ಈಗಲೂ ನಾನು ಆ ಪ್ರಸ0ಗ ನೆನೆಸಿಕೊಂಡು ನನ್ನಲ್ಲಿ ನಾನೇ ನಗುತ್ತೇನೆ... ಆ ನಾಲ್ಕು ಘಂಟೆಗಳಲ್ಲಿ ನಾನು ಪಟ್ಟ ಪಾಡು ಯಾರಿಗೂ ಬರಬಾರದು ಅದೂ ಭಾಷೆ ಗೊತ್ತಿರದ ನಾಡಿನಲ್ಲಿ !!..
ಜೀವನದಲ್ಲಿ ಪ್ರತಿ ಗಳಿಗೆಯೂ ನಿಗೂಡ ...ಒಂದು ಗಳಿಗೆಯಲ್ಲಿ ಇದ್ದ ಸುಖ ಕೆಲವೇ ಕ್ಷಣದಲ್ಲಿ ಮಾಯವಾಗಬಹುದು..ದು:ಖ ಒಮ್ಮೆಲೇ ಸುಖವಾಗಿ ಪರಿವರ್ತನೆಯಾಗಬಹುದು...ದಿಕ್ಕೆ ತೋಚದಂತೆ ಆಗುವ ಸಂದರ್ಭಗಳೆಷ್ಟೋ..ಯಾರಿಗೂ ಅದನ್ನು ಅರಿಯಲು ಅಥವಾ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ...ಈಗ ನಾನು ಹೇಳಹೊರಟಿರೊ ಘಟನೆಯೂ ಅoತಹುದೆ ..
ಮಳೆ ಅಂದ್ರೇನೆ ತುಂಬಾ ಹಿಂಸೆ ಆಗ್ತಿದ್ದ ಕಾಲ ಅದು ...ಕೆಲಸದ ನಿಮಿತ್ತ ಕೇರಳಕ್ಕೆ ಹೋದಾಗ ಮಳೆಗಾಲದ ಸಮಯ ...ಅಲ್ಲಿ ಕಳೆದ ಎರಡು ತಿಂಗಳಿಂದ ನಾನು ಬಿಸಿಲೇ ನೋಡಿರಲಿಲ್ಲ.. ಅದೂ ಮಳೆಯೇ ಅಪರೂಪವಾದ ಉತ್ತರ ಕರ್ನಾಟಕದಿಂದ ಬಂದ ನನ್ನಂತವನಿಗೆ ಎಷ್ಟು ಹಿಂಸೆ ಆಗಬಾರದು ಹೇಳಿ...ಬಟ್ಟೆಗಳನ್ನೆಲ್ಲ ಹಸಿ ಮಾಡ್ಕೊಂಡು ರಭಸವಾಗಿ ಸುರಿಯೋ ಮಳೆಯಲ್ಲಿ ತಿರುಗಾಡೊದು ಅಭ್ಯಾಸವಾಗಿತ್ತು.( ಅಭ್ಯಾಸ ಮಾಡ್ಕೊಳ್ಲೆ ಬೇಕಲ್ವಾ ಅಲ್ಲಿ ಇರ್ಬೆಕು ಅಂದ್ರೆ !! ) ..
ನನ್ನ ಚಿಕ್ಕದಾದ ಮನೆ ದಟ್ಟವಾದ ಬಿದಿರಿನ ತೋಟದಲ್ಲಿ ಇತ್ತು..ಈಗಲೂ ನೆನಸಿಕೊಂಡರೆ ಭಯ ಆಗುತ್ತೆ..ರಾತ್ರಿ ಆ ಬಿದಿರಿನ ಕಾಡಿನಲ್ಲಿ ಹೋಗೋದು ದೊಡ್ಡ ಸಾಹಸ..ಕೈಯಲ್ಲಿ ಟಾರ್ಚ್ ಇಲ್ಲದೇ ಇದ್ರೆ ಹಾವು ತುಳಿಯೊದರಲ್ಲಿ ಸಂಶಯವೇ ಇಲ್ಲ..ಅದು ಮಳೆಗಾಲ ಪ್ರಾರಂಭವಾದ ಮೇಲೆ ಬೇಗ ಕೆಲ್ಸಾ ಮುಗಿಸಿ ಮನೆ ಸೇರೋದು ಅಬ್ಯಾಸ ಮಾಡ್ಕೊಂಡಿದ್ದೆ..ಕೇರಳದ ಜನ ನಿಜವಾಗ್ಲೂ ಲಕ್ಕಿ.. ನಿಜವಾದ ಪ್ರಕೃತಿ ಸೌಂದರ್ಯ ಕೇರಳದಲ್ಲಿ ಸಿಗೊವಸ್ಟು ಬೇರೆ ಯಾವ ಸ್ಥಳದಲ್ಲಿಯೂ ಸಿಗಲಿಕ್ಕಿಲ್ಲ...
