Tagged under:

ಹೊಸ ವರುಷದ ಮೊದಲ ಹೆಜ್ಜೆ !







ಹೊಸ ವರುಷದ ಹೊಸ್ತಿಲಲ್ಲಿ ಬರುವ ಸಾಲು ಸಾಲಾದ ರಜಗಳ ಹರುಷ ಇನ್ನೂ ಮನದಲ್ಲಿ ಮಾಸದೆ ಉಳಿದಿತ್ತು. ಹೊಸ ವರುಷವೇ ಹಾಗೆ . ಹಳೆಯ ಕಹಿಗಳನ್ನೆಲ್ಲ ಸ್ಕ್ರ್ಯಾಪ್ ಮಾಡಿ ಹೊಸ ಗುರಿಗಳನ್ನು ನೆಡುವ ಕಾಲ. ಕಳೆದ ಸಿಹಿ ಗಳಿಗೆಗಳನ್ನು ಮೇಲಕು ಹಾಕುತ್ತಾ ಮುಂಬರುವ ದಿನಗಳಿಗೆ ಕನಸು ಹೆಣೆಯುವ ಕಾಲ. ಒಟ್ಟಿನಲ್ಲಿ ಹೊಸ ವರುಷದ ಸಂಬ್ರಮ ಮನಸ್ಸಿನಲ್ಲಿ ತಾಜಾ ಅನುಭವ ನೀಡುವದಂತೂ ನಿಜ. ಹಳೆ ಬಾಟಲ್ ಲ್ಲಿ ಹೊಸ ವೈನ್ ತುಂಬಿದಂತೆ!!
ಹೊಸ ವರುಷದ ಆಫೀಸ್ ಕ್ಯಾಲೆಂಡರ್ ಬಂದ ತಕ್ಷಣ ಮೊದಲ ತಿಂಗಳ ಮೇಲೆ ಕಣ್ಣು ಹಾಯಿಸಿದೆ... ಕಾಲೆಂಡರ್ ಲ್ಲಿ ಕೆಂಪು ಅಕ್ಷರ ನೋಡಿದ್ರೇನೆ ಖುಷಿ. ಆಫೀಸ್ ರಗಳೆ ಗಾಳಿಗೆ ತೂರಿ ನನ್ನ ಲೋಕದಲ್ಲಿ ಜಾರಲು ಈ ಅಕ್ಶರಗಳೆ ನಂಗೆ ಎಂಟ್ರೀ ಪಾಸ್ . ಮೊನ್ನೆ ತಾನೇ ನ್ಯೂ ಇಯರ್ ರಜಾ ಮುಗಿಸಿಕೊಂಡು ಬಂದಿದ್ದೆ. ಈಗ ಮತ್ತೊಂದು ಕೆಂಪು ಅಕ್ಷರ ಸಮೀಪದಲ್ಲೇ ಮಿನುಗುತ್ತಿತ್ತು.. ಜನ್ 14. ಸಂಕ್ರಾಂತಿ ಹಬ್ಬಕ್ಕೆ ರಜ ! ಹುರ್ರೆ.
ಒಂದು ವರುಷದಿಂದ ಆಗೊಮ್ಮೆ ಈಗೊಮ್ಮೆ ಗೆಸ್ಟ್ ತರಹ ಬೆಂಗಳೂರಿಗೆ ವಿಸಿಟ್ ಮಾಡ್ತಿದ್ದ ಜಯ್ ಈಗ ಮರಳಿ ಬೆಂಗಳೂರಿಗೆ ಖಾಯಂ ಆಗಿ ಬರೋ ಖುಷಿಯಲ್ಲಿದ್ದ . ಬಸು, ಸ೦ಜು, ಪ್ರತಿಭಾ ಮಹೇಶ್, ಪ್ರಶಾಂತ್ ಸಹ ಒಪ್ಪಿಕೊಂಡ ಮೇಲೆ ಯಾಕೆ ತಡ ..ಟ್ರಿಪ್ ಪ್ಲಾನ್ ರೆಡೀ !.ನನ್ನ ಕಸಿನ್ ಪಾ೦ಡು ಮತ್ತು ರೂಪ ಸಹ ಟ್ರಿಪ್ ಗೆ ಬರೋಕೆ ಒಪ್ಪಿಕೊಂಡ ಮೇಲೆ ನಮ್ಮದು ಬರೋಬ್ಬರಿ 9 ರ ಮಂಕಿ ಗ್ಯಾಂಗ್.ಎಲ್ಲರೂ ಬೆಂಗಳೂರಿನಿಂದ ಹೊರಗೆ ಜಿಗಿಯೋದು ಅಂತ ಡಿಸೈಡ್ ಆಯ್ತು.. ನಾನು ಮತ್ತು ರೂಪ್ಸ್ ಗೂಗಲ್ ನಲ್ಲಿ ಹುಡುಕಿ ಬೆಂಗಳೂರಿನ ಸುತ್ತ ಇರುವ ಕೂಲ್ ಪ್ಲೇಸಸ್ ಕಲೆ ಹಾಕಿದ್ವಿ.