Tagged under:

ವೀಕೆಂಡ್ ಎಂಬ ಮಹಾಮಾಯೆ


ಹ್ಯಾಪೀ ವೀಕೆಂಡ್ :) ಬಣ್ಣ ಬಣ್ಣದ ಮೇಲ್ ಇನ್ ಬಾಕ್ಸ್ ಲ್ಲಿ ಕಾಣಿಸಿಕೊಂಡಾಗ ಪಕ್ಕದ ಕ್ಯಾಲಂಡರ್ ನೋಡಿದೆ ..ಹೌದು ..ನಿಜವಾಗ್ಲೂ ಶುಕ್ರವಾರನೆ .. ಮನಸ್ಸಿನಲ್ಲೇ ಮುಗುಳ್ನಗುತ್ತಾ ವರ್ಕ್ ಮೇಲೆ ಕಾನ್ಸೆಂಟ್ರೇಟ್ ಮಾಡಲು ಪ್ರಯತ್ತಲೆ ಇದ್ದೆ . ಶುಕ್ರವಾರದ ನಶೆಯೇ ಹೀಗೆ .. ಎರಡು ದಿನದ ರಜೆಯ ಮಜಾದ ಕನಸು ಕಾಣುತ್ತಾ ಇಡೀ ದಿನ ನುಂಗಿ ಹಾಕಿ ಬಿಡುತ್ತೆ. ಹ್ಯಾಪೀ ವೀಕೆಂಡ್ ಮೇಲ್ ವೈರಸ್ ಥರಾ ಒಬ್ಬರಿಂದ ಒಬ್ಬರಿಗೆ ಹರಡಿ ಕ್ಷಣ ಮಾತ್ರದಲ್ಲಿ ಎಲ್ಲರ ತಲೆಯನ್ನು ಬಿಸೀ ಮಾಡಿಬಿಡುವುದು. ಬಹುಶಹ ಕೋಡ್ ಬರೆಯುವಾಗಲು ಇಷ್ಟು ತಲೆ ಉಪಿಯೋಗಿಸೋಲ್ಲ ಅನಿಸುತ್ತೆ. ಒಟ್ಟಿನಲ್ಲಿ ಕೆಲಸಿಕ್ಕಿಂತ ವೀಕೆಂಡ್ ಪ್ಲಾನಿಂಗ್ ನಲ್ಲೇ ಶುಕ್ರವಾರ ಗುಳುಮ್ .