ಮಳೆಯ ಸಮಯದಲ್ಲಿ ಬೆಚ್ಚಗೆ ಮಲಗಿಕೊಳ್ಳೋ ಮಜಾನೇ ಬೇರೆ .ಮಳೆಯ ರಭಸದ ಸದ್ದು ಆಗಲೇ ಕಿವಿಗೆ ತಮಟೆ ಬಾರಿಸುವಸ್ಟು ಜೋರಾಗಿತ್ತು..ಗೆಳೆಯ ಶಿವು ಆಫೀಸ್ ಗೆ ಹೊರಡೋ ತಯಾರೀ ನಡೆಸಿದ್ದ..ಮಳೆಯು ಇನ್ನುಸ್ಟು ದಟ್ಟವಾಯಿತು.. ಉಫ್... ಈಗ ಕಣ್ಣು ಮುಂದೆ ರಭಸವಾದ ನೀರಿನ ಹನಿ ಬಿಟ್ಟರೆ ಏನು ಕಾಣಿಸದ ಪರಿಸ್ಥಿತಿ.. ಇನ್ನೊಂದು ಅಚ್ಚರಿ ಅಂದರೆ ಇಲ್ಲಿನ ಜನಕ್ಕೆ ಈ ಮಳೆ ಯಾವುದೇ ಅಡಚನೆ ಮಾಡದಿರುವುದು !! ಅವರ ದಿನಚರಿ ಎನ್ದಿನತೆಯೆ ಸಾಗಿರುತ್ತದೆ.. ಆದರೆ ನನಗೆ ಮಾತ್ರ ಬೆಂಗಳೂರಿನಿಂದ ವನವಾಸಕ್ಕೆ ಬಂದ ಹಾಗೆ ಆಗಿತ್ತು....."ಈ ಶನಿಯಿನ್ದ ಯಾವಾಗ ಮುಕ್ತಿಯೊ" ಶಿವು ಮನದಲ್ಲಿಯೆ ಗುನುಗುತ್ತಿದ್ದ ...ಪಾಪ ಅವನು ನನ್ನ ತರಹಾ ಕೇರಳಕ್ಕೆ ಬಂದು ಬೆಂಗಳೂರಿಗೆ ವಾಪಸ್ ಹೋಗೋಕೆ ಇನ್ನೂ ಎಸ್ಟು ದಿನ ಇವೆ ಅಂತಾ ಲೆಕ್ಕ ಹಾಕ್ತಾ ಇದ್ದ..ಅಯ್ಯೋ ಕೇರಳ ಅಸ್ಟು ಕೆಟ್ಟದೇನು ಅಲ್ಲ ಬಿಡಿ..ಮರಳುಗಾಡಿನ ಒನ್ಟೆಗಳನ್ನ
ಮಳೆಯಲ್ಲಿ ಬಿಟ್ಟ ಹಾಗಿತ್ತು ನಮ್ಮ ಪರಿಸ್ಥಿತಿ !!
ಹೇಗೋ ಬಯ್ಯುತ್ತಾ ( ನನ್ನನ್ನು ಇಲ್ಲಿಗೆ ಕಳುಸಿಹಿದ ಮಹಾಶಯನಿಗೆ !!) ಸ್ವಲ್ಪ ತಡವಾಗಿಯೆ ಎದ್ದೆ ...
ಲಗು ಬುಗನೆ ರೆಡೀ ಆಗಿ ಹೊರಗೆ ಕಾಲಿಟ್ಟ ಮೇಲೆ ಏನೋ ಮರೆತಿರುವಂತೆ ಭಾಸವಾಯಿತು..ಓಹ್ !! ಕೊಡೆ ಎನ್ನುತ್ತ ಮತ್ತೆ ಮನೆಯೊಳಗೆ ಕಾಲಿಟ್ಟೆ.
" ಹಾ ಹಾ ಹಾ ನನ್ನನ್ನು ಬಿಟ್ಟು ಎಲ್ಲಿಗೆ ಹೋಗುತ್ತೀಯ ಮಗನೆ" ಕೊಡೆರಾಯನ ಜಂಭ ಬೇರೆ. ಸಾರಿ ಸರ್..ತಪ್ಪಾಯ್ತು ಎನ್ನುತ್ತಾ ಮೂಲೆಯಲ್ಲಿದ್ದ ಕೊಡೆರಾಯನನ್ನು (ಜೋಪಾನವಾಗಿ)ಎತ್ತಿಕೊಂಡು ಆಫೀಸ್ ನತ್ತ ಹೊರಟೆ ..ಏನು ಕೊಡೆಗೆ ಇಷ್ಟು ಕಾಳಜಿ ಅಂತ ಅಂದುಕೋಬೇಡಿ .ಇಲ್ಲಿ ಕೊಡೆಗೆ ರಾಜ ಮರ್ಯಾದೆ ಕೊಡ್ಲೆಬೇಕು... ಮಳೆಯ ಆರ್ಭಟದಲ್ಲಿ ನಮ್ಮ ತಲೆಯನ್ನು ಕಾಪಾಡೋದು ಅದೇ ಅಲ್ವ..ಬೇಗ ಬೇಗ ಆಟೋ ಹಿಡಿದು ಆಫೀಸನತ್ತ ಹೊರಟೆ..ರಸ್ತೆಯಲ್ಲಿ ಮಳೆಯ ನೀರಿನ ರಭಸ ಆಟೋ ನೇ ಕೊಚ್ಚಿಕೊಂಡು ಹೋಗೊವಷ್ಟು ಘರ್ಜಿಸುತ್ತಿತ್ತು ....ಆದರೂ ಆಟೋವಾಲಾ ವೇಗವಾಗಿ ಓಡಿಸಲು ಪ್ರಯತ್ನಿಸುತ್ತಲೆ ಇದ್ದ.ಅವರಿಗೆ ಈ ಮಳೆ ಮಾಮೂಲು.. ಮಳೆಯ ನೀರಿನ ಹನಿಗಳನ್ನು ತಪ್ಪಿಸಿಕೊಳ್ಳುತ್ತಾ ಕುಳಿತ ನನಗೆ, ಜೇಬಿನಲ್ಲಿದ್ದ ಮೊಬೈಲ್ ನಡುಗುತ್ತಿರುವ ಅನುಭವ .ಕಾಲ್ ..ಬೆಂಗಳೂರಿನಿಂದ :) .ಮಾತು ಮುಗಿಸುವಸ್ಟರಲ್ಲಿ ಆಟೊ ಆಫೀಸಗೆ ಬ0ದಾಗಿತ್ತು ... ಲಗು ಬುಗ ನೇ ಆಟೋದಿಂದ ಇಳಿದು ಗೆಳೆಯ ಕೊಡೆಯನ್ನು ಬಿಚ್ಚಿ ಆಫೀಸಿನತ್ತ ಓಡಿದೆ...