ನಮ್ಮ ರಿಕ್ವೈರ್ಮೆಂಟ್ ಏನೋ ಅಷ್ಟು ದೊಡ್ಡದಾಗಿರಲಿಲ್ಲ.. ಬೆಂಗಳೂರಿನ ಆರ್ಭಟಕ್ಕೆ ಹೆದರಿ ಮೂಲೆ ಸೇರಿದ್ದ ಮನದ ಕೋತಿಗೆ ಕುಣಿಯಲು ಸ್ವಲ್ಪ ಜಾಗ ಬೇಕಿತ್ತು.ಕಲಬೆರಕೆ ರಹಿತ ಶುಧ್ಧ ಗಾಳಿ ಬೇಕಿತ್ತು.ಮನಸು ಬಿಚ್ಚಿ ಕೂಗಲು ಸಚ್ಚಂಧ ವೇದಿಕೆ ಬೇಕಿತ್ತು. ಹೀಗೆ ಹುಡುಕುತ್ತಾ ಫೈನಲ್ ಆಗಿದ್ದು ಬಿ ಆರ್ ಹಿಲ್ಸ್ ಶಿವನಸಮುದ್ರಮ್ ಫಾಲ್ಸ್ ಮತ್ತು ಕೊನೆಗೆ ತಲಕಾಡು.
ಬಸು ಮತ್ತು ಮಹೇಶ್ ಕೊನೆ ಕ್ಷಣದಲ್ಲಿ ಗುಂಪು ಸೇರಲಾಗಲಿಲ್ಲ .ಸೋ ನಾವು ಉಳಿದವರು ಕೊನೆಗೆ 7.ಇನೊವಾ ಪ್ರತಿಭಾ , ಜಯ್ , ಸಂಜು ಮತ್ತೆ ಪ್ರಶಾಂತ್ ರಾಜಾಜಿನಗರದಿಂದ ನಾನು ರೂಪ ಮತ್ತು ಪಾಂಡುನ ವಿಜಯ ನಗರದಲ್ಲಿ ಪಿಕ್ ಮಾಡಿ ಹೊರಟಾಗ ಸರಿಯಾಗಿ 6 30.ಆಗ ತಾನೇ ಬೆಳಕು ಹರಿದು ಬೆಂಗಳೂರಿನ ದಿನಚರಿ ಪ್ರಾರಂಭವಾಗಿತ್ತು . ಕಾರು ವೇಗ ಪಡೆದುಕೊಂಡಿದ್ದು ರಾಜ ರಾಜೇಶ್ವರಿ ಜಂಕ್ಶನ್ ದಾಟಿದ ಮೇಲೆ.ಎಲ್ಲರೂ ಕೂಡಿದ ಮೇಲೆ ಕೀಟಲೇಗಳಿಗೇನೂ ಕಡಿಮೆ ಇಲ್ಲ.ಒಬ್ಬರೊನ್ನೊಬ್ಬರು ಕಾಲು ಎಳೆಯೊದು ಇದ್ದೇ ಇರುತ್ತೆ. ನನ್ನ ಮೇಲೆ ಸಿಕ್ಸರ್ ಹೊಡೆಯೋ ಚಾನ್ಸ್ ಸಿಕ್ಕಾಗ ಎಲ್ಲರೂ ಒಂದಾಗುತ್ತಿದ್ದರು..ಹೆ ಹೆ.ನಾನೇನು ಕಡಿಮೆ ನಾ!ಎಲ್ಲರನ್ನೂ ಒಂದೇ ಮಾತಿನಲ್ಲಿ ನಿಭಾಯಿಸ್ತಿದ್ದೆ .ಅದಕ್ಕೆ ತಾನೇ ಅವರೆಲ್ಲ ಒಂದಾಗಿ ನನ್ನ ಮೇಲೆ ಪ್ರತಿಕಾರ ತೀರಿಸಿಕೊಳ್ತಿದ್ದು !!.ಹುಹ್ .ನಂಗೂ ಕಾಲ ಬರುತ್ತೆ ..ಮನಸಿನಲ್ಲೇ ಗುನುಗುತ್ತಾ ಕಿಡಿಕಿಯ ಮದ್ಯದಿಂದ ಜೋರಾಗಿ ಒಳ ನುಸುಳುತ್ತಿದ್ದ ತಂಗಾಳಿ ಗೆ ಕೈ ಒಡ್ಡಿದೆ.