" ಲೊ ನಂಗೂ ಎರಡು ಪೆಗ್ ಕಣೋ ..ಲಾಸ್ಟ್ ಟೈಮ್ ಥರಾ ಈ ಸಲ ಒಂದೇ ತoದ್ರೆ ನೀನು ಕುಡಿದಂಗೆ " ಆಫೀಸ್ ಕೋಲೀಗ್ ಮೊಬೈಲ್ ಲೀ ಕಿರುಚಿತ್ತಿದ್ದ.. ಫ್ರೈಡೇ ಗುಂಡು ಪಾರ್ಟಿಯ ತಯಾರಿ ಅನಿಸುತ್ತೆ . ಫ್ರೆಂಡ್ಸ್ ನೆಟ್‌ವರ್ಕ್ ಲ್ಲಿ ಆಗಲೇ ವೀಕೆಂಡ್ ಬಗ್ಗೆ ನಾನಾ ತರಹದ ಯೋಜನೆಗಳ ಪಟ್ಟಿ ಸಿಧ್ಧ ಆಗಿರುತ್ತೆ.ಎಲ್ಲರಿಗೂ ಕಾಲ್ ಮಾಡಿ ವೀಕೆಂಡ್ ನ ಎರಡು ದಿಂದ ಹಬ್ಬಕ್ಕೆ ಪ್ಲಾನ್ ರೆಡೀ ಮಾಡೊದು ಪ್ರಾಜೆಕ್ಟ್ ಪ್ಲ್ಯಾನಿಂಗ್ ಗಿಂತ ಕಷ್ಟ . ಆದರೆ ಎಲ್ಲರೂ ಈ ವಿಷಯದಲ್ಲಿ ಪ್ರಬುದ್ಧರು . ಹೊಸ ಹೊಸ ಐಡಿಯಾ ಗಳು ಪ್ಲ್ಯಾನಿಂಗ್ ನಲ್ಲಿ ಧುಮುಕೋದಂತೂ ಸತ್ಯ.
ತಿಂಗಳಿನ ಎಲ್ಲ ವೀಕೆಂಡ್ಗೂ ಊರಿಗೆ ಓಡಲು ಟಿಕೆಟ್ ಬುಕ್ ಮಾಡುವ ನನ್ನ ಕೋಲೀಗ್ ಒಬ್ಬಳು ಪ್ರತಿ ಶುಕ್ರವಾರ ಅಮ್ಮನ ಜೊತೆ ಹೇಳೋದು ಒಂದೇ ಮಾತು "ಹ್ಮ್ ಅಮ್ಮ ಬೇಗ ಬಿಡ್ತೀದೀನಿ .. ಡೊಂಟ್ ವರೀ " .ಶುಕ್ರವಾರ ಮನೆಗೆ ಓಡೊ ಖುಷಿಯಲ್ಲಿ ಅಗಲವಾಗುವ ಅವಳ ಮುಖ ಸೋಮವಾರ ಸಪ್ಪೆಯಾಗಿರುತ್ತದೆ . ಹೆ ಹೆ ..
ಪಕ್ಕದ ತುಮಕುರಿಗೆ ಒಡಿ ಹೋಗುವ ಇನ್ನೊಬ್ಬ ಫ್ರೆಂಡ್ ಶುಕ್ರವಾರವೇ ಗಂಟು ಮೂಟೆ ಕಟ್ಟಿ ಸಂಜೆಯ ವರೆಗೆ ವೇಟ್ ಮಾಡ್ತಾಳೆ .ನನಗೇನೂ ಅವಳು ಶುಕ್ರವಾರ ಇಡೀ ದಿನ ವರ್ಕ್ ಮಾಡ್ತಾಳೆ ಅನಿಸಲ್ಲ .
ರೂಮ್ ಲ್ಲಿ ಬೇಜಾರು ಕಣೋ ..ಆಫೀಸೆ ಗೆ ಬಂದು ಯೂ ಟ್ಯೂಬ್ ಲ್ಲಿ ಒಳ್ಳೇ ಮೂವೀ ನೋಡಬಹುದು ಅಂತ ಎರಡು ದಿನವೂ ಆಫೀಸ್ ಗೆ ಬರೋರು ಇದ್ದಾರೆ.ಇನ್ನು ಕೆಲವು ಚಲುವೆಯರು ಆಗಲೇ ಎಕ್ಸ್ ಪೈರ್ ಆಗಿರುವ ಒಂದು ವಾರದಸ್ಟು ಹಳೆಯದಾದ ತಮ್ಮ ಲುಕ್ ನ್ನ ಹೊಸ ವಾರಕ್ಕೆ ನವೀಕರಿಸಲು ಬ್ಯೂಟೀ ಪಾರ್ಲರ್ ಲಿಸ್ಟ್ ಗೂಗಲ್ ನಲ್ಲಿ ಹುಡುಕ್ತಾ ಶುಕ್ರವಾರ ನೂಕುವರು.ಅರ್ರೆ!! ನಿದ್ರೆಗಿಂತ ಬೇರೆ ಮಜ ಉಂಟಾ ಎರಡೂ ದಿನವೂ ನಿದ್ರೆಗೆ ಶರಣಾಗುವರೂ ಸಾಕಷ್ಟು.