"ಸರ್ ಆಯ ಡಿ"
ಈ ಸೆಕ್ಯೂರಿಟೀಯವರೂ ಈ ಸಮಯದಲ್ಲೇ ತಡೀಬೆಕಾ..ನನ್ನ ಮುಖ ದಿನ ನೋಡಿದರೂ ಅವರಿಗೆ ದಿನಾ ಐಡೆಂಟಿಟೀ ಕಾರ್ಡ್ ತೋರೀಸ್ಬೇಕು...
ಅವನಿಗೆ ನನ್ನ ಪರಿಚಯ ಪತ್ರ ತೋರಿಸ್ತಾ ಲಿಫ್ಟ್ ನತ್ತ ಓಡಿದೆ..ಅಷ್ಟರಲ್ಲಿ ನನ್ನ ಜೊತೆ ಲಿಫ್ಟ್ ದೊಳಕ್ಕೆ ಸುಂದರ ಹುಡುಗಿ ನುಸುಳೋದನ್ನು ಕಂಡು ಸ್ವಲ್ಪ ಸ್ಟೈಲ್ ನಿಂದಾನೆ ಲಿಫ್ಟ್ ಒಳಗೆ ನುಸುಳಿದೆ.
ಮಳೆಯಿಂದ ಬಟ್ಟೆಯೆಲ್ಲಾ ಒದ್ದೆ ಮಾಡಿಕೊಂಡಿದ್ದ ನನಗೆ ಸ್ಟೈಲ್ ಬೇರೆ ಕೇಡು ಅಂತ ಆಕೆ ಅಂದುಕೊಂಡಿರೀಲಿಕ್ಕೂ ಸಾಕು..
"ಏನು ಮಾಡೋದು ಮೇಡಮ್ ..ಎಲ್ಲಾ ನನ್ನ ಗ್ರಹಚರಾ" ಕಣ್ಣಿನಿಂದಲೇ ಇಬ್ಬರು ಮಾತಾಡಿಕೊಂಡಿದ್ದೆವು ..
ಅವಳು ಮೊಬೈಲ್ ನಲ್ಲಿ ಬೂಸಿ ಆದ ಮೇಲೆ ನಾನು ಗತಿಯಿಲ್ಲದೇ ನನ್ನ ಮೊಬೈಲ್ ಗೋಸ್ಕರ ಜೇಬಿಗೆ ಕೈ ಹಾಕಿದೆ .
ಏನೋ ಜೇಬಿನಲ್ಲಿ ಇಲ್ಲಲ್ಲ ಅಂದುಕೊಂಡೇ..
ಅರೆ !! ನನ್ನ ಮೊಬೈಲ್ !!
ಲಿಫ್ಟ್ ಮುಚ್ಚುವಷ್ಟರಲ್ಲಿ ಅದರಿಂದ ಹೊರಗೆ ಬಂದು ಮೊಬೈಲ್ ಗಾಗಿ ಕಳವಳಿಸ ತೊಡಗಿದೆ..."ಗುರೂ ಹುಡುಗಿ ಸಕತ್ತಾಗಿದಳೆ ..ಬೆನ್ನತ್ತು" ..ಒಂದು ಮನಸ್ಸು ಚಡಪಡಿಸುತ್ತಿತ್ತು.. "ಓ!!! ಹುಡುಗಿ ಅಂತೆ ಹುಡುಗಿ ಮೊದಲು ಮೊಬೈಲ್ ಹುಡುಕು ಮಗನೆ .." ಮತ್ತೊಂದು ಮನಸು ನನ್ನನ್ನ ಎಚ್ಚರಿಸಿತ್ತು ..
"ಅಯ್ಯೋ ಎಲ್ಲಿ ಹೋಯಿತು ಇದೆ ಈಗ ಆಟೋ ದಲ್ಲಿ ಮಾತನಾಡಿದಿನಲ್ಲ " ತಲೆಯಲ್ಲಿ ನೂರಾರು ಯೋಚನೆಗಳು ನುಸುಳಿ ದಿಕ್ಕೆ ತೋಚದಂತಾಯಿತು..
ಹ್ಮ್ !!! ಆಟೋದಲ್ಲಿ ನಾನು ಮೊಬೈಲ್ ಬಿಟ್ಟೆನಾ??...ಹೌದು ಮನಸ್ಸು ದೃಢವಾದ ಮೇಲೆ ಮೊಬೈಲ್ ಗಾಗಿ ಆಟೋ ಹುಡುಕಲು ಓಡಿದೆ.... ಆದರೆ ಆತ ಆಗಲೇ ಅಲ್ಲಿಂದ ಜಾಗ ಕಿತ್ತಿದ್ದ... ಅವನ ಮುಖವೂ ನನಗೆ ಸರಿಯಾಗಿ ನೆನಪಿನಲ್ಲಿಲ್ಲವಲ್ಲ ಹೇಗೆ ಮಾಡುವುದು... ಬಹುಶಹ ಅವನು ಮತ್ತೆ ಆಟೋ ಸ್ಟ್ಯಾಂಡ್ ಗೆ ಹೋಗಿರ್ತಾನೆ ಅಂದುಕೊಂಡು ಅಲ್ಲೇ ಇದ್ದ ಮತ್ತೊಂದು ಆಟೋ ಹಿಡಿದು ಬಂದ ದಾರಿಗೆ ವಾಪಸ್ ನಡೆದೆ...