ಕಾರು ಆಗಲೇ ಕಾಮತ .. ಕಾಫೀ ಡೇ ಎಲ್ಲವನ್ನು ಹಿಂದೆ ಹಾಕಿ ಬಿಡದಿ ಸಮೀಪಿಸಿತ್ತು. ಬಿಡಡಿಯಲ್ಲಿ ಬಿಸಿ ಬಿಸಿ ತಟ್ಟೆ ಇಡ್ಲಿ ತಿಂದ ಮೇಲೇನೆ ನಾನು ರೀಚಾರ್ಜ್ ಆಗಿದ್ದು .. ಬೆಳಗ್ಗೆ ೪ ಗಂಟೆಗೆ ನೇ ಎದ್ದು ರೂಪ ಳನ್ನ ಅವಳ HAL ಹತ್ತಿರ ಮನೆಯಿಂದ ಪಿಕ್ ಮಾಡಿದ್ದೆ.. ಅದಕ್ಕೆ ನಿದ್ದೆ ರಾಯ ಇನ್ನೂ ಟಿಕಾಯಿಸಿದ್ದ. ಅದಕ್ಕೆ ಅಂತ ಕಾಣ್ಸುತ್ತೆ ಇದೆ ಒಳ್ಳೇ ಸಮಯ ಅಂತ ಎಲ್ಲರೂ ನನ್ನ ಎಳೆದಾಡಿದ್ದು .. ಸಿಂಹ ಮಲಗಿದಾಗಲೇ ಅಲ್ವಾ ಜಿಂಕೆಗಳು ಜಾಸ್ತಿ ಕುಣಿದಾಡೋದು.ಹಾ ಹಾ.
ಕೊಳ್ಳೆಗಾಲ ದಾಟಿದ ಮೇಲೆ ಹಚ್ಛ ಹಸಿರಿನ ಕಾಡು ದಟ್ಟವಾಯಿತು.ಅಲ್ಲಲ್ಲಿ ಹಸಿರಿನ ಹೊದಿಕೆ ಹೊತ್ತಿದ್ದ ಭೂಮಿ ಬಣ್ಣ ಒಮ್ಮೆಲೇ ಬದಲಾಗಿತ್ತು. ಸೃಷ್ಠಿಯ ಕೈ ಚಳಕ ಕ್ಕೆ ನಾವೆಲ್ಲ ಸ್ತಬ್ಧ . ಮುಗಿಲೆತ್ತರದ ಬೆಟ್ಟ ಗುಡ್ಡಗಳು ಅಲ್ಲಲ್ಲಿ ಚಿಕ್ಕ ಚಿಕ್ಕ ಕೆರೆಗಳು..ನಮ್ಮ ಲೋಕದಲ್ಲಿ ನಿಮ್ಮದೆನು ಕೆಲಸ ಅಂತ ಹಂಗಿಸುವಂತೆ ಕಿರ್ ಕಿರ್ ಅನ್ನುತ್ತಿದ್ದ ಮಂಗಗಳು ಅಬ್ಬಾ !! ಸ್ವರ್ಗಕ್ಕೆ ಎರಡೆ ಗೇಣು.ಹಸಿರು ಬಣ್ಣದ ಮದ್ಯೆ ಯಾರೋ ಗೆರೆ ತೀಡಿದಂತೆ ಕಾಣುತ್ತಿದ ರಸ್ತೆಯಲ್ಲಿ ಕಾರು ನುಗ್ಗುತ್ತಿತ್ತು. ಬೈಕ್ ಇದ್ದಿದ್ದರೆ ಎಸ್ಟು ಚೆನ್ನಾಗಿರ್ತಿತ್ಟಲ್ವಾ ... ಮನಸ್ಸಿನಲ್ಲಿ ನೆನೆಯುತ್ತ ದೂರ ದಲ್ಲಿ ಮಿಂಚುತ್ತಿದ್ದ ಬೆಟ್ಟ ಗಳ ಕಡೆ ದ್ರುಷ್ತ್ಠಿ ಹಾಯಿಸಿದೆ ..ನಾವು ಎಷ್ಟೇ ನಗರ ಕಟ್ಟಿದರೂ ಈ ಸೌಂದರ್ಯ ಮೀರಿಸೋದು ಹ್ಮ್ ಹೂ ..ಸಾದ್ಯವೆ ಇಲ್ಲ. ನಮ್ಮ ಜೊತೆ ರೇಸ್ ಮಾಡಿದವರಂತೆ ಸೂರ್ಯನು ನಮ್ಮ ಪಕ್ಕದಲ್ಲೇ ಬೆನ್ನತ್ತಿದ್ದ. ಅಲ್ಲಲ್ಲಿ ಕಾರ್ ನಿಲ್ಲಿಸಿ ಫೋಟೋ ಕ್ಲಿಕ್ಕಿಸುತ್ತಿದ್ದೆವು .ಪ್ರಕೃತಿ ಸೆರೆ ಹಿಡಿಯಲು ವಿಶೇಷ ಫೊಟೋಗ್ರಾಫರ್ ಗಳೇನು ಬೇಕಿಲ್ಲ .. ಹೇಗೆ ಕ್ಲಿಕ್ಕಿಸಿದರೂ ಫೋಟೋಗಳಿಗೆ ಒಂದೊನ್ನೋದನ್ನು ಮೀರಿಸಿವಂತಹ ತಾಕತ್ತು.