ಕೆಲವರು ಹೊಸ ಗರ್ಲ್ ಫ್ರೆಂಡ್ ಹುಡುಕೊಕೆ ವೀಕೆಂಡ್ ಮೀಸಲಿಟ್ಟರೆ ಕೆಲವರು ಅವಳನ್ನ ಓಲೈಸುವುದಕ್ಕೆ ಎರಡು ದಿನದ ದಿನಚರಿ ರೆಡೀ . ಹುಡುಗಿ ಗೆ ತನ್ನ ಬಾಯ್ ಫ್ರೆಂಡ್ ನ್ನ ಜೊತೆ ಕನಸಿನ ಲೋಕ ಕ್ಕೆ ಜಾರೋಕೆ ಇನ್ನೋದು ವೀಕೆಂಡ್ ರೆಡೀ. ಇನ್ನು ಕೆಲವರಿಗೆ ವೀಕೆಂಡ್ ಅನ್ನೋದು ಗರ್ಲ್ ಫ್ರೆಂಡ್ ಬಾಯ್ ಫ್ರೆಂಡ್ ಯಾವುದೇ ರಗಳೆ ಇಲ್ಲದೇ ತಮ್ಮ ಫ್ರೆಂಡ್ಸ್ ಜೊತೆ ಹರಟೆ ಹೋಡೇಯೋಕೆ ಮತ್ತೊಂದು ರಜಾ. ಲೈಫ್ ಪಾರ್ಟ್ನರ್ ಹುಡುಕೋ ದರಲ್ಲಿ ಮಗ್ನ ಆಗಿರೋ ಫ್ರೆಂಡ್ಸ್ ರದು ಇನ್ನೊಂದು ಗೋಳು. ವೀಕೆನ್ಡ್ ಬಂದ ತಕ್ಷಣ ಏನೇನೋ ನೆಪ ಮಾಡಿಕೊಂಡು ಊರಿಗೆ ಲಗ್ಗೆ ಇಡೊದು ಅವರಿಗೆ ಕಾಮನ್. ಫ್ರೆಂಡ್ಸ್ ರ ಪಿ ಜೆ ಗಳಿಗೆ ಆಹಾರವಾಗದೆ ಇರೋದಕ್ಕೆ ಅವರಿಗೆ ಇರೋದು ಇದೊಂದೇ ದಾರಿ..ಹೆ ಹೆ.
ಇನ್ನು ವೀಕೆಂಡ್ ನಲ್ಲಿ ಬೆಂಗಳೂರಿನ ಶಾಪ್ ಗಳ ಬಗ್ಗೆ ನೋ ಕಮೆಂಟ್ಸ್ . .ತಮ್ಮ ಎಲ್ಲ ಬೆಲೆಗಳನ್ನು ಗಗನಕ್ಕೆ ಏರಿಸಿ ಎರಡು ದಿನದಲ್ಲೇ ವಾರದ ಗಳಿಕೆ ಗಳಿಸುವ ಚಾಲಾಕಿಗಳು .ಸೋಮವಾರದಿಂದ ಶುಕ್ರವಾರದ ವರೆಗೆ ಫಾಸ್ಟ್ ಫಾರ್‌ವರ್ಡ್ ನಂತೆ ಓಡುವ ಎಲ್ಲ ದಿನಗಳು ವೀಕೆಂಡ್ ಬಂದ ತಕ್ಷಣ ನಿಲ್ಲುತ್ತವೆ.
ಕೊನೆಗೆ ನನ್ನ ವೀಕೆಂಡ್ ದಿನಚರಿ ನಾ.... ಸಿಂಪಲ್ ..ಸ್ವಲ್ಪ ಬ್ಲಾಗಿಂಗ್ .. ಸ್ವಲ್ಪ ಥಿಯೇಟರ್ ..ಡ್ರಾಮಾ ..ಸ್ವಲ್ಪ ಗಿಟಾರಿಂಗ .ಜಾಸ್ತಿ ತರಲೆ ಮತ್ತೆ ಬ್ಲಾ ಬ್ಲಾ ..ಕಾನ್ಫಿಡೆನ್ಶಿಯಲ್ !.ಹೀ...
ಎರಡು ದಿನ ನಾನಾ ರೂಪಗಳನ್ನ ಧರಿಸಿ ಕುಣಿದು-ಕುಪ್ಪಳಿಸಿದ ಮೇಲೆ ಕೊನೆಗೆ ಟೈಮ್ ನೊಡಿದ್ರೆ ರವಿವಾರ ಸಂಜೆ . ಅಯ್ಯೋ ವೀಕೆಂಡ್ ಇನ್ನೂ ಸ್ವಲ್ಪ ಎಳಿಬಾರದಾ .ದೇವರಿಗೆ ಸ್ಮಾಲ್ ರಿಕ್ವೆಸ್ಟ್ ಹಾಕೋದರಲ್ಲೇನೋ ತಪ್ಪಿಲ್ಲ . ಹ್ಯಾರಿ ಪಾಟರ್ ಮೂವೀ ಥರಾ ಮ್ಯಾಜಿಕ್ ಆದ್ರೆ .
ಹುಹ್..ಎರಡು ದಿನದ ಲೋಕ ನೋಡ್ತಾ ನೋಡ್ತಾ ಮಾಯ .ಮತ್ತೆ ಮುಂದಿನ ವೀಕೆಂಡ್ ವರೆಗೆ ಕಾಯಬೇಕು .ಬೆಂಗಳೂರಿನ ತುಂಬೆಲ್ಲ ಹುಚ್ಚು ಮನಸನ್ನ ಕುಣಿಸೋಕೆ .. ಗೆಳೆಯರ ಪಿ ಜೆ ಗಳಿಗೆ ಹೊಟ್ಟೆ ಹುನ್ನಾಗಿಸುವಷ್ಟು ನಗೊಕೆ ..ಪ್ರಬುಧ್ಧ ದಿನಚರಿ ಯನ್ನು ಸ್ವಲ್ಪ ಏರು ಪೆರು ಮಾಡಿ ಅಶಿಸ್ತಿನ ಲೋಕದಲ್ಲಿ ಜಾರೋಕೆ ಹುಚ್ಚು ಮನಸಿನ ಹತ್ತು ಮುಖಗಳನ್ನು ನೊಡೊಕೆ ಇನ್ನೂ 5 ದಿನ ಕಾಯಬೆಕು . ಬೇಜಾರಿನಿಂದಲೇ ಸೋಮವಾರದ ದಿನ ಪ್ರಾರಂಭ.ಮತ್ತೆ ಹ್ಯಾಪೀ ವೀಕೆಂಡ್ ಮೇಲ್ ಗೋಸ್ಕರ ದಿನಗಳ ಎಣಿಕೆ ಶುರು.ವೀಕೆಂಡ್ ಎಂಬ ಮಹಾ ಮಾಯೆಗೆ ಬಲಿಪಶು ಆಗದೆ ಇರೋರು ಉಂಟಾ..