ಆಗಲೇ ಸ್ವಲ್ಪ ಶಾಂತ ಆಗಿದ್ದ ಮಳೆ ಮತ್ತೆ ಸುರಿಯತೊಡಗಿತು .ಮಳೆಯ ನೀರು ಒಳ ನುಸುಳಿ ಕಾಲಿಗೆ ತಾಕುತ್ತಿತ್ತು .ಮಳೆಗೆನು ಬಿಡಿ ಚೆಲ್ಲಾಟ .. ನನಗೆ ಪ್ರಾಣ ಸಂಕಟ !!.ನಾನು ಮಾತ್ರ ನನ್ನ ಇವತ್ತಿನ ಗ್ರಹಚಾರಕ್ಕೆ ಹಿಡಿ ಶಾಪ ಹಾಕುತ್ತಾ ಕುಳಿತೆ... ಮನಸ್ಸುಗಳ ತಾಕಲಾಟ ಆಗಲೆ ಶುರುವಾಗಿತ್ತು..ಒಂದು ಮನಸ್ಸು ನನ್ನ ಮೂರ್ಖ ತನಕ್ಕೆ ನನ್ನನ್ನು ಬಯ್ಯುತ್ತಿದ್ದರೆ ಇನ್ನೊಂದು ಇಷ್ಟೆಲ್ಲಾ ಆಗೋದಕ್ಕೆ ನನ್ನ ಫ್ರೆಂಡ್ ಕಾರಣ ಅಂತಾ ಆಗಲೇ ನನ್ನನ್ನ ಉಳಿಸೊಕೆ ಪ್ರಯತ್ನಿಸುತ್ತಿತ್ತು.. ತಪ್ಪು ಮಾಡಿದ ಮೇಲೆ ಯಾವುದೋ ಕಾರಣ ಹೇಳಿ ನುನುಚಿಕೊಳ್ಳೋದು ತುಂಬಾ ಸುಲಭ !!.ಹೀಗೆ ನೂರೆಂಟು ವಿಚಾರಗಳು ಮನಸಿನ್ನಲಿ ಕೋಲಾಹಲ ಎಬ್ಬಿಸುವ ಹೊತ್ತಿಗೆ ನಾನು ಹತ್ತಿದ ಆಟೋ ಸ್ಟ್ಯಾಂಡ್ ಸಮೀಪಿಸಿತು ..ಆಟೋ ಸ್ಟ್ಯಾಂಡ್ ಗೆ ಹೋಗಿ ನೋಡಿದ್ರೆ ಆತನ ಮುಖ ನನಗೆ ಎಲ್ಲಿಯೂ ಕಾಣಿಸ್ತಿಲ್ಲ...!!! ಅಲ್ಲೇ ಇದ್ದ ಆಟೋದವರು ಎಲ್ಲಿಗೆ ಹೋಗ್‌ಬೇಕು ಅಂತಾ ಕೇಳೋಕೆ ಬಂದರು... ನನಗೋ ಅವರ ಭಾಷೆ ಮಲಯಾಳಂ ಬರಲ್ಲ..ಹಿಂದಿ ,ಇಂಗ್ಲೀಶ್ ಅವರಿಗೆ ಅರ್ಥ ಆಗಲ್ಲ !!!...ಹೇಗಾಗೀರ್ಬೇಡ ನನ್ನ ಪರಿಸ್ಥಿತಿ.. ಏನೋ ನನ್ನ ಸಂಕಟ ಅವರಿಗೆ ಅರ್ಥ ಮಾಡಿಸಿದೆ.....ಮಳೆಯ ರಭಸ ಇನ್ನೂ ಜೋರಾಯಿತು ...ನನಗೆ ಗೊತ್ತಿರದೇ ಕೊಡೆ ಕೆಳಗೆ ಸರಿದು ತಲೆಯೆಲ್ಲಾ ನೀರುಮಯವಾಗಿತ್ತು ..ನನಗೋ ಮೊಬೈಲ್ ದೇ ದ್ಯಾನ ...ಅವರವರು ಏನೋ ಮಲಯಾಳಂನಲ್ಲಿ ಮಾತಾಡಿಕೊಂಡು ನನ್ನ ಹತ್ತಿರ ಬಂದು ಅವನ ಮುಖ ಪರಿಚಯ ಹೇಳುವಂತೆ ಕೇಳಿದರು.. ನಾನು ಆಟೋದಲ್ಲಿ ಅವನ ಜೊತೆ 20 ನಿಮಿಷ ಇದ್ದರೂ ಅವನ ಮುಖ ಸರಿಯಾಗಿ ನೋಡಿರಲಿಲ್ಲ... ಅದೂ ಈ ಐ ಟಿ ಇಂಡಸ್ಟ್ರಿಗೆ ಬಂದ ಮೇಲೆ ಮೆದುಳು ಕೆಲ್ಸಾ ಮಾಡೋದೆ ನಿಲ್ಲಿಸಿ ಬಿಟ್ಟಿದೆ!!!...ತಲೆಲಿ ಅವನ ಮುಖಾನೆ ಜ್ಞಾಪಕಕ್ಕೆ ಬರ್ತಿಲ್ಲ...