ಬಿ ಆರ್ ಹಿಲ್ಸ್ ತುದಿಗೆ ತಲುಪಿದಾಗ ಸರಿಯಾಗಿ 10 30. ಹಿಲ್ ಸುತ್ತ ಎಲ್ಲಿ ನೋಡಿದರೂ ಹಸಿರು.. ಅಲ್ಲಲ್ಲಿ ಚಿಕ್ಕ ಕೆರೆಗಳು ಸೌಂದರ್ಯವನ್ನು ಇಮ್ಮಡಿಯಾಗಿಸಿದ್ದವು.ಅಲ್ಲೇ ಕುಣಿದು ಕುಪ್ಪಳಿಸುತ್ತಿದ್ದ ಮಂಗಗಳ ಚೆಸ್ಟೆ ಸೆರೆಹಿಡಿದದ್ದೂ ಆಯ್ತು .ಯಾವುದೇ ಪರಿವಿಲ್ಲದೇ ಕುಣಿಯುತ್ತಿದ್ದ ಮಂಗಗಳು ಆಗಾಗ ಹತ್ತಿರ ಬಂದು ಹೆದರಿಸುವಂತೆ ಹಲ್ಲು ಕಿರಿಯುತ್ತಿದ್ದವು.
ಅಲ್ಲೇ ದೇವಸ್ಥಾನದಲ್ಲಿ ದೇವನ ದರ್ಶನ ಪಡೆದು ಕಾರ್ ನಲ್ಲಿದ್ದ ಸ್ನ್ಯಾಕ್ಸ್ ಜಗಿಯುತ್ತಾ ಹೊಟೆಲ್ ನಲ್ಲಿ ಕಾಫೀ ಕುಡಿದು ಶಿವನಸಮುದ್ರದತ್ತ ಹೊರಟೆವು.
ಕೊಳ್ಳೆಗಾಲದಲ್ಲಿ ಊಟ ಮುಗಿಸಿ ಶಿವನ ಸಮುದ್ರಕ್ಕೆ ಬಂದಾಗ ಸರಿಯಾಗಿ 2 ಗಂಟೆ.ಕಳೆದ ಬಾರಿ ಇಲ್ಲಿಗೆ ಬಂದಾಗ ನೀರಿನ ರಭಸ ಜಾಸ್ತಿ ಇತ್ತು..ಈ ಸಲ ನೀರಿನ ಹರಿವು ಕಡಿಮೆ . ತೇಲುವ ತಟ್ಟೆ ಮೇಲೆ ಕೂತು ನೀರಿನ ಝರಿಯ ಹತ್ತಿರ ಹೋದಾಗ ಹೋ!!.ನಾನು ಸಂಜು ನೀರಿನಲ್ಲಿ ಕುಣಿದದ್ದೋ ಕುಣಿದದ್ದು.. ಪ್ರತಿಭಾ ಜಯ ನೀರಿನ ತುಂತುರು ಹನಿ ಕ್ಲಿಕ್ಕಿಸುವಲ್ಲಿ ಬೂಸಿ ಇದ್ದರೆ ರೂಪಾ ಪಾಂಡು ಪ್ರಶಾಂತ್ ತಮ್ಮದೇ ಲೋಕದಲ್ಲಿ ಜಾರಿಕೊಂಡಿದ್ದರು.ಎಲ್ಲರೂ ನಮ್ಮಣ್ಣ ನೀರಿನಿಂದ ಎಳೆದು ಮೇಲೆ ತಂದಾಗ ಸಮಯ ಸಂಜೆ 4 30..

