೂ ನಿಲ್ಲಲ್ಲ ಅನ್ನೋ ವಿಶ್ವಾಸ ಬೇರೆ!
ಕಪ್ಪು ಗುಹೆಯಲ್ಲಿ ಮಿನ್ಚುಳ್ಳಿ ಹಾರೋ ತರಹ ಕತ್ತಲು ಕಾಡಿನ ಮದ್ಯೆ ನಮ್ಮ ಪುಟ್ಟ ಟಾರ್ಚ್ ಕತ್ತಲು ಸೀಳುತ್ತಿತ್ತು.ಕಲ್ಲು ಮುಳ್ಳಿನ ರಸ್ತೆಯಲ್ಲಿ ಅನುಭವಕ್ಕೆ ತಾಕಿದ್ದು ರಸ್ತೆಯ ಉಬ್ಬು ತಗ್ಗುಗಳು.ತಗ್ಗು ಹಿತವೆನಿಸಿದರೆ ಉಬ್ಬು ಕಿರಿ ಕಿರಿ ಮಾಡುತ್ತಿತ್ತು. . ಅಲ್ಲಲ್ಲಿ ಪುಟ್ಟ ಪುಟ್ಟ ಹಳ್ಳಿಗಳನ್ನು ಹಿಂದೆ ನೂಕುತ್ತಾ ಸಾಗಿದೆವು..
ಹಳ್ಳಿಗರು ನಮ್ಮನ್ನು ನೋಡುವ ಪರಿ ಗಮನಿಸುತ್ತಿದ್ದೆ.
"ದಾರಿ ತಪ್ಪಿ ಬಂದಿರಬಹುದಾ " ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು.
ನಾಯಿಗಳಿಗೆ ಕತ್ತಲಿನ ಸೈಕಲ್ ಭೂತಗಳನ್ನು >:) ಯಾವ ರೀತಿ ಹೆದರಿಸಬೇಕು ಅನ್ನೋ ತಾಕಲಾಟ.ಆಷ್ಟರಲ್ಲಿ ನಮ್ಮ ಸೈಕಲ್ ಕಾಲು ದೂರ ಕ್ರಮಿಸಿ ಆವುಗಳಿಂದ ಮರೆಯಾಗುತ್ತಿತ್ತು.
ಚಿಕ್ಕ ಆಲದ ಮರದ ಕೆಳಗೆ ಸಿಳ್ಳೆ ಹೊಡೆದು ಹಲ್ಲು ಕಿರಿಯುತ್ತ ಕಾಲ ಕಳೆದದ್ದಾಯ್ತು.

ನಂತರ ಅಲ್ಲಿಂದ ಕಾಲ್ಕಿತ್ತು ದೊಡ್ಡ ಆಲದ ಮರ ಹಳ್ಳಿ ಮುಟ್ಟಿದಾಗ ಸಮಯ 7 45..ಮಂಚಿನಬೇಲೆ ಕೇವಲ 2 ಕೀ ಮಿ ಹತ್ತಿರದಲ್ಲಿ ಮತ್ತೆ ಹರಟೆ ,ವಿಶ್ರಾಂತಿ.. ಅಲ್ಲಿಗೆ ಅಜಯ್, ನಿಕಿತಾ, ಅನುಪಮಾ, ವೀಣಾ S ಮತ್ತು ವೀಣಾ B ಕಾರು ಮೂಲಕ ನಮ್ಮನ್ನು ಸೇರೋ ಮೂಲಕ ನಮ್ಮ ಸಂಖ್ಯೆ 13 ಕ್ಕೆ ಏರಿತು.. ಕೊನೆಗೆ ಮಂಚಿನಬೇಲೆ ಹಿನ್ನೀರಿನ ದಡದಲ್ಲಿ ನಾವು ಸೇರಿದಾಗ ಸಮಯ ರಾತ್ರಿ 9 30 .
ಕತ್ತಲು ಎಲ್ಲವನ್ನೂ ಮರೆಮಾಚಿತ್ತು.ಚಿಕ್ಕ ಮಗುವಿನಂತೆ ಕಣ್ಣು ಪಿಳಿಕಿಸುತ್ತಾ 8-> ಕತ್ತಲಾಚೆ ಏನಿರಬಹುದು ಅಂತ ಕಲ್ಪಿಸತೊಡಗಿದೆ.ಅರ್ಧ ಚಂದ್ರಮ, ಬೆಳದಿಂಗಳ ಸ್ಪರ್ಶಕೆ ನಾಚಿ ಬೆಳ್ಳಿಯಂತೆ ಮಿನುಗುತ್ತಿದ್ದ ಹಿನ್ನೀರು, ಕಪ್ಪು ಕಂಬಳಿ ಹೊದ್ದು ನಮ್ಮನ್ನು ಹೆದರಿಸುವ ಗುಮ್ಮನಂತೆ ಗುರಾಯಿಸುತ್ತಿದ್ದ ಬೆಟ್ಟಗಳು ಎಲ್ಲವೂ ಮುಸುಕು ಮುಸುಕು.ಗೂಡು ಕಟ್ಟಿ ಕಟ್ಟಿಗೆ ಕೂಡಿಸಿ ಬೆಂಕಿ ಹೊತ್ತಿಸಿದಾಗ ಸಮಯ 10 30.ಹೊಟ್ಟೆಗೆ ಹಿಟ್ಟು ಹಾಕಿ ತಣ್ಣಗಾಯಿಸೋ ಹೊತ್ತಿಗೆ ರಾತ್ರಿ 12 ಸಮೀಪಿಸಿತು.