17 comments:

Girish.. said...

hahahaha.. sakat aagi ide... nemma project lead ge sulpa link pass madi.. :D

Basu said...

Cool buddy.

It was a nice blog. Keep writing such blogs....

Danyawaadagalu!

Sudhir said...

@Girish,
blog odiddakke thanks.. project manager ge link pass madoda.. Shukravar pakkadalli kootu kelsa maadiskotare aste :)

@Basu
thanks ..Keep reading

Jayashree said...

U make every damn simple thing sound so happening. It was a happy reading.
Btw, project lead kuda ondanondu kaladalli idne madirtare. Link pass madidre he'll cherish his good ol' days ;)

Sudhir said...

@ Jayashree
thank u very much. weekend lli maado tarale bareeta hodre olle novel aagutte ..he he..

MohNN said...

Sakat aithi....hange baritha iru.:)

Sudhir said...

@ Mohan
thanks le..hope to c ur blog soon :)

Roopa said...

oii...goood goood, continue bloggin :)

Sudhir said...

@ Roops,
tank u :)

Unknown said...

Hmmm..! U r right Sudhir..!!! Weekend is special to everyone in their own way...
Do u know the only reason why we ask other people how their weekend was is so we can tell them about our own weekend. He He.. :)..

Very nice.. Keep Bloggin..

Sudhir said...

@ Supriya
Nija...our mechanical life nna swalpa colorful maadoke weekend perfect kaala :)..thx for reading

Anonymous said...

Nice keep writing like this ya thats true every 1 ll wait to enjoy week ends as dey had work very hard na from monday to friday so cooooooooool I like it great

Sudhir said...

@Swati,
dhanyavadagaLu

Shweta said...

hmmm...Best planning&u utilize ur time soooooooooooo well..i like to learn guitar..i do waste my weekend in watching tv..:-(

Sudhir said...

@Shweta,
Thx.. Even I m learning guitar..I can teach u .. fees swalpa kadime madteeni ..lol.. ;)

Shweta said...

thanks:)fees yeshtidru naditaiti.......

Rashmi Patil said...

hmm weekend 2 days holiday iro ellardoo same feelings. nanoo monday start adre friday yavaga barotte anta wait madtaane irteeni.