ನನ್ನನ್ನು ನಾನೇ ಬಯ್ಕೊನ್ದು ಅವರಿಗೆ ಹೇಗೋ ಮುಖ ಪರಿಚಯ ಹೇಳಿದೆ.. ಅವರಿಗೆ ನನ್ನ ಭಾಷೆ ಅರ್ಥವಾಗದಿದ್ರೂ ನನ್ನ ಸಮಸ್ಯೆ ಏನು ಅನ್ನೋದು ತಿಳಿದಿತ್ತು ..ಅವರು ನನ್ನನು ಅಲ್ಲೇ ನಿಲ್ಲಿಸಿ ಆ ಆಟೋಗಾಗಿ ಕಾಯುವಂತೆ ಹೇಳಿ ಬಂದ ಗಿರಾಕೀ ಜೊತೆ ತಮ್ಮ ಕಾಯಕ ಮುಂದುವರೆಸಿದರು... ನಾನು ಮಾತ್ರ ನನ್ನ ಹಣೆಬರಹ ನೆನೆದುಕೊಂಡು ಮಳೆಯಲ್ಲಿ ನೆನೆಯುತ್ತಾ ನಿಂತೆ...
ಬೆಂಗಳೂರಲ್ಲಿ ಒಂದು ಸಲ ಮೊಬೈಲ್ ಕಳೆದುಕೊಂಡರೂ ಇಷ್ಟು ದು:ಖ ಆಗಿರಲಿಲ್ಲ... ಆದರೆ ಈ ಸಲ ದಿಕ್ಕೆ ತೋಚದಂತಾಗಿತ್ತು... ಈ ಎಲ್ಲದರ ಮೇಲೆ ಘರ್ಜಿಸುವ ಮಳೆ ಬೇರೆ ... ಅಲ್ಲೇ ಶೂ ಅಂಗಡಿಯ ಮುಂದೆ ಇದ್ದ ಕಾಯಿನ್ ಬಾಕ್ಸ್ ನೋಡಿ ನನ್ನ ಮೊಬೈಲ್ ಗೆ ಕರೆ ಮಾಡಿ ಪ್ರಯತ್ನಿಸಬೇಕು ಅನ್ನಿಸಿತು..ಬೆಂಗಳೂರಲ್ಲಿ ಆಗೀದ್ರೆ ಕಳೆದ 5 ಸೆಕೆಂಡುಗಳಲ್ಲೇ ಮೊಬೈಲ್ ಸ್ವಿಚ ಆಫ್ ಆಗಿರುತ್ತೆ...ಇಲ್ಲಿಯ ಪರಿಸ್ಥಿತಿ ಹೇಗೋ ಅಂದುಗೊಂಡು ನನ್ನ ನಂಬರ್ ಅದುಮಿದೆ...ರಿಂಗ್ ಸದ್ದು ಕೇಳಿ ಕಳೆದು ಹೋದ ಮೂಲೆಯಲ್ಲಿದ್ದ ಸಣ್ಣ ಆಶಾಗೋಪುರ ದೊಡ್ಡದಾಗುತ್ತಿರುವಂತೆ ಗೋಚರಿಸಿತು... ಆತ ಕಾಲ್ ಎತ್ತಿಕೊಂಡು ಮಲಯಾಳಂನಲ್ಲಿ ಏನೋ ಹೇಳಿದ... ನಾನು ಅವನಿಗೆ ಹಿಂದಿಯಲ್ಲಿ ಮೊಬೈಲ್ ಹಿಂತಿರುಗಿಸಲು ಕೇಳಿಕೊಂಡೆ...ಅವನಿಗೆ ಅರ್ಥ ಆಯಿತೋ ಇಲ್ಲೊ ನನಗೆ ಗೊತ್ತಿಲ್ಲ.. ಅವನು ಕಾಲ್ ಕಟ್ ಮಾಡಿದ....
ಯಾರೋ ಆಟೋದವನು ನನ್ನ ಹತ್ತಿರ ಬರುವುದು ಗೋಚರಿಸಿತು..ಇವನೇ ಇರಬಹುದಾ ಎಂದು ಅಂದುಕೊಳ್ಳುತ್ತಿದ್ದಂತೆಯೇ ಆತ ಹರುಕು ಮುರುಕು ಹಿಂದಿಯಲ್ಲಿ ನನ್ನ ಕಷ್ಟ ಕೇಳಿದ ...ನಾನು ಅವನಿಗೆ ನನ್ನ ಪರಿಸ್ಥಿತಿ ಹೇಳಿದೆ... ಅವನ ಜೊತೆ ಮಾತನಾಡುವಂತೆ ಕೇಳಿಕೊಂಡೆ..ಅವನು ನನ್ನ ನ0ಬರ ಗೆ ಕರೆ ಮಾಡಿ ಅವನು ಯಾರು ಎಂದು ವಿಚಾರಿಸುತ್ತಿರುವಂತೆ ಗೋಚರಿಸಿತು...