ಉರಿಯುವ ಜ್ವಾಲೆಯಲ್ಲಿ ಫಳ ಫಳ ಮಿನುಗುವ ಕೆಂಡ ನೋಡುತ್ತಾ,ಸಾಲು ಸಾಲು ಚುಕ್ಕಿ ಎಣಿಸುತ್ತಾ ನಿದ್ರೆಗೆ ಜಾರಿದ್ದು ಅರಿವಿಗೆ ಬರಲಿಲ್ಲ.ನಿದ್ರೆಯೂ ಸ್ತಬ್ಧ ಸುಂದರ ಜಗತ್ತು ಕಂಡು ಮಾರು ಹೋಯಿತೇನೋ!
ಕ್ಷಣದಲ್ಲಿ ರಾತ್ರಿ ಗತಿಸಿತು.ತಿಳಿಗಾಳಿ ಮೈಗೆ ಸೋಕಿದಾಗ ಬೆಳಗ್ಗೆ 5 30.

ಕೆಂಡ ಕೆಂಪಗೆ ಹೊಗೆಯಾಡುತ್ತಿತ್ತು.ಅದೇ ಶಾಂತ ಮುಗ್ಧ ಲೋಕ.ದೂರದಿಂದಲೇ ಕಣ್ಣು ಪಿಳಿಕಿಸುತ್ತಿದ್ದ ಚಂದಿರ,ಸದ್ದಿಲ್ಲದೇ ಮಿನುಗುತ್ತಿದ್ದ ಹಿನ್ನೀರು, ತೇವಗೊಂಡು ಶುಭ್ರವಾಗಿದ್ದ ಹುಲ್ಲಿನ ಹಾಸಿಗೆ,ಬೆಟ್ಟದ ತುದಿಯಿನ್ದ ನಮ್ಮನ್ನು ಇಣುಕಲು ಸಿಧ್ಧಗೊಳ್ಳುತ್ತಿದ್ದ ಸೂರ್ಯ ಎಲ್ಲವೂ ಬೆಳಗಿನ ವಯ್ಯಾರ ತೋರಲು ಅಣಿಯಾಗುತ್ತಿದ್ದವು.


ಕತ್ತಲು ಮರೆಯಾಗಿ ಬೆಳಕು ಹರಿಯುತ್ತಿದ್ದಂತೆ ಮಾಯಾಲೋಕ ನಮ್ಮೆದುರಿಗೆ ತೆರೆದುಕೊಂಡಿತು.ಅದೇ ಶಾಂತತೆ. ಹಸಿರು ಬೆಟ್ಟಗಳು, ಕತ್ತಲಲ್ಲಿ ಕಾಣದೆ ಮರೆಯಾಗಿದ್ದ ದೊಡ್ಡ ಬಂಡೆಗಳು , ಹಿನ್ನೀರಿನ ಪಕ್ಕದಲ್ಲಿ ಕಟ್ಟಿ ಹಾಕಿದ್ದ ಪುಟಾಣಿ ದೋಣಿಗಳು ಎಲ್ಲವೂ ಚಿತ್ರಕಾರನ ಕುಂಚಿನಲ್ಲಿ ಮೂಡಿದಷ್ಟು ಸುಂದರ.ಕತ್ತಲಿನ ಕಪ್ಪು ಬೆಳಕಿನ ಲೋಕ ಈಗ ಬಣ್ಣದಲಿ ಬದಲಾಗಿತ್ತು.