ಕಾರು ತಲಕಾಡಿಗೆ ಮುಖ ಮಾಡಿತು. ಇಲ್ಲಿ ಇರುವ ಎಲ್ಲ ಟೆಂಪಲ್ ಗಳೂ ಮರಳಿನ ಮದ್ಯೆನೇ ನೇ ಇರೋದು. ಶಾಪದಿಂದ ಈ ಥರ ಆಗಿದೆ ಅಂತ ಅಲ್ಲೇ ಇದ್ದ ಗೈಡನಿಂಡ ತಿಳಿಯಿತು. ಪಾತಾಳೆಶ್ವರ , ಶನಿ ದೇವಸ್ಥಾನದ ದರ್ಶನ ಆಗೋ ಹೊತ್ತಿಗೆ ಆಗಲೇ ಕತ್ತಲು.ತಲಕಾಡಿನಲ್ಲಿದ್ದ ನದಿಯಲ್ಲಿ ನಿರಿಗಿಳಿಯುವ ಮುಂಚೆಗಿನ ಪ್ಲಾನು ಡ್ರಾಪ್ ಆಯ್ತು. ಮತ್ತೆ ವಾಪಸ್ ಬೆಂಗಳೂರಿಗೆ ಪ್ರಯಾಣ. ನಗೆ ಚಟಾಕಿ ಹಾರಿಸುತ್ತಾ ಕೂಗುತ್ತಾ ವಾಪಸ್ ಬೆಂಗಳೂರಿಗೆ ಹೊರಟೆವು .. ಬಿದದಿಯಲ್ಲಿ ತಿಂಡಿ ಮುಗಿಸಿ ಬೆಂಗಳೂರಿಗೆ 10 30 ಗೆ ರೀಚ್ ಆದ್ವಿ .ಮನಸು ಮಾತ್ರ ಹಿಲ್ಸ್ ತುದಿಯಲ್ಲಿ ಕುಣಿಯುತ್ತಾ ನೀರಿನಲ್ಲಿ ಧುಮುಕುತ್ತಾ ಮರಳಿನಲ್ಲಿ ನೆಗೆಯುತ್ತಾ ಎಲ್ಲೋ ಜಾರಿತ್ತು .ಆ ಸುಂದರ ಕನಸಿನಿಂದ ಹೊರ ಬರೋಕೆ ಪ್ರಯಾಸ ಪಡುತ್ತಿತ್ತು .