ಅವನು ತನ್ನ ಹೆಸರು ಹೇಳದೇ ಕಾಲ್ ಕಟ್ ಮಾಡಿದ ಸರ್ ಎಂದು ಹೇಳಿ ಆತನೂ ಜಾಗ ಕಿತ್ತ !! ಇದ್ದ ಸ್ವಲ್ಪ ಆಶಾ ಗೋಪುರವೂ ಕರಗಿ ಹೋಯಿತು... ಮಳೆ ಮಾತ್ರ ತನೆಗೆ ಯಾರ ಪರಿಯೂ ಇಲ್ಲ ಎಂಬಂತೆ ತನ್ನ ಆರ್ಭಟ ಮುನ್ದುವರೆಸಿತ್ತು ...ನಾನು ಇನ್ನೊನ್ದು ಸಲ ಪ್ರಯತ್ನಿಸ್‌ಬೇಕು ಎಂದು ಕಾಲ್ ಮಾಡಿದೆ...ರಿಂಗ್ ಸದ್ದು ...... ಎರಡು ಮೂರು ಸಲ ಪ್ರಯತ್ನಿಸಿ ನಾನು ನನ್ನ ಮೊಬೈಲ್ ಆಸೆ ಬಿಟ್ಟೆ... ಇನ್ನು ಅಣ್ಣನಿಗೆ ಅಪ್ಪ ಅಮ್ಮನಿಗೆ ಮೊಬೈಲ್ ಕಳೆದದ್ದು ಹೇಗೆ ಹೇಳೋದು ಅಂತ ನನಗೆ ಅರಿವು ಇರದೇ ತಲೆಯಲ್ಲಿನ ನನ್ನ ಕಿರಾತಕ ಬುದ್ಡಿ ನಾನಾ ತರಹದ ಸ್ಕೆಚ್ ಹಾಕುತ್ತಿತ್ತು...ಬೇಗ ಬೇಗ ಸಿಮ್ ರದ್ದು ಮಾಡಿಸಿ ಬೇರೆ ಮೊಬೈಲ್ ತಗೆದುಕೊಂಡರೆ ಮನೇಲಿ ಗೊತ್ತಾಗಲ್ಲ ಅನ್ನೋ ನಿರ್ಧಾರಕ್ಕೆ ಬಂದೆ ....
ಅಷ್ಟರಲ್ಲಿ ಹತ್ತಿರದಿನ್ದ ಗ0ಟೆಯ ಸದ್ದು.
ಓಹ್ ... ನನ್ನ ಸೈಡ್ ನಲ್ಲಿದ್ದ ಆ ಕಾಯಿನ್ ಬಾಕ್ಸ್ ರಿಂಗ್ ಆಗ್ತಾ ಇತ್ತು...ಆತನೇ ಕರೆ ಮಾಡಿ ನಾನು ಎಲ್ಲೀದೀನಿ ಅಂತ ಕೇಳೋಕೆ ಕರೆ ಮಾಡಿರಬಹುದೆ...ವಿಚಾರ ಮಾಡುವಷ್ಟರಲ್ಲಿ ಕೈ ಕರೆ ಎತ್ತಿಯಾಗಿತ್ತು..ಆ ಕಡೆಯಿಂದ ಮಲಯಾಳಂನಲ್ಲಿ ಏನೋ ಹೇಳುತ್ತಿರುವ ಸದ್ದು .... ಆದರೇನಂತೆ ನನ್ನ ಕಷ್ಟ ಅವನಿಗೆ ಹೇಳಿ ಅವನನ್ನು ಇಲ್ಲಿ ಬರೋಕೆ ಹೇಳ್ಬೇಕು ಅಂತ ನಿರ್ಧರಿಸಿ ನಾನು ಆಟೋ ಸ್ಟಾಪ್ ಲ್ಲಿ ಅವನಿಗಾಗಿ ಕಾಯುತ್ತಿರುವದನ್ನು ಹೇಳಿದೆ ....
ನನ್ನ ಮಾತಿನಿಂದ ಕರೆ ಮಾಡಿರುವಾತ ವಿಚಿಲಿತನಾಗಿ ತನ್ನ ಅಲ್ಪ ಸಲ್ಪ ಹಿಂದಿ ಜ್ಞಾನ ಉಪಯೋಗಿಸಿ ಎ ಶೂ ಶಾಪ್ ನಹಿ ಕ್ಯಾ ಅನ್ನುತ್ತಾ ಕರೆ ಕಟ್ ಮಾಡಿದ !!...
ಓಹ್ ...ಈತ ಬೇರೆ ಯಾವನೋ ... ಆತ ಕೇಳಿದ ಅಂಗಡಿ ಮುಂದೆಯೇ ಈ ಕಾಯಿನ್ ಬಾಕ್ಸ್ ಇದ್ದದು ನನಗೆ ಆಮೇಲೆ ಗಮನಕ್ಕೆ ಬಂತು.. ಆತ ಕರೆ ಮಾಡಿದ್ದು ಸರಿಯಾದ ಸ್ಥಳಕ್ಕೆ ,,,ಆದರೆ ಕರೆ ರಿಸೀವ್ ಮಾಡಿದ್ದು ಮಾತ್ರ ರಾಂಗ್ ಪರ್ಸನ್. !!!
ಇನ್ನು ನನ್ನ ಆಫೀಸ್ ಗೆಳೆಯರಿಂದ ( ಮಳಯಾಲಮ ಬಲ್ಲವರು ) ನನ್ನ ನಂಬರ್ ಗೆ ಕಾಲ್ ಮಾಡಿಸಿ ಅವನಿಗೆ ತಿಳಿ ಹೇಳಿಸಬೆಕೆನ್ದು ನಿರ್ಧರಿಸಿದೆ.. ಆದರೆ ಆಫಿಸ ನಮ್ಬರ ಸಹ ಮೊಬೈಲ ಗೆಳೆಯನಿಗೆನೆ ಗೊತ್ತಿತ್ತು .. ನನ್ನ ಜೇಬಿನಲ್ಲಿದ್ದ ವಿಸಿಟಿಂಗ್ ಕಾರ್ಡ್ ನಲ್ಲಿ ಆಫೀಸ್ ನಂಬರ್ ಇದ್ದರೂ ಆಗ ಮಾತ್ರ ನನಗೆ ಅದರ ಪರಿವೆ ಇರಲಿಲ್ಲ ..!!!