"ಇಲ್ಲೇ ಪುಟ್ಟ ಮನೆ ಮಾಡ್ಕೊಂಡು ಇದ್ರೆ ಎಷ್ಟು ಚೆನ್ನಾಗಿರುತ್ತೆ" ನಾನು ಮನಸಿನಲ್ಲೇ ಪ್ರಾರ್ಥಿಸುತ್ತಿದ್ದೆ.
ಹಿನ್ನೀರು ದಡದಲ್ಲಿ ಮುಳುಗಿ,ಪುಟ್ಟ ನಾಯಿ ಮರಿ ಕ್ಲಿಕ್ಕಿಸಿ, ಬಿಸಿ ಬಿಸಿ ಚಹಾ ಹೀರುತ್ತಾ ಕೆಲ ಕಾಲ ಮನಸು ಮೂಕವಾಯಿತು..ಮಂಚಿನಬೇಲೆ ಯಿಂದ ಹೊರಡುವಾಗ ಸಮಯ ಬೆಳಗ್ಗೆ 9.ಕಾಲು ನೋವು ಹುಮ್ಮಸ್ಸಿಗೆ ಅಡ್ಡಿ ಬರಲಿಲ್ಲ.ಅದೇ ಕೇ ಕೆ,ಅದೇ ಹುರುಪು.

ಅಲ್ಲಲ್ಲಿ ನಿಲ್ಲುತ್ತ ಕುಣಿಯುತ್ತ ಸೈಕಲ್ ಮೇಲೆ ಹಾರುತ್ತ ಅಬ್ಬರದ ಬೆಂಗಳೂರನ್ನು ಹೊಕ್ಕಾಗ ಮದ್ಯಾನ್ಹ 12. ಹೊಸ ಗೆಳತಿ ಸೈಕಲ್ ಜೊತೆ ಮೊದಲ ರೊಮ್ಯಾನ್ಸ್ ಟ್ರಿಪ್ ಖುಷಿ ತಂದಿತು.

ಮೊದಲ ನೋಟದಲ್ಲೇ ಪ್ರೀತಿ ಹುಟ್ಟೋದು ಅಂದ್ರೆ ಇದೇನಾ :x :-*. ಈಗ ಆಫೀಸಲ್ಲಿ ಕಳೆದ ಸಿಹಿ ಗಳಿಗೆಗಳನ್ನು ಮೆಲಕು ಹಾಕಿದ್ದು ಆಯ್ತು. ಸುಮ್ಮನೆ ಕುಳಿತು ನನ್ನಲ್ಲಿ ನಾನೇ ನಕ್ಕಿದ್ದು ಆಯ್ತು. ಫೇಸ್ ಬುಕ್ ನಲ್ಲಿ ರಾರಾಜಿಸುತ್ತಿರುವ ಟ್ರಿಪ್ ಫೋಟೋ ತೋರಿಸ್ತಾ ಪಕ್ಕದ ನನ್ನ ಫ್ರೆಂಡ್ ನ ತಲೆ ತಿಂದದ್ದೂ ಆಯ್ತು. ನೆನಪಿನ ಅಂಗಳದಲಿ ಮತ್ತೊಂದು ಸಿಹಿ ಗಳಿಗೆ ಬರುವವರೆಗೂ ಈ ಕಾಟ ತಪ್ಪಿದ್ದಲ್ಲ /:).
ಮರೆಯಲಾಗದ ನೆನಪು ಬಿತ್ತಿದ ರಘು, ಶ್ರೀನಿ, ಚಿನ್ಮಯ, ಸಂತೋಷ್, ಪರಮ್, ಅಭಿಜಿತ್, ಸಂಗಮೇಶ್, ಅಜಯ್, ನಿಕಿತಾ, ವೀಣಾ S, ಅನುಪಮಾ, ವೀಣಾ B ಎಲ್ಲರಿಗೂ ಹ್ಯಾಟ್ಸ್ ಆಫ್. .ನನ್ನ ಹೊಸ ಗೆಳತಿಯ ಜೊತೆ ಬಹು ಬೇಗ ಫ್ರೆಂಡ್‌ಶಿಪ್ ಮಾಡಿಕೊಂಡ ಉಳಿದ ಎಲ್ಲ ಸೈಕಲ್ ಗಳಿಗೂ ಥ್ಯಾಂಕ್ಸ್. ಸೋ ನೆಕ್ಸ್ಟ್ ರೊಮ್ಯಾನ್ಸ್ ಯಾವಾಗ :">??