28 comments:

Anonymous said...

Fantastic Brother....as always!!! :)

Anonymous said...

hey brother u click that snaps really good i like it :)

Roopa said...

toooo goooooooood your honour :)

Unknown said...

hey saakthgide kano nin vimarshe....after reading this felt abt deapth of frndship..and photos sakahtgide aa bottle inda neeru hakta idiya falls ge ha ha....

Sudhir said...

@ Pinky,
comment haaki nin hesru haakabaarda...?? haaaa...:) thanks for reading ..

Sudhir said...

@ Roops,
Thanks my Lord :)

Sudhir said...

@ Sneha,
hi Sneha puttu..thanks for reading ..heege odutta iru ..

Suyamindra said...

Good One le.. :)

Sudhir said...

Thanks le Summya,
keep reading

Rakesh Pawali said...

Sudhya, le le naav karadar barangilla magana ..! Good one though

Mallesh KR said...

Great dude....

Sudhir said...

@Rakya,
nan Oraaga iddaaga trip idteeren le ... next time i wont miss :)

Sudhir said...

@Mallya,
Thax le

Unknown said...

Hi le,mast baradi...really nice..:)

Prashant said...

good one sudhir.. wer is ur guitar snap ?

Sudhir said...

@Bhagya
Thank u :)

@ Prashant,
Le guitar oididdilla :(

Unknown said...

Le sudya, super le, masta bardi...........really nice :)

Sudhir said...

@ Sanjya,
thx le...

Jayashree said...

hey nice gang. nanu first odiddu comments ;). btw where's ur guitar snap?
it reminded me of our trip. nanna friend guitar tagondu navella rockstars tara pose kottu photo clickiskondidvi. ade bharateli ondu string kuda kittogittu :)

Sudhir said...

@Jayashri,
ha ha...ee monkey group yella strings nna haridu bidutte aste..adakke tugondu hogirlilla.. odiddakke thanks :)

Unknown said...

Hmmm...!Nicely penned down yar..
I felt as if I was a part of your trip while readin..

Every incident is so neatly elaborated
2 make readers 2 experience your trip as bein a part of it..
Plan for some more trips n' post much moooore blogs.. M waitin 2 read.. ;)


And Abt Snaps.....
Only thing is awesome, awesome n' awesome..
(especially the one with bottle)

Sudhir said...

Thanks Supriya..
khamdita bareetini... ninu heege comment haakta iru..thanks again :)

Anup said...

Sakathagide..!! I really enjoyed

M waiting 4 some more gud stuff..

Sudhir said...

thanks Anup,
Khandita ... odutta iru :)

Anonymous said...

nice very is wonderful no words to say bottle falls is superb i loved it very much gud luck for ur future. keep wriiting like this

Sudhir said...

Thx Swathi

Shweta said...

hey nice group ya.... by readin this..i remembered my trip to amboli ghat(near belguam).i really miss those days a lot."e trip bagge odata odata naanu trip ge bandante ansitu"..keep writing:-)and always keep smiling.

Sudhir said...

@Shweta,
Oh thx ..Its one of memorable trip in this.. Still lot to explore :)