ಇಷ್ಟೆಲ್ಲಾ ಆಗುವಷ್ಟೆರಲ್ಲಿ ಮದ್ಯಾನ್ಹ 1 ಘಂಟೆಯಾಗಿತ್ತು...ಹೊಟ್ಟೆಗೆ ಬೆಳಗ್ಗೆ ಯಿಂದಲೂ ತಿಂಡಿಯಿಲ್ಲ..ಆಫೀಸಗೆ ಹೋಗೋದoತೂ ಮರೆತೆ ಬಿಟ್ಟಿದ್ದೆ...ಪ್ರತಿಯೊಂದು ಆಟೋ ನನ್ನ ಹತ್ತಿರ ಬಂದಾಗಲೆಲ್ಲ ನಾನು ಆಸೆಗನ್ನಿನಿoದ ನೋಡುತ್ತಿದ್ದೆ ..ಆದರೆ ಅದೃಷ್ಟ ನನ್ನ ಜೊತೆಗಿರಲಿಲ್ಲ ... ಮಳೆ ಮಾತ್ರ ಯಾವುದೂ ಪರಿವಿಲ್ಲದೇ ತನ್ನ ಕಾಯಕ ಮುನ್ದುವರೆಸಿತ್ತು ....
ಇನ್ನು ಇಷ್ಟೆಲ್ಲಾ ಆದ ಮೇಲೆ ಆಫಿಸ ಗೆ ಹೊಗೊದರಲ್ಲಿ ಅರ್ಥ ಇಲ್ಲ ಎ0ದುಕೊನ್ಡು ಮನೆಯ ಕಡೆಗೆ ಹೆಜ್ಜೆ ಹಾಕತೊಡಗಿದೆ...
"ಚೆಟ.... ಇನ್ನೊಮ್ಮೆ ಕಾಲ್ ಮಾಡಿ ನಾನು ಟ್ರೈ ಮಾಡ್ತೀನಿ " ನನ್ನ ಸ್ಥಿತಿ ನೋಡದೆ ಅಲ್ಲಿಯೇ ಇದ್ದ ಆಟೋದವನು ಹತ್ತಿರ ಬಂದ ...ಮತ್ತೆ ನನ್ನ ನಂಬರ್ ಗೆ ಕಾಲ್ ಮಾಡಿದೆ.ಮತ್ತೆ ರಿಂಗ್ ಸದ್ದು.ಇಬ್ಬರು ಏನೋ ಮಾತಾಡಿದರು.. ಈತ ಮಾತ್ರ ಅವನಿಗೆ ಹೆದರಿಸುತ್ತಿರುವಂತೆ ನನಗೆ ಭಾಸವಾಯಿತು..ನಾನು ಪೇಚು ಮೊರೆ ಹಾಕಿಕೊಂಡು ನಿಂತಿದ್ದೆ..ಪುಣ್ಯಕ್ಕೆ ಅಲ್ಲಿ ಯಾವ ದೇವಸ್ಥಾನವೂ ಪಕ್ಕದಲ್ಲಿ ಇರ್ಲಿಲ್ಲ ..ಇಲ್ಲದಿದ್ರೆ ಒನ್ದೆರಡು ನಾಣ್ಯ ಹಾಕಿರೋರು !!! .. " ಚೆಟಾ ಆತ ತನ್ನ ಹೆಸರನ್ನು ಹೇಳ್ತಾ ಇಲ್ಲ ..ಆದರೂ ನಾನು ಅವನಿಗೆ ನೀವು ಪೋಲೀಸ್ ಕಂಪ್ಲೇಂಟ್ ಕೊಟ್ಟಿದೀರಿ.. ಮೊಬೈಲ್ ತಂದು ಕೊಡದಿದ್ರೆ ನಿನ್ನನು ಪೋಲೀಸ್ ನವರು ಬಿಡಲ್ಲ ಅಂತ ಹೇಳಿದೀನಿ "ಎನ್ನುತ್ತಾ ಆತನೂ ಕಾಲ್ಕಿತ್ತ .ನನಗಂತು ಈ ಎಲ್ಲಾ ಹೆದರಿಕೆಗೆ ಅವನು ಹೆದರೋಲ್ಲ ಅಂತ ಖಾತ್ರಿಯಾಗಿತ್ತು.ಕೊಡೆಯನ್ನು ಬಿಡಿಸಿ ನನ್ನ ಇವತ್ತಿನ ಗ್ರಹಚಾರಕ್ಕೆ ಶಾಪ ಹಾಕುತ್ತಾ ರೂಮಿನ ಕಡೆ ಹೆಜ್ಜೆ ಹಾಕಿದೆ.ನನಗೆ ಕರೆ ಮಾಡಿದ ಫ್ರೆಂಡ್ ಗೂ ಶಾಪ ಹಾಕಿದೆ .ಅತಿ ಪಕ್ಕದಲ್ಲೇ ಒಂದು ಆಟೋ ಹಾದು ಹೋಗಿ ನನ್ನ ಮೇಲೆ ನೀರು ಎರಗಿತು.ಅದರ ಪರಿವೆ ನನಗಿರಲಿಲ್ಲ ..