23 comments:

Unknown said...

Mast ada le . Keep it Up.

Shweta said...

SUPER ;) next time nanu bartini...

Sudhir said...

@Raghu
Thanks Raghu.. keep reading :)

@Shweta
he he.. aaytu... u r always welcome ;)

Chinmay said...

Valle anubhava .. Agadi chhenda baradi pa..

Shrinivas sonnad said...

NOT ABLE TO READ IT PROPERLY. WHY THE WORDS ARE NOT PROPER?

Sudhir said...

@Chinmay
Thanks pa. . hing odutta iru . .


@Shrini,
Google Chrome has some issues with kannada fonts. . open in Internet explorer. .

Shrinivas sonnad said...

Good one.




some minor additions.......Total number should be 13 not 12. I think you forgot Ajay. K!

Sudhir said...

@ Shrini
Thanks Anna. . he he . . actually I listed Ajay too . . I missed myself counting :)

Unknown said...

Hey,
Good one yar :)
Just luvd these lines

"--ಕೆಂಡ ಕೆಂಪಗೆ ಹೊಗೆಯಾಡುತ್ತಿತ್ತು.ಅದೇ ಶಾಂತ ಮುಗ್ಧ ಲೋಕ.ದೂರದಿಂದಲೇ ಕಣ್ಣು ಪಿಳಿಕಿಸುತ್ತಿದ್ದ ಚಂದಿರ,ಸದ್ದಿಲ್ಲದೇ ಮಿನುಗುತ್ತಿದ್ದ ಹಿನ್ನೀರು, ತೇವಗೊಂಡು ಶುಭ್ರವಾಗಿದ್ದ ಹುಲ್ಲಿನ ಹಾಸಿಗೆ,ಬೆಟ್ಟದ ತುದಿಯಿನ್ದ ನಮ್ಮನ್ನು ಇಣುಕಲು ಸಿಧ್ಧಗೊಳ್ಳುತ್ತಿದ್ದ ಸೂರ್ಯ ಎಲ್ಲವೂ ಬೆಳಗಿನ ವಯ್ಯಾರ ತೋರಲು ಅಣಿಯಾಗುತ್ತಿದ್ದವು.

--ಕತ್ತಲಿನ ಕಪ್ಪು ಬೆಳಕಿನ ಲೋಕ ಈಗ ಬಣ್ಣದಲಿ ಬದಲಾಗಿತ್ತು."
Abba..!! entha kalpne..
Too good :)
Keep bloggin :)

Mallesh KR said...

Nice one le....

Ur bro caught u :) Naan keliddu sannavru buddivanthr irthare antha...But neenu ...Hah...Lolz...

Sudhir said...

@ Supriya
Thank u... :) keep reading

Sudhir said...

@Malya
heee :) keep reading :)

Unknown said...

ur blog is like "cherry on the top"
good one

Sudhir said...

@Veena
Thanks ji.. Read other blogs too :)

Jayashree said...

ninu smileys Made for each other nodu :). 38km ! abbha . olle saahasane maadidira :). Nice trip.

Sudhir said...

@Jayu
I luv to smile..thx..it was my 1st cycle trip..loved it.. will u join :)?

Jayashree said...

Oh sure :). Do ping me then.

Anonymous said...

Nice One...

Sudhir said...

@Anonymous
name plz.. thanks of r reading

Kanthi said...

nice romance :-)

Sudhir said...

@Kanthi
Thanksji..Read other blogs too :)

Unknown said...

very nice blog ..................

Sudhir said...

@Suman
Thank you Suman. . :)