"ಚೆಟಾ...." ಅದೇ ಅಟೊದಿನ್ದ ಇಳಿದ ವ್ಯಕ್ತಿ ನನ್ನನ್ನು ಕರೆದ..ಮಲಯಳದಲ್ಲಿ ಚೆಟಾ ಅಂದರೆ ಸಹೋದರ ಎಂದರ್ಥ. ಆ ಮುಖ ನನಗೆ ಎಲ್ಲಿಯೋ ಪರಿಚಿತ ಅನಿಸಿತು...ಅವನು ಹತ್ತಿರ ಬಂದು ತನ್ನ ಜೇಬಿನೊಳಗೆ ಕೈ ಹಾಕಿ ಏನೋ ಹೊರ ತಗೆಯುತ್ತಿರುವನ್ತೆ ಕಾಣಿಸಿತು
"..ಅ ರ ರೇ ... ನನ್ನ ಮೊಬೈಲ್ ....ಹೌದು.. ಇದೆ ಆಟೋದಲ್ಲಿ ನಾನು ಮೊಬೈಲ್ ಬಿಟ್ಟದ್ದು "
( ಮೊಬೈಲ್ ನೋಡಿದ ಮೇಲೆ ನನಗೆ ಅವನ ಮುಖ ಪರಿಚಯ ಸಿಕ್ಟು... ಈ ಐ ಟಿ ತಲೆನೇ ಹಿಂಗೆ ...GOOGLE ನಲ್ಲಿ ಬೇಕಾದ ಕೋಡ್ ನೋಡಿದ ಮೇಲೆ ಲಾಜಿಕ್ ತಲೆಲಿ ಹೊಳೆಯುವಂತೆ !!! ) ...
ನನ್ನ ಕಣ್ಣನ್ನು ನಾನೇ ನಂಬದಾದೆ ..ಅವನು ಯಾಕೆ ಇಷ್ಟು ಲೇಟ್ ಮಾಡಿದ ಅಥವಾ ಪೋಲೀಸ್ ಹೆದರಿಕೆ ಇಲ್ಲಿ ವರ್ಕ್ ಆಯ್ತಾ .ಓ ..ಬಿಡು ನನ್ನ ಮೊಬೈಲ್ ನನಗೆ ಸಿಕ್ತಲ್ಲಾ ..... ಅವನಿಗೆ ಸ್ವಲ್ಪ ಬಕ್ಷೀಶು ಕೊಟ್ಟೆ ......
ಆಹಾ ಕಳೆದು ಹೋದ ನನ್ನ ಮೊಬೈಲ್ ಮತ್ತೆ ನಂಗೆ ಸಿಕ್ತು ... ಆತಂಕ ನಿರಾಶೆ ಮತ್ತೆ ಖುಷಿಯಾಗಿ ಮಾರ್ಪಾಡಾಗಿತ್ತು ... ಮಳೆ ಯ ಹನಿಗಳು ಕಾರಂಜಿಯ ಹನಿಗಳಂತೆ ಭಾಸವಾಯಿತು.ಆಗಲೇ ಅಪರಿಚಿತರ ಕೈಯಲ್ಲಿ ಹೆದರಿದಂತೆ ಕಾಣುತ್ತಿದ್ದ ನನ್ನ ಮೊಬೈಲ್ ಕೈಯಲ್ಲಿ ಬಂದ ತಕ್ಷಣ ಜೇಬಿನಲ್ಲಿ ಬೆಚ್ಚನೆ ಜಾರಿ ನಿದ್ರೆ ಹೋಯಿತು ...... ಇಲ್ಲಿ ಜನ ಇನ್ನೂ ಬೆಂಗಳೂರನಷ್ಟು ಜಾಣರಲ್ಲ ಎಂದು ಮನಸ್ಸಿನಲ್ಲಿ ಮುಗುಳ್ನಾಗುತ್ತಾ ಆಫೀಸ್ ನತ್ತ ನಡೆದೆ
12 comments:
Sudheer sir,
Superb!!!
I really enjoyed reading this.
I was feeling like as of you are telling me actually in Bijapur kannada.
Really Good One!!!
Thanks to Mallu Patil for sending me this link.
Yours,
Shivashankar Burge
BE(ECE) - 2006
BLDEA Bijapur.
awesome bro.. very neat n clear narration...enjoyed.
Thanks Shivu.. keep reading.. :)
Anup,
Thanks for your comment.. hope ll keep ur expectations in my next blogs also
u should be a novelist. Narration is gripping n engaging. It’s really funny where u have tried to make it n puts a smile on readers’ face. Keep writing.
hi Jay..
Thank u :)..ll upload some more blogs soon...keep reading
Truly awesome yaar.. Everything is so neatly picturised.. Hope to see more blogs in future..
ಶೀರ್ಷಿಕೆ ಓದಲು ಹಾತೊರೆಯುವಂತೆ ಮಾಡುತ್ತೆ. ಬರೆಯುವ ರೀತಿ ತುಂಬಾನೆ ಚನ್ನಾಗಿದೆ.
hi Supriya, Shrini,
Thanks 4 reading ....Heege odutta iri :)
superb narration!! ur wordings r too gud..especially i loved d way u hav described dat kode maharaya!![:D] u hav got gr8 talent!!
Yash,
Thank u ..Konegu nan blog odiddakke..keep reading :)
nimma bareyo style tumba chennagide. ivattu nim blog odakke tiem siktu :-). heege bareeta iri
@Rashmi
Thanks :)
Post